Advertisement
ಕೆಲವು ದಿನಗಳ ಹಿಂದೆ ಜಿಲ್ಲಾಡಳಿತದ ಕೋರಿಕೆ ಮೇರೆಗೆ ಈ ವಿಶೇಷ ಬಸ್ ಸಂಚಾರ ಆರಂಭಿಸಿದ್ದು, ಮಂಗಳೂರು ಮತ್ತು ಪುತ್ತೂರು ವಿಭಾಗಗಳಿಂದ ಒಟ್ಟು 7 ಬಸ್‌ಗಳು ಕಾರ್ಯಾಚರಿಸುತ್ತಿವೆ. ಪ್ರತಿ ಬಸ್‌ಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೇವಲ 30 ಮಂದಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಸರಕಾರಿ ನೌಕರರು ಗುರುತಿನ ಚೀಟಿ ತೋರಿಸಿ ನಿಗದಿತ ಟಿಕೆಟ್ ದರ ಪಾವತಿಸಿ ಪ್ರಯಾಣಿಸಲು ಅವಕಾಶ ಇದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಗ್ಯ ಇಲಾಖೆ ಮತ್ತು ಡಿಸಿ ಕಚೇರಿ ಸಿಬಂದಿಗೆ ಮಾತ್ರ ಒದಗಿಸಿರುವ ಈ ಬಸ್ ಸೌಲಭ್ಯವನ್ನು ಇತರ ಕಚೇರಿಗಳ ಅಧಿಕಾರಿ ಮತ್ತು ಸಿಬಂದಿಗೂ ವಿಸ್ತರಿಸ ಬೇಕೆಂಬ ಬೇಡಿಕೆ ಬಂದಿದೆ.