Advertisement

ಚಿಕ್ಕಬಳ್ಳಾಪುರ ಸಮಗ್ರ ಅಭಿವೃದ್ಧಿಗೆ ಒತ್ತು; ಸಚಿವ ಡಾ.ಕೆ.ಸುಧಾಕರ್‌

06:19 PM May 20, 2022 | Team Udayavani |

ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತ ಪರಿಕಲ್ಪನೆಗೆ ಪೂರಕವಾಗಿ, ಚಿಕ್ಕಬಳ್ಳಾಪುರದ ಮಂಚೇನಹಳ್ಳಿ ಯಲ್ಲಿ ವಿಶ್ವದರ್ಜೆಯ ಜವಳಿ ಪಾರ್ಕ್‌ ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಮನವಿ ಸಲ್ಲಿಸಿದ್ದಾರೆ.

Advertisement

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್‌ ಗೋಯಲ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸಚಿವರು ಕರ್ನಾಟಕವು, ದೇಶದ ಒಟ್ಟು ಕಚ್ಚಾ ರೇಷ್ಮೆ ಉತ್ಪಾದನೆಯಲ್ಲಿ ಶೇ.65, ಉಣ್ಣೆ ಉತ್ಪಾದನೆಯಲ್ಲಿ ಶೇ.12, ಹತ್ತಿಯಲ್ಲಿ ಶೇ.6 ರಷ್ಟು ಪಾಲು ಹೊಂದಿದೆ. ರಾಜ್ಯದಲ್ಲಿ 40 ಸಾವಿರ ಕೈ ಮಗ್ಗ ಹಾಗೂ 1.20 ಲಕ್ಷ ವಿದ್ಯುತ್‌ ಮಗ್ಗಗಳಿವೆ. ವಸ್ತ್ರೋದ್ಯಮದಲ್ಲಿ ರಾಜ್ಯವು ಮುಂಚೂಣಿಯಲ್ಲಿದ್ದು, ಭಾರತದ ಗಾರ್ಮೆಂಟ್‌ ರಾಜಧಾನಿ ಎಂಬ ಖ್ಯಾತಿ ಹೊಂದಿದೆ. ಈ
ಉದ್ಯಮವನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ‘ನೂತನ ಟೆಕ್ಸ್‌ ಟೈಲ್‌ ಮತ್ತು ಗಾರ್ಮೆಂಟ್‌ ನೀತಿ 2019-24’ ಜಾರಿ ಮಾಡಿದೆ. ಮುಂದಿನ 5 ವರ್ಷಗಳಲ್ಲಿ 10,000 ಕೋಟಿ ರೂ. ಹೂಡಿಕೆಯೊಂದಿಗೆ 5 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯನ್ನು ಈ ನೀತಿ ಹೊಂದಿದೆ ಎಂದು ಸಚಿವರು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯು ರೇಷ್ಮೆ ಉತ್ಪಾದನೆಯಲ್ಲಿ ಪ್ರಮುಖ ಸ್ಥಾನ ಹೊಂದಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವ ಹಾಗೂ ರಾಷ್ಟ್ರೀಯ ಹೆದ್ದಾರಿ ಹೊಂದಿರುವ ಜಿಲ್ಲೆಯು, ರೇಷ್ಮೆ ಕೃಷಿ ಕಾಲೇಜನ್ನೂ ಒಳಗೊಂಡಿದೆ. ಜತೆಗೆ ವಸ್ತ್ರೋದ್ಯಮದ ಕೌಶಲ್ಯ ಹೊಂದಿ ದವರೂ ಇಲ್ಲಿದ್ದಾರೆ. ಈ ಎಲ್ಲ ಕಾರಣಗಳಿಂದ ಜಿಲ್ಲೆಯ ಮಂಚೇನ ಹಳ್ಳಿಯು ಜವಳಿ ಪಾರ್ಕ್‌ ಸ್ಥಾಪಿಸಲು ಸೂಕ್ತವಾದ ತಾಣವಾಗಿದೆ. ಈ ಕುರಿತು ಕ್ರಮ ವಹಿಸಬೇಕೆಂದು ಸಚಿವರು ಕೋರಿದ್ದಾರೆ.

ಹತ್ತಿ ಹಾಗೂ ರೇಷ್ಮೆಯಿಂದ ನೂಲು, ನೂಲಿನಿಂದ ವಸ್ತ್ರೋದ್ಯಮ ಹಾಗೂ ಫ್ಯಾಶನ್‌ ಕ್ಷೇತ್ರದ ಬೆಳವಣಿಗೆ ಹಾಗೂ ಈ ಮೂಲಕ ರಫ್ತು ವಹಿವಾಟು ನಡೆಸುವ ಮಟ್ಟಿಗೆ ಕೈಗಾರಿಕಾ ವಲಯ ಬೆಳೆಸಲು ಈ ಪಾರ್ಕ್‌ ಸ್ಥಾಪನೆ ನಾಂದಿ ಹಾಡಲಿದೆ. ಕೃಷಿ ಭೂಮಿಯಿಂದ ಆರಂಭವಾಗಿ ಮಾರುಕಟ್ಟೆಯವರೆಗೆ ಮೌಲ್ಯವರ್ಧನೆಯ ಎಲ್ಲಾ ಹಂತಗಳನ್ನು ಒಂದೆಡೆ ತರುವ ಜವಳಿ ಪಾರ್ಕ್‌ ಇದಾಗಲಿದೆ ಎಂದು ಸಚಿವರು ತಿಳಿಸಿದರು.

ಸ್ಮಾರ್ಟ್‌ ಸ್ಯಾಟ್ಲೆ ಟ್‌ ಟೌನ್‌: ಬೆಂಗಳೂರು ನಗರದ ಉಪನಗರವಾಗಿ ಚಿಕ್ಕಬಳ್ಳಾಪುರ ಅಭಿವೃದ್ಧಿಪಡಿಸಲು ‘ಸ್ಮಾರ್ಟ್‌ ಸ್ಯಾಟ್ಲೆ ಟ್‌ ಟೌನ್‌’ ಪ್ರಾಯೋಗಿಕ ಯೋಜನೆಯನ್ನು ಜಾರಿ ಮಾಡಲು ಸಚಿವ ಡಾ.ಕೆ. ಸುಧಾಕರ್‌ ಕೇಂದ್ರ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿದ್ದಾರೆ. ಕೇಂದ್ರ ನಗರ ವ್ಯವಹಾರಗಳ ಸಚಿವ ಹದೀìಪ್‌ ಸಿಂಗ್‌ ಪುರಿ ಅವರನ್ನು ಭೇಟಿ ಮಾಡಿದ ಸಚಿವ ಡಾ.ಕೆ.ಸುಧಾಕರ್‌, ಈ ಕುರಿತು ಚರ್ಚೆ ನಡೆಸಿದರು. ಚಿಕ್ಕಬಳ್ಳಾಪುರ ಬೆಂಗಳೂರು ನಗರಕ್ಕೆ ಸಮೀಪದಲ್ಲಿದ್ದು, ಇದನ್ನು ಸ್ಯಾಟ್ಲೆಟ್‌ ಟೌನ್‌ ಆಗಿ ಅಭಿವೃದ್ಧಿಪಡಿಸಬಹುದು. ಇದಕ್ಕಾಗಿ ಪ್ರಾಯೋಗಿಕ ಯೋಜನೆ ಮಾಡಬಹುದು ಎಂದು ಸಚಿವ ಡಾ.ಕೆ. ಸುಧಾಕರ್‌, ಕೇಂದ್ರ ಸಚಿವರಿಗೆ ತಿಳಿಸಿದರು.ಇದೇ ವೇಳೆ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಅವರನ್ನು ಸಚಿವ ಡಾ.ಕೆ.ಸುಧಾಕರ್‌ ಭೇಟಿ ಮಾಡಿ ಮಾತುಕತೆ ನಡೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next