Advertisement

ಮುಳುಗಿದ ಅರೇಬಿಯನ್‌ ಹಡಗು

08:03 PM Mar 17, 2022 | Team Udayavani |

ದುಬೈ: ಭಾರತ, ಪಾಕಿಸ್ತಾನ ಸೇರಿ ಹಲವು ದೇಶದ 30 ಸಿಬ್ಬಂದಿಯಿದ್ದ ಅರೇಬಿಯನ್‌ ಹಡಗೊಂದು ಇರಾನ್‌ ಅಸ್ಸಾಲುಯೆ ಬಂದರಿನ ಬಳಿ ಗುರುವಾರ ಮುಳುಗಿದೆ.

Advertisement

ನೀರು ಪಾಲದ “ಅಲ್‌ ಸಾಲ್ಮಿ’ ಹಡಗಿನಲ್ಲಿದ್ದ 16 ಮಂದಿಯನ್ನು ರಕ್ಷಿಸಲಾಗಿದೆ. 11 ಮಂದಿಗೆ ಲೈಫ್ ಜಾಕೆಟ್‌ ನೀಡಲಾಗಿದೆ. ಇನ್ನೊಬ್ಬ ಸಿಬ್ಬಂದಿಯನ್ನು ಹತ್ತಿರದ ಟ್ಯಾಂಕರ್‌ನವರು ರಕ್ಷಿಸಿದ್ದಾರೆ. ಉಳಿದ ಇಬ್ಬರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಹವಾಮಾನ ಏರುಪೇರಿನಿಂದಾಗಿ ಸಮುದ್ರದಲ್ಲಿ ಅತಿಯಾಗಿ ಗಾಳಿ ಬೀಸಿರುವುದೇ ಹಡಗು ಮುಳುಗುವುದಕ್ಕೆ ಕಾರಣ ಎನ್ನಲಾಗಿದೆ. ಹಡಗು ಇರಾಕ್‌ನ ಉಮ್‌ ಕಸ್ರ್ಗೆ ಕಾರು ಮತ್ತು ಇತರೆ ಸಾಮಾಗ್ರಿಗಳನ್ನು ಹೊತ್ತೂಯ್ಯುತ್ತಿತ್ತು. ಅಸ್ಸಾಲುಯೆ ಬಂದರಿನಿಂದ ಕೇವಲ 50 ಕಿ.ಮೀ ಅಂತರದಲ್ಲೇ ಈ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next