Advertisement
ಎರಡು ತಂಡಗಳಿಗೂ ಇದು ಮಾಡು ಇಲ್ಲವೆ ಮಡಿ ಪಂದ್ಯ ಇದಾಗಿತ್ತು. ಬಾಂಗ್ಲಾಕ್ಕೆ 12.1 ಓವರ್ ನಲ್ಲಿ ಪಂದ್ಯ ಗೆಲ್ಲುವ ಅನಿವಾರ್ಯತೆಯಿತ್ತು. ಇತ್ತ ಅಘ್ಘಾನ್ ಗೆದ್ದರೆ ಸೆಮಿಫೈನಲ್ ಗೇರುವ ಅವಕಾಶವಿತ್ತು.
Related Articles
Advertisement
11.4 ಓವರ್ ಗಳಲ್ಲಿ 81-7 ವಿಕೆಟ್ ಕಳೆದುಕೊಂಡಿತ್ತು. ಇದಾದ ಬಳಿಕ ಪಂದ್ಯ ಮಳೆಯಿಂದ ಮತ್ತೆ ನಿಂತು ಆರಂಭಗೊಂಡಾಗ ಗುಲ್ಬದಿನ್ ಫೀಲ್ಡ್ ಗೆ ಬಂದಿಲಿಲ್ಲ. 15ನೇ ಓವರ್ ಗಾಗಿ ಗುಲ್ಬದಿನ್ ಮೈದಾನಕ್ಕೆ ಬಂದಿದ್ದರು.
ಗುಲ್ಬದಿನ್ ಫೀಲ್ಡ್ ಮಾಡುವಾಗ, ಕೋಚ್ ಸಿಗ್ನಲ್ ಕೊಟ್ಟ ಬಳಿಕವೇ ಗುಲ್ಬದಿನ್ ಮಂಡಿನೋವಿನಿಂದ ಕುಸಿದು ಬಿದ್ದಿರುವುದಕ್ಕೆ ಹಲವರು ಇದನ್ನು ವ್ಯಂಗ್ಯವಾಡಿದ್ದಾರೆ. ಲಿಟನ್ ದಾಸ್ ಗುಲ್ಬದಿನ್ ಬಿದ್ದ ದೃಶ್ಯವನ್ನು ವ್ಯಂಗ್ಯವಾಗಿಸಿದ್ದಾರೆ.
ಕಾಮೆಂಟ್ರಿ ಮಾಡುತ್ತಿದ್ದವರು ಕೂಡ ಗುಲ್ಬದಿನ್ ಬಗ್ಗೆ ತಮಾಷೆಯಾಗಿ ಮಾತನಾಡಿದ್ದಾರೆ. ಇವರ ನಾಟಕಕ್ಕೆ ಆಸ್ಕರ್ ಅಥವಾ ಎಮ್ಮಿ ಆವಾರ್ಡ್ ಸಿಹಬಹುದು. ಮ್ಯಾಚ್ ನ ಸಂಭಾವನೆ ಹೋಯಿತೆಂದು ಪೊಮ್ಮಿ ಎಂಬೆಂಗ್ವಾ ತಮಾಷೆ ಮಾಡಿದ್ದಾರೆ.
ಪಂದ್ಯ ಗೆದ್ದ ಕೂಡಲೇ ಗುಲ್ಬದಿನ್ ಓಡೋಡಿ ಬಂದು ಸಂಭ್ರಮಿಸಿದ್ದಾರೆ. ಗಾಯಗೊಂಡು ವಿಶ್ರಾಂತಿಯಲ್ಲಿದ್ದವರು ಇಷ್ಟು ವೇಗವಾಗಿ ಹೇಗೆ ಸಾಧ್ಯ. ಇದೊಂದು ಸುಳ್ಳು ಗಾಯದ ಡ್ರಾಮಾ ಎಂದು ನೆಟ್ಟಿಗರು ಗರಂ ಆಗಿದ್ದಾರೆ. ಇಂಟರ್ ನೆಟ್ ಈ ವಿಡಿಯೋ ವೈರಲ್ ಆಗಿದ್ದು, ಗುಲ್ಬದಿನ್ ಅವರ ಪ್ರದರ್ಶನಕ್ಕೆ ʼಆಸ್ಕರ್ʼ ಕೊಡಿ ಎಂದು ಟ್ರೋಲ್ ಮಾಡಿದ್ದಾರೆ.