ಕೋವಿಡ್ 19 ವೈರಸ್ ತಡೆಗೆ ದೇಶಾದ್ಯಂತ 21 ದಿನಗಳ ಕಾಲ ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಆರ್‌ಬಿಐನ ಮೂರು ತಿಂಗಳು ಇಎಂಐ ಮಂದೂಡಿಕೆ ವಿನಾಯಿತಿ ಸಾಲಗಾರರಿಗೆ ಅಷ್ಟೇನು ಪ್ರಯೋಜನ ಆಗುತ್ತಿಲ್ಲ.
ರಾಜ್ಯಸ್ವಾಮ್ಯದ ವಿವಿಧ ಬ್ಯಾಂಕ್‌ಗಳು ಮೂರು ತಿಂಗಳ ಮುಂದೂಡಿಕೆ ಅವಧಿಗೆ ಬಡ್ಡಿ ಪಾವತಿಸಬೇಕು ಎಂದು ತಿಳಿಸಿವೆ. ಒಂದೆಡೆ ಲಾಕ್‌ಡೌನ್‌ನಿಂದ ವ್ಯಾಪಾರ, ಆದಾಯ ಕ್ಷೀಣಿಸಿದ್ದರೆ, ಮತ್ತೂಂದೆಡೆ ಮೂರು ತಿಂಗಳು ಹೆಚ್ಚುವರಿಯಾಗಿ ಬಡ್ಡಿ ಹೊರೆ ಕೂಡ ಬೀಳುತ್ತಿದೆ.
ಲಾಕ್‌ಡೌನ್ ಘೋಷಿಸಿದ್ದರಿಂದ ಜನರಿಗೆ ತೊಂದರೆಯಾಗುತ್ತಿರುವುದರಿಂದ ವಿವಿಧ ರೀತಿಯ ಸಾಲಗಳಿಗೆ ಮೂರು ತಿಂಗಳು ಇಎಂಐ ಪಾವತಿಯನ್ನು ಮಂದೂಡಬೇಕು ಎಂದು ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ ನೀಡಿತ್ತು.