Advertisement

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತು: ಕಡಾಡಿ

04:09 PM Jun 16, 2020 | Suhan S |

ಮೂಡಲಗಿ: ಬಿಜೆಪಿ ಪಕ್ಷ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ರಾಷ್ಟ್ರಮಟ್ಟದ ಸ್ಥಾನ ಕಲ್ಪಿಸಿದೆ. ಕೇಂದ್ರ ಮತ್ತು ರಾಜ್ಯದ ನಾಯಕರಿಗೆ ನಾನು ಆಭಾರಿಯಾಗಿದ್ದೇನೆ. ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ ಎಂದು ರಾಜ್ಯಸಭಾ ನೂತನ ಸದಸ್ಯ ಈರಣ್ಣ ಕಡಾಡಿ ಹೇಳಿದರು.

Advertisement

ಅವರು ರಾಜ್ಯಸಭಾ ಸದಸ್ಯರಾಗಿ ಸೋಮವಾರ ಪ್ರಥಮ ಭಾರಿಗೆ ಮೂಡಲಗಿ ಪಟ್ಟಣಕ್ಕೆ ಆಗಮಿಸಿ, ಇಲ್ಲಿಯ ಆರಾಧ್ಯ ದೈವ ಶ್ರೀಶಿವಬೋಧರಂಗ ಮಠಕ್ಕೆ ಭೇಟ್ಟಿ ನೀಡಿ ಶ್ರೀ ಶಿವಬೋಧರಂಗರ ದರ್ಶನ ಪಡೆದು, ಶ್ರೀ ಅಮೃತಬೋಧ ಸ್ವಾಮೀಜಿಗಳನ್ನು ಸತ್ಕರಿಸಿ-ಆಶಿರ್ವಾದ ಪಡೆದುಕೊಂಡು ಮತ್ತು ಶ್ರೀಗಳಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದರು. ಜಿಲ್ಲೆಯ ಸಚಿವರು, ಶಾಸಕರು ಹಾಗೂ ಪಕ್ಷದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದಾಗಿ ಹೇಳಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮೂಡಲಗಿ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಅವರಿಗೆ ಕಲ್ಮೇಶ್ವರ ವೃತ್ತದಲ್ಲಿ ಹೂ ಮಾಲೆ ಹಾಕಿ ಸ್ವಾಗತಿಸಿದರು. ಶ್ರೀ ಅಮೃತಬೋಧ ಸ್ವಾಮೀಜಿ ಮತ್ತು ಶ್ರೀಧರಬೋಧ ಸ್ವಾಮೀಜಿ ಮಾತನಾಡಿ, ಈರಣ್ಣ ಕಡಾಡಿ ಅವರು ರಾಜ್ಯಸಭಾ ಸದಸ್ಯರಾಗಿದ್ದರಿಂದ ದಿಲ್ಲಿಯೇ ನಮ್ಮ ಮೂಡಲಗಿ ತಾಲೂಕಿಗೆ ಬಂದಂತಾಗಿದೆ ಎಂದರು.

ಬಿಜೆಪಿ ಅರಭಾಂವಿ ಮಂಡಳ ಅಧ್ಯಕ್ಷ ಮಹಾದೇವ ಶೆಕ್ಕಿ, ಪ್ರಕಾಶ ಮಾದರ, ಈಶ್ವರ ಮುರಗೋಡ, ಕೃಷ್ಣಾ ನಾಶಿ, ಸದಾಶಿವ ಶೀಲವಂತ, ಮಲ್ಲಪ್ಪ ಮದಗುಣಕ್ಕಿ, ಹನಮಂತ ಸತರಡ್ಡಿ, ಕೇದಾರಿ ಭಸ್ಮೆ, ಮಲ್ಲಪ್ಪ ನೇಮಗೌಡ್ರ, ಶಿವಬೋಧ ಬೆಳಗಲಿ, ಈರಣ್ಣಾ ಅಂಗಡಿ, ಜಗದೀಶ ತೇಲಿ, ಪಾಂಡು ಮಹೇಂದ್ರಕರ, ಬಸಯ್ನಾ ಮಠಪತಿ, ಸದಾಶಿವ ನಿಡಗುಂದಿ, ಮಹಾಲಿಂಗಯ್ನಾ ಹಿರೇಮಠ, ಚೇತನ ನಿಶಾನಿಮಠ, ಡಾ: ಪಾಲಭಾಂವಿ, ಯಶವಂತ ಸರ್ವಿ, ನವೀನ ನಿಶಾನಿಮಠ, ಪುರಸಭೆ ಮಾಜಿ ಅಧ್ಯಕ್ಷ ರಾಮಣ್ಣಾ ಹಂದಿಗುಂದ, ಪುರಸಭೆ ಸದಸ್ಯರು, ಬಿಜೆಪಿ ಕಾರ್ಯಕರ್ತರು, ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next