ಕೊಲೊಂಬೊ: ಏಮರ್ಜಿಂಗ್ ತಂಡಗಳು ಏಷ್ಯಾ ಕಪ್ ಕೂಟವು ಶ್ರೀಲಂಕಾದಲ್ಲಿ ನಡೆಯುತ್ತಿದೆ. ಶುಕ್ರವಾರ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ಎ ತಂಡವನ್ನು ಸೋಲಿಸಿದ ಭಾರತ ಎ ತಂಡವು ಫೈನಲ್ ಪ್ರವೇಶಿಸಿದೆ. ಅಂತಿಮ ಪಂದ್ಯದಲ್ಲಿ ಯಶ್ ಧುಲ್ ಬಳಗುವ ಪಾಕಿಸ್ತಾನ ಎ ತಂಡವನ್ನು ಎದುರಿಸಲಿದೆ.
ಬಾಂಗ್ಲಾದೇಶದ ವಿರುದ್ಧದ ಪಂದ್ಯ ಇದೀಗ ಬೇರೊಂದು ಕಾರಣದಿಂದ ಸುದ್ದಿಯಾಗುತ್ತಿದೆ. ಅದು ಬಾಂಗ್ಲಾ ಆಟಗಾರ ಸೌಮ್ಯ ಸರ್ಕಾರ್ ಮತ್ತು ಭಾರತೀಯ ಆಟಗಾರರ ನಡುವಿನ ಮಾತಿನ ಚಕಮಕಿಯ ಕಾರಣದಿಂದ.
ಸೌಮ್ಯ ಸರ್ಕಾರ್ ಅವರು ಯುವರಾಜ್ ಸಿಂಗ್ ದೊಡಿಯಾ ಎಸೆತದಲ್ಲಿ ಔಟಾದರು, ಸ್ಲಿಪ್ ನಲ್ಲಿದ್ದ ನಿಕಿನ್ ಜೋಸ್ ಅದ್ಭುತ ಕ್ಯಾಚ್ ಹಿಡಿದು ಸೌಮ್ಯ ಸರ್ಕಾರ್ ಅವರನ್ನು ಔಟ್ ಮಾಡಲು ಸಹಾಯ ಮಾಡಿದರು. ಈ ವೇಳೆ ಭಾರತೀಯರು ತುಸು ಹೆಚ್ಚು ಎನ್ನುವಂತೆಯೇ ಸಂಭ್ರಮಿಸಿದರು. ಇದು ಸೌಮ್ಯ ಸರ್ಕಾರ್ ರನ್ನು ಕೆರಳಿಸಿತು.
ಇದೇ ವೇಳೆ ಎದುರಿಗೆ ಬಂದ ಹರ್ಷಿತ್ ರಾಣಾ ಮತ್ತು ಸರ್ಕಾರ್ ನಡುವೆ ಸ್ವಲ್ಪ ಸಮಯದವರೆಗೆ ಮಾತಿನ ಚಕಮಕಿ ಮುಂದುವರೆಯಿತು. ಸಾಯಿ ಸುದರ್ಶನ್ ಇಬ್ಬರು ಕ್ರಿಕೆಟಿಗರ ನಡುವೆ ಜಗಳ ನಿಲ್ಲಿಸಲು ಬಂದರು.
ಶುಕ್ರವಾರದ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಎ ತಂಡವು 211 ರನ್ ಗಳಿಸಿತು. ಆದರೆ ಬಾಂಗ್ಲಾದೇಶ ತಂಡವು 34.2 ಓವರ್ ಗಳಲ್ಲಿ 160 ರನ್ ಗೆ ಆಲೌಟಾಯಿತು.