Advertisement

ತುರ್ತು ಪರಿಸ್ಥಿತಿಯ ಕರಾಳ ನೆನಪು ಬಿಚ್ಚಿಟ್ಟ ಆರ್‌.ಅಶೋಕ್‌

04:28 PM Jun 26, 2021 | Team Udayavani |

ಬೆಂಗಳೂರು: “ನಾನು ವಿ.ವಿ. ಪುರಂ ಕಾಲೇಜಿನಲ್ಲಿ ಪಿಸಿಎಂಬಿ ವಿದ್ಯಾರ್ಥಿ. ನನಗೆ ಆಗ 17 ವರ್ಷ. ಐವರು‌ ವಿದ್ಯಾರ್ಥಿಗಳ ಜತೆಯಶವಂತಪುರ ಸರ್ಕಲ್‌ನಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಪ್ರತಿಭಟನೆಮಾಡಿದೆ. ತಕ್ಷಣನನ್ನನ್ನುಬಂಧಿಸಿ ಠಾಣೆಗೆ ಕರೆದೊಯ್ದುಹಿಂಸೆ ನೀಡಿರಾತ್ರಿ 7 ಗಂಟೆಗೆ ಜೈಲಿಗೆ ಹಾಕಿದರು.

Advertisement

ಅಲ್ಲಿ ಹೋದ ತಕ್ಷಣ ಒಂದುಕಂಬಳಿ, ಅಲ್ಯುಮಿನಿಯಂ ತಟ್ಟೆ ಒಂದು ರಾಗಿ ಮುದ್ದೆ ಕೊಟ್ಟರು’ಈ ರೀತಿ ಕಂದಾಯ ಸಚಿವ ಆರ್‌.ಅಶೋಕ್‌ ಬೆಂಗಳೂರಿನ ಹಳೇಕೇಂದ್ರೀಯ ಕಾರಾಗೃಹದ ಸ್ಥಳದಲ್ಲಿ (ಈಗಿನ ಫ್ರೀಡಂ ಪಾರ್ಕ್‌)ನಲುವತ್ತೈದು ವರ್ಷದ ಹಿಂದಿನ ಹೋರಾಟದ ನೆನಪು ಬಿಚ್ಚಿಟ್ಟರು.ಶುಕ್ರವಾರಬಿಜೆಪಿವತಿಯಿಂದ “ತುರ್ತುಪರಿಸ್ಥಿತಿ ಕರಾಳಛಾಯೆ’ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಒಂದು ತಿಂಗಳ ಕಾಲಬ್ಯಾರಕ್‌ ಸಂಖ್ಯೆ 8 ರಲ್ಲಿ ಕಾಲ ಕಳೆದಿದ್ದು. ಓಪನ್‌ ಬಾತ್‌ರೂಂನಲ್ಲಿನೂರು ಮಂದಿಯ ಸ್ನಾನ, ಒಂದೇ ಕೋಣೆಯಲ್ಲಿ ಹತ್ತಾರು ಜನರವಾಸ್ತವ್ಯ, ಗ್ರಾಂ ಲೆಕ್ಕದಲ್ಲಿಕೊಡುತ್ತಿದ್ದ ಆಹಾರ ಧಾನ್ಯ, ಹೊಟ್ಟೆ ಹಸಿವುತಾಳಲಾರದೆ ಮಾಡಿದ ಪ್ರತಿಭಟನೆ, ಆಕಾಶವಾಣಿಯಲ್ಲಿ ಕೇಳುತ್ತಿದ್ದವಾರ್ತೆ, ಹಾಡುಗಳು, ಲಾಲ್‌ ಕೃಷ್ಣ ಅಡ್ವಾಣಿ, ಅಟಲ್‌ ಬಿಹಾರಿವಾಜಪೇಯಿ, ಜಾರ್ಜ್‌ ಫ‌ರ್ನಾಂಡಿಸ್‌, ಎಚ್‌.ಡಿ.ದೇವೇಗೌಡರಮಾತುಗಳು ಎಲ್ಲವನ್ನೂ ಮೆಲುಕು ಹಾಕಿದರು.

ಪ್ರಜಾಪ್ರಭುತ್ವ ಉಳಿಸಲು ಹೋರಾಟ: ಈ ಸಂದರ್ಭದಲ್ಲಿ”ಉದಯವಾಣಿ’ ಜತೆ ಮಾತನಾಡಿದ ಅವರು, ತುರ್ತು ಪರಿಸ್ಥಿತಿಯಆ ಕರಾಳ ದಿನಗಳನ್ನು ನೆನಸಿಕೊಂಡರೆ ಮೈ ಜುಂ ಎನ್ನುತ್ತದೆ.ದೇಶಾದ್ಯಂತ ಕೋರ್ಟ್‌ಗಳು ಬಂದ್‌ ರೀತಿ ಇದ್ದವು, ಪತ್ರಿಕಾಸ್ವಾತಂತ್ರ್ಯ ಇರಲಿಲ್ಲ, ಹಲವಾರು ಸಂಪಾದಕರನ್ನು ಜೈಲಿಗೆ ಹಾಕಲಾಗಿದೆ.

ಪತ್ರಿಕೆಗಳಲ್ಲಿ ಸಂಪಾದಕೀಯ ಬರೆಯುತ್ತಿರಲಿಲ್ಲ. ವಾರ್ತೆಗಳುಮತ್ತು ಪತ್ರಿಕೆಯ ಸುದ್ದಿಗಳು ಸ್ಕ್ರೀನಿಂಗ್‌ ಆಗುತ್ತಿತ್ತು.ಇಂದಿರಾಗಾಂಧಿಯವರ ವಿರುದ್ಧ ಮಾತನಾಡುವಂತಿಲ್ಲ. ಅವರಹೆಸರು ಹೇಳಿದರೆ ಬಂಧನವಾಗುತ್ತಿತ್ತು.ಜೈಲಿನಲ್ಲಿ ಇದ್ದದ್ದು ಒಂದು ತಿಂಗಳಾದರೂ 1975ರಿಂದ 77ರವರೆಗೆ ಒಂದು ರೀತಿಯಲ್ಲಿ ಜೈಲಿನಲ್ಲಿ ಇದ್ದಂತೆಯೇ ಆಗಿತ್ತು.ದೆಹಲಿಯಿಂದ ಯಾರೇ ನಾಯಕರು ಬರುತ್ತಾರೆ ಎಂದರೆ ನಮ್ಮನ್ನುಮುಂಜಾಗ್ರತೆಯಾಗಿ ಬಂಧಿಸಿ ಜೈಲಿಗೆ ಕಳುಹಿಸುತ್ತಿದ್ದರು. ಹೀಗಾಗಿ,ನಾವು ಆತಂಕದಿಂದ ಊರು ಬಿಡುತ್ತಿದ್ದೆವು.ನಮ್ಮ ಚಿಕ್ಕಪ್ಪ ಅಣ್ಣಯ್ಯ ಸಹ ಭೂಗತರಾಗಿದ್ದರು. ಅವರು ಎಚ್‌ಎಂಟಿ ಉದ್ಯೋಗಿ ತುರ್ತು ಪರಿಸ್ಥಿತಿ ಹೋರಾಟದಲ್ಲಿ ಭಾಗಿಯಾಗಿದ್ದರು.

ಆಗ ಕಹಳೆ ಎಂಬ ಪತ್ರಿಕೆ ಮುದ್ರಣ ಮಾಡುತ್ತಿದ್ದರು. ನಾವು ಎಲ್ಲಾ ಕಡೆ ಹಂಚುತ್ತಿದ್ದೆವು. ಅಂತಹ ಹೋರಾಟದಲ್ಲಿ ಪಾಲ್ಗೊಂಡ ಹೆಮ್ಮೆ ಸಂತೋಷ ನನಗಿದೆ. ತುರ್ತುಪರಿಸ್ಥಿತಿ ಘೋಷಣೆಯಾದಾಗ ಇಂದಿರಾಗಾಂಧಿ ವಿರುದ್ಧ ಧಿಕ್ಕಾರ ಕೂಗಿ ಪ್ರಜಾಪ್ರಭುತ್ವಉಳಿಯಬೇಕು ಎಂದು ಘೋಷಣೆ ಕೂಗಬೇಕುಎಂದು ಭೂಗತ ಜಾಗದಲ್ಲಿ ಪ್ರತಿಜ್ಞೆ ಮಾಡಿಸಿದರು.

Advertisement

ಆ ಒಂದು ದಿನ ನಾನುಮತ್ತು ಐವರು ಕಾಲೇಜುಸ್ನೇಹಿತರು ಯಶವಂತಪುರಸರ್ಕಲ್‌ನಲ್ಲಿ ಪ್ರತಿಭಟನೆಮಾಡಿದೆವು. ನನ್ನನ್ನುಬಂಧಿಸಿ ಯಶವಂತಪುರಠಾಣೆಯಲ್ಲಿ ಏನೇನುಕಿರುಕುಳ ಕೊಡಬಹುದೋ ಅಷ್ಟೂ ಕೊಟ್ಟು ಕಾರಾಗೃಹಕ್ಕೆತಂದು ಬಿಟ್ಟರು. 8 ನೇಸಂಖ್ಯೆಯ ಬ್ಯಾರಕ್‌ನಲ್ಲಿನಾನು ಉಳಿಯಬೇಕಾಯಿತು.

ಯಾರು ಯಾವಸೆಲ್‌ನಲ್ಲಿ ಬೇಕಾದರೂ ಇರಬಹುದಾಗಿತ್ತು. ಜಾಗ ಸಾಕಾಗದೆ ನೆಲದಲ್ಲಿ ಕಾರಿಡಾರ್‌ನಲ್ಲಿ ಮಲಗುತ್ತಿದ್ದೆವು.ಟವರ್‌ನಲ್ಲಿ ಕನ್ನಡ ಹಾಡುಕೇಳಲು ಬರುತ್ತಿದ್ದೆವು. ಕನ್ನಡ ಪತ್ರಿಕೆ ಓದಲು ಬರುತ್ತಿದ್ದೆವು. ಒಂದು ತಿಂಗಳು ನಾನು ಈ ಜೈಲಿನಲ್ಲಿದ್ದೆ. ನಮ್ಮ ತಮ್ಮ ರವಿ 13 ವರ್ಷಹುಡುಗ. ಆತನೂ ಮತ್ತೂಂದು ಕಡೆ ಪ್ರತಿಭಟನೆ ಮಾಡಿವೀರೇಂದ್ರ ಪಾಟೀಲ್‌ ಅವರ ಜತೆ ಜೈಲಿಗೆ ಬಂದಿದ್ದ. ಆತನೂಮೂರು ತಿಂಗಳು ಜೈಲಿನಲ್ಲಿದ್ದ. ಪಕ್ಕದಲ್ಲಿ ರಿಮ್ಯಾಂಡ್‌ ರೂಂ, ಮಕಳ ‌Rಜೈಲಿನಲ್ಲಿಟ್ಟಿದ್ದರು .ದೊಡ್ಡ ನಾಯಕರುಜೈಲಿನಲ್ಲಿದ್ದರು:ಅಟಲ್‌ ಬಿಹಾರಿ ವಾಜಪೇಯಿ, ಲಾಲ್‌ಕೃಷ್ಣ ಅಡ್ವಾಣಿ, ಜಾರ್ಜ್‌ ಫ‌ರ್ನಾಂಡಿಸ್‌, ದೇವೇಗೌಡರುಸೇರಿ ಸಾಕಷ್ಟು ದೊಡ್ಡ ದೊಡ್ಡ ನಾಯಕರು ಜೈಲುವಾಸದಲ್ಲಿದ್ದರು.

ನನ್ನ ಕಾಣಿಕೆ ಅಳಿಲು ಸೇವೆ. ಅಂತಹ ಕರಾಳ ಛಾಯೆ ಎಂದೂಬರುವುದು ಬೇಡ. ಒಂದೊಮ್ಮೆ ಆಗ ಹೋರಾಟ ಆಗದೆ ಇದ್ದಿದ್ದರೆಈಗ ದೇಶದ ಪರಿಸ್ಥಿತಿ ಏನಾಗಿರು ತ್ತಿತ್ತೋ. ಕೋಟ್ಯಂತರ ಜನಬೀದಿಗಿಳಿದು ಹೋರಾಟ ಮಾಡಿದ ಫ‌ಲವಾಗಿ ಪ್ರಜಾಪ್ರಭುತ್ವಉಳಿದಿದೆ. ಅಟಲ್‌ ಬಿಹಾರಿ ವಾಜ ಪೇಯಿ, ನರೇಂದ್ರ ಮೋದಿಅವರಂತಹ ನಾಯಕತ್ವ ಸಿಗುವಂತಾ ಯಿತು. ತುರ್ತು ಪರಿಸ್ಥಿತಿಸಂದರ್ಭದಲ್ಲಿ ಸಾಕಷ್ಟು ಜನ ಪ್ರಾಣತ್ಯಾಗಮಾಡಿದ್ದಾರೆ.ಅವರಿಗೆಲ್ಲಾ ನಮನ ಸಲ್ಲಿಸುತ್ತೇನೆ.ಆ ಸಂದರ್ಭದಲ್ಲಿ ಗಾಯಿತ್ರಿದೇವಿ ಎಂಬುವರಿಗೆ ಹೆರಿಗೆನೋವಿನಲ್ಲೂ ಕಿರುಕುಳ ನೀಡಲಾಗಿತ್ತು. ಕೈಗೆ ಕಾಲಿಗೆ ಹಾಕಿದ್ದ ಬೇಡಿತೆಗೆಯಲಿಲ್ಲ. ಅಷ್ಟುಕರಾಳವಾಗಿ ನಡೆಸಿಕೊಂಡ ಭಯಾನಕ ಪರಿಸ್ಥಿತಿ.ಜೈಲಿನಲ್ಲಿದಾಗಲೂ ಆವರಣದಲ್ಲಿ ನಿತ್ಯ ಕಬಡ್ಡಿ ಆಟ ಆಡುತ್ತಿದ್ದೆವು. ವ್ಯಾಯಾಮ ಮಾಡುತ್ತಿದ್ದವು. ಆಗನಮಗೆಇಲ್ಲಿಂದ ಹೋದರೆ ನಮ್ಮ ಕಥೆ ಏನು ಎಂಬ ಆತಂಕ ಇತ್ತು. ಇಲ್ಲಿಂದ ಹೊರಗೆ ಹೋದಮೇಲೆ ಬದುಕುತ್ತೇವೋ ಇಲ್ಲವೋ. ಜೀವಂತವಾಗಿ ಬಿಡುತ್ತಾರೋಇಲ್ಲವೋ ಎಂಬಂತಾಗಿತ್ತು. ಅದೆಲ್ಲವೂ ಒಂದು ರೀತಿ ದೌರ್ಜನ್ಯದ ಪರಮಾವಧಿ. ಮತ್ತೆ ಯಾವಾಗ ಚುನಾವಣೆ ಆಗುತ್ತೋ ಗೊತ್ತಿಲ್ಲ, ಚುನಾವಣೆ ನಡೆದು ಇದೇ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ನಮ್ಮಕಥೆ ಏನು ಎಂದು ಯೋಚಿಸುತ್ತಿದ್ದೆವು.

ಹೊಟ್ಟೆ ತುಂಬಾ ಊಟ ಸಿಗುತ್ತಿರಲಿಲ್ಲ. ನಾವು ಯುವಕರು ಕೆ.ಜಿ.ಲೆಕ್ಕದಲ್ಲಿ ತಿನ್ನುವ ಯುವಕರು ಆದÃ, ನೆ ‌ಮಗೆಗ್ರಾಂ ಲೆಕ್ಕದಲ್ಲಿ ಕೊಡುತ್ತಿದ್ದರು.ಇಂತಹ ಪರಿಸ್ಥಿ ಇನ್ನೆಂದೂದೇಶಕR ಬೆ ರುವುದು ಬೇಡ.ತುರ್ತು ಪರಿಸ್ಥಿತಿನಂತರ 1977ರಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನಗಳಲ್ಲಿಮತ್ತೆ ಕಾಂಗ್ರೆಸ್‌ಗೆಲುವು ಸಾಧಿಸಿತ್ತಾದರೂ ಇಡೀ ದೇಶದ ಜನ ಜನತಾ ಪಕ್ಷವನ್ನು ಗೆಲ್ಲಿಸಿದ್ದರು.

ಆಗ ನಮಗೆ ಶಾಪವಿಮುಕ್ತಿ ಆಯಿತು.ತುರ್ತು ಪರಿಸ್ಥಿತಿಯ ಕರಾಳನೆನಪು 45 ವರ್ಷ ಮುಗಿದು 46 ನೇವರ್ಷಕ್ಕೆ ಕಾಲಿಟ್ಟಿದ್ದೆ .ಆಸಂದರ್ಭದಲ್ಲಿ ಇಲ್ಲಿ(ಜೈಲಿನಲ್ಲಿ )ಓಡಾಡಿದ ಪ್ರತಿಯೊಂದು ಕ್ಷಣವೂ ನೆನಪಿದೆ.ಇವೆಲ್ಲವೂ ಕಣ್ಣ ಮುಂದಿದೆ. ಅಂದಿನ ಹೋರಾಟ ಮತ್ತು ಛಲನೆನಪು ಮುಂದಿನ ಜನಾಂಗಕ್ಕೆ ದಾರಿ ದೀಪ ಆಗಬೇಕು. ಈ ದೇಶದಪ್ರಜಾ ಪ್ರಭುತ್ವದ ದಮನ ಪ್ರವೃತ್ತಿ ನಡೆದಾಗ ವಿರೋಧ ಮಾಡುವಕೆಲಸ ಆಗಬೇಕು. 1975ರ ತುರ್ತು ಪರಿಸ್ಥಿತಿಯ ಹೋರಾಟಎರಡನೇ ಮಹಾ ಸ್ವಾತಂತ್ರ್ಯ ಸಂಗ್ರಾಮ. ಇಂದು ನಾನುಮಂತ್ರಿಯಾಗಿರಬಹುದು. ಆದರೆ, ಆಗ ನಾನೂ ಒಬ್ಬ ಸೈನಿಕಅಷ್ಟೇ. ಪ್ರಜಾಪ್ರಭುತ್ವ ಉಳಿಸಲು ನನ್ನ ಸಣ್ಣಕಾಣಿಕೆ ರಾಜ್ಯಕ್ಕೆ ದೇಶಕ್ಕೆಕೊಟ್ಟಿದ್ದೇನೆ ಎಂದು ವಿವರಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next