Advertisement

ಎಮರ್ಜಿಂಗ್‌ ಏಷ್ಯಾ ಕಪ್‌ ಕ್ರಿಕೆಟ್‌ ಫೈನಲ್‌ ; ಪಾಕಿಸ್ತಾನದ ಎದುರು ಭಾರತಕ್ಕೆ ಸೋಲು

09:32 PM Jul 23, 2023 | Team Udayavani |

ಕೊಲಂಬೊ: ಎಮರ್ಜಿಂಗ್‌ ಏಷ್ಯಾ ಕಪ್‌ ಕ್ರಿಕೆಟ್‌ ಕೂಟದ ರವಿವಾರ ನಡೆದ ಫೈನಲ್‌ ಹೋರಾಟದಲ್ಲಿ ಭಾರತ “ಎ’ ತಂಡ ಪಾಕಿಸ್ಥಾನ “ಎ’ ತಂಡದ ಎದುರು ಸೋಲು ಅನುಭವಿಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಅಬ್ಬರಿಸಿದ ಪಾಕಿಸ್ತಾನ ‘ಎ’ ತಂಡ 128 ರನ್‌ಗಳ ಅಮೋಘ ಜಯ ಸಾಧಿಸಿತು

Advertisement

ಭಾರತ ಎ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಭರ್ಜರಿಯಾಗಿ ಆಟ ಆರಂಭಿಸಿದ ಪಾಕಿಸ್ತಾನ 50 ಓವರ್ ಗಳಲ್ಲಿ 8 ವಿಕೆಟ್ 352 ರನ್ ಗಳ ಬೃಹತ್ ಮೊತ್ತ ದಾಖಲಿಸಿತು. ಸ್ಪೋಟಕ ಶತಕ ಸಿಡಿಸಿದ ತಯ್ಯಬ್ ತಾಹಿರ್ 108 ರನ್ ಗಳಿಸಿ ಔಟಾದರು. ಆರಂಭಿಕರಾದ ಸೈಮ್ ಅಯೂಬ್ 59, ಸಾಹಿಬ್ಜಾದಾ ಫರ್ಹಾನ್ 65 ರನ್ ಗಳಿಸಿ ಭರ್ಜರಿ ಆರಂಭ ಒದಗಿಸಿಕೊಟ್ಟರು. ಒಮೈರ್ ಯೂಸುಫ್ 35, ಮುಬಾಸಿರ್ ಖಾನ್ 35 ರನ್ ಗಳಿಸಿದರು.

ಬೃಹತ್ ಗುರಿ ಬೆನ್ನಟ್ಟಿದ ಭಾರತ 40 ಓವರ್ ಗಳಲ್ಲಿ 224 ರನ್ ಗಳಿಸಲಷ್ಟೇ ಶಕ್ತವಾಯಿತು. ಸಾಯಿ ಸುದರ್ಶನ್ 29, ಅಭಿಷೇಕ್ ಶರ್ಮಾ 61, ನಾಯಕ ಯಶ್ ಧುಲ್ 39, ಹೊರತು ಪಡಿಸಿ ನೆಲಕಚ್ಚಿ ಆಡುವಲ್ಲಿ ಯಾರೂ ಸಫಲವಾಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next