Advertisement
ರಾಜ್ಯದ ಒಟ್ಟು ಭೌಗೋಳಿಕ ವಿಸ್ತೀರ್ಣಕ್ಕೆ ಅನುಗುಣವಾಗಿ ಇರಬೇಕಾದ ಹಸಿರು ವಲಯ ಇಲ್ಲದಿರುವುದು. ಅಲ್ಲದೇ ಪ್ರತಿ ವರ್ಷ ಇರುವ ಅರಣ್ಯ ಪ್ರದೇಶದ ವಿಸ್ತೀರ್ಣ ಕಡಿಮೆಯಾಗುತ್ತ¤ ಹೋಗುತ್ತಿರುವುದರಿಂದ ಸರಕಾರಿ ಜಮೀನು ಹಾಗೂ ಖಾಸಗಿ ವ್ಯಕ್ತಿಗಳ ವಿಶೇಷವಾಗಿ ರೈತರ ಜಮೀನಿನಲ್ಲಿ ಅರಣ್ಯದ ಮರಗಳನ್ನು ಬೆಳೆಸಲು ಪ್ರೋತ್ಸಾಹಿಸಲು ಅರಣ್ಯ ಇಲಾಖೆ ಯೋಜನೆ ರೂಪಿಸುತ್ತಿದೆ.
ಪ್ರಸ್ತುತ ರಾಜ್ಯದಲ್ಲಿ 41590 ಚದುರ ಕಿಲೋ ಮೀಟರ್ ಅರಣ್ಯ ಪ್ರದೇಶವಿದೆ. ಇರುವ ಅರಣ್ಯ ಪ್ರದೇಶದಲ್ಲಿ ಕಾಡು ವಿಸ್ತರಣೆ ಮಾಡಲು ಸಾಧ್ಯವಾಗುತ್ತಿಲ್ಲ ಹೀಗಾಗಿ ಅರಣ್ಯ ಪ್ರದೇಶ ಹೊರತಾಗಿ ಕಾಡು ಬೆಳೆಸಲು ರೈತರಿಗೆ ಪ್ರೋತ್ಸಾಹಿಸಲು ಅರಣ್ಯ ಇಲಾಖೆ ಮುಂದಾಗಿದೆ. ಕಾನೂನು ನಿರ್ಬಂಧ ಸಡಿಲಿಕೆ
ಕೃಷಿ ಅರಣ್ಯ ಬೆಳೆಗಳನ್ನು ಬೆಳೆಯಲು ರೈತರಿಗೆ ಪ್ರೊತ್ಸಾಹ ನೀಡಲು ಇಲಾಖೆ ಯೋಜನೆ ರೂಪಿಸುತ್ತಿದೆ. ರೈತರು ತಮ್ಮ ಸ್ವಂತ ಜಮೀನಿನಲ್ಲಿ ಶ್ರೀಗಂಧ, ಸಾಗವಾನಿ, ಮತ್ತಿ, ಹೆಬ್ಬೇವು, ಹೊನ್ನೆ ಸೇರಿದಂತೆ ಇತರ ಅರಣ್ಯ ಬೆಳೆ ಬೆಳೆಯಲು ಅರಣ್ಯ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ತರಲು ಅರಣ್ಯ ಇಲಾಖೆ ಮುಂದಾಗಿದೆ.
Related Articles
Advertisement
ಈ ಹಿನ್ನೆಲೆಯಲ್ಲಿ ಕೃಷಿ ಸಚಿವ ಉಮೇಶ್ ಕತ್ತಿ ಶೀಘ್ರವೇ ಅರಣ್ಯ ಕೃಷಿ ಮಾಡುವ ರೈತರೊಂದಿಗೆ ಸಭೆ ನಡೆಸಿ, ರೈತರು ಹೊಲ ಗದ್ದೆಗಳಲ್ಲಿ ಅರಣ್ಯದ ಸಸಿಗಳನ್ನು ಬೆಳೆಯಲು ಇರುವ ಸಮಸ್ಯೆಗಳು, ರೈತರು ಅರಣ್ಯ ಸಸಿಗಳನ್ನು ಬೆಳೆದರೆ, ಕಟಾವು ಹಾಗೂ ಮಾರಾಟ ಮಾಡಲು ಇರುವ ನಿಬಂìಧಗಳಿಂದ ರೈತರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿ, ಕಾನೂನು ತಿದ್ದುಪಡಿ ಮಾಡಲು ಮುಂದಾಗಿದೆ.
ರೈತರು ತಮ್ಮ ಹೊಲದಲ್ಲಿ ಶ್ರೀಗಂಧ, ಸಾಗವಾನಿ ಸೇರಿದಂತೆ 62 ನಮೂನೆಯ ಅರಣ್ಯ ಸಸಿಗಳನ್ನು ಬೆಳೆದು ಕಟಾವು ಮಾಡಿ ಮಾರಾಟ ಮಾಡಲು ಅವಕಾಶ ಕಲ್ಪಿಸಲು ಕಾನೂನು ತಿದ್ದುಪಡಿ ಮಾಡಲಾಗುತ್ತಿದೆ. ಇದರಿಂದ ಅರಣ್ಯ ಕೃಷಿ ಹೆಚ್ಚಳಕ್ಕೆ ಅನುಕೂಲವಾಗಲಿದೆ. ರೈತನಿಗೂ ಆದಾಯ ಬರಲಿದೆ.– ಉಮೇಶ್ ಕತ್ತಿ, ಅರಣ್ಯ ಸಚಿವ