ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಆಯ್ಕೆಯಲ್ಲೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಬೆಂಬಲಿತ ಅಭ್ಯರ್ಥಿ ಜಯ ಸಾಧಿಸಿದ್ದಾರೆ. ಇದರೊಂದಿಗೆ ಪಕ್ಷದ ವರಿಷ್ಠರು ಸದ್ದಿಲ್ಲದೆ ಪಕ್ಷವನ್ನು ಸಂಪೂರ್ಣವಾಗಿ “ಸಂಘಟನೆಯ’ ತೆಕ್ಕೆಗೆ ತೆಗೆದುಕೊಳ್ಳುತ್ತಿದ್ದಾರೆ.
ಆರ್‌ಎಸ್‌ಎಸ್ ಮುಖಂಡರ ಜತೆ ಸಂಪರ್ಕ ದಲ್ಲಿರುವ ಗೌತಮ್ ಕುಮಾರ್ ಮೇಯರ್ ಆಗಿ ಆಯ್ಕೆ ಯಾಗುವುದರೊಂದಿಗೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಂಬಲಿತ ಅಭ್ಯರ್ಥಿ ಪದ್ಮನಾಭ ರೆಡ್ಡಿ ಅವಕಾಶ ಕಳೆದುಕೊಂಡರು.
ಪದ್ಮನಾಭ ರೆಡ್ಡಿ ಅವರನ್ನು ಮೇಯರ್ ಸ್ಥಾನಕ್ಕೆ ಆರಿಸಲು ನಗರದ ಬಹಳಷ್ಟು ಶಾಸಕರು ಒಲವು ತೋರಿದ್ದರು. ಇದಕ್ಕೆ ಯಡಿಯೂರಪ್ಪ ಅವರ ಸಮ್ಮತಿಯೂ ಇದೆ ಎಂದು ಬಿಂಬಿಸಿಕೊಳ್ಳಲು ಕೆಲವು ಪ್ರಭಾವೀ ಶಾಸಕರು ನಡೆಸಿದ ಪ್ರಯತ್ನವೇ ಹಿನ್ನಡೆಗೆ ಕಾರಣ ವಾಯಿತು. ಯಡಿಯೂರಪ್ಪ ಬಣ ಎಂದು ಬಿಂಬಿಸುತ್ತಿದ್ದಂತೆ ಪಕ್ಷ, ಸಂಘದೊಂದಿಗೆ ನಿಕಟ ಒಡನಾಟ ಹೊಂದಿರುವ ಗೌತಮ್ ಕುಮಾರ್ ಅವರಿಗೆ ಅವಕಾಶ ಕಲ್ಪಿಸಿದೆ ಎಂಬ ಮಾತು ಕೇಳಿಬಂದಿದೆ.
ಈಗ ಮೇಯರ್ ಸ್ಥಾನಕ್ಕೆ ಗೌತಮ್ ಕುಮಾರ್ ಆಯ್ಕೆ ಗಮನಿಸಿದರೆ ಸಂಘ ಮೂಲದವರಿಗೆ ಸ್ಥಾನ ಮಾನ, ಅವಕಾಶ ಕಲ್ಪಿಸಿ ಪಕ್ಷವನ್ನು ಸಂಘಟನೆ ಕೇಂದ್ರಿತವಾಗಿ ಬೆಳೆಸಲು ವರಿಷ್ಠರು ಮುಂದಾ ಗಿರು ವುದು ಸ್ಪಷ್ಟವಾಗಿದೆ. ಈ ಬೆಳವಣಿಗೆ ಹಿಂದೆ ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಸಂತೋಷ್ ಅವರ ಛಾಯೆ ಇರುವುದೂ ಖಚಿತ.
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಯಾಗು ತ್ತಿದ್ದಂತೆ ಆರ್‌ಎಸ್‌ಎಸ್ ಮೂಲದ ಸಂಸದ ನಳಿನ್ ಕುಮಾರ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಪಕ್ಷದ ವರಿಷ್ಠರು ನೇಮಕ ಮಾಡಿದ್ದರು. ಅನಂತರದ ಹಲವು ಪದಾಧಿಕಾರಿಗಳ ಆಯ್ಕೆಯಲ್ಲೂ ಸಂಘ ಮೂಲದವರಿಗೆ ಆದ್ಯತೆ ನೀಡಲಾಗಿದೆ. ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಮಹೇಶ್ ತೆಂಗಿನಕಾಯಿ ಕೂಡ ಸಂಘ ಮೂಲ ದವರೇ ಆಗಿದ್ದಾರೆ. ಇತ್ತೀಚೆಗೆ ರಾಜ್ಯ ಬಿಜೆಪಿ ಉಪಾ ಧ್ಯಕ್ಷ ರಾಗಿ ನೇಮಕಗೊಂಡ ಭಾನುಪ್ರಕಾಶ್, ನಿರ್ಮಲ್ ಸುರಾನಾ ಅವರು ಆರ್‌ಎಸ್‌ಎಸ್ ಸಂಘ ಟನೆಯ ಕಟ್ಟಾಳುಗಳು. ಸಂಘದ ಮೂಲದವರಿಗೆ ಒತ್ತು ನೀಡಿ ಪಕ್ಷವನ್ನು ಸದೃಢವಾಗಿ ಕಟ್ಟುವುದು ಇದರ ಹಿಂದಿನ ಉದ್ದೇಶ ಎನ್ನಲಾಗಿದೆ.
ಮೇಯರ್, ಉಪ ಮೇಯರ್ ಅಭ್ಯರ್ಥಿಗಳನ್ನು ನಾನು, ಪಕ್ಷದ ರಾಜ್ಯಾಧ್ಯಕ್ಷರು, ಸಚಿವ ಆರ್.ಅಶೋಕ್ ಮತ್ತು ಬೆಂಗಳೂರು ಶಾಸಕರೆಲ್ಲರೂ ಸೇರಿ ಒಮ್ಮತ ದಿಂದ ಆಯ್ಕೆ ಮಾಡಿದ್ದೇವೆ. ಇದರಲ್ಲಿ ಯಾವುದೇ ರೀತಿ ಭಿನ್ನಾಭಿಪ್ರಾಯ ಇರಲಿಲ್ಲ.
– ಬಿ.ಎಸ್. ಯಡಿಯೂರಪ್ಪ , ಮುಖ್ಯಮಂತ್ರಿ