Advertisement

ಭಯಹುಟ್ಟಿಸಿದ ಕೋವಿಡ್ 19: ಮುಂಬೈ, ಪುಣೆಯಲ್ಲಿ ಎಮರ್ಜೆನ್ಸಿ ಪರಿಸ್ಥಿತಿ: ಸಾಮ್ನಾ ಸಂಪಾದಕೀಯ

08:11 AM Apr 23, 2020 | Nagendra Trasi |

ಮುಂಬೈ:ಮಾರಣಾಂತಿಕ ಕೋವಿಡ್ 19 ಪ್ರಕರಣ ರಾಜ್ಯಾದ್ಯಂತ ತೀವ್ರಗತಿಯಲ್ಲಿ ಏರುತ್ತಿರುವ ಪರಿಣಾಮ ಮುಂಬೈ ಮತ್ತು ಪುಣೆಯಲ್ಲಿ ತುರ್ತುಪರಿಸ್ಥಿತಿ ರೀತಿ ಸನ್ನಿವೇಶ ಇದ್ದಿರುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯ ಶಿವಸೇನಾ ಅಭಿಪ್ರಾಯವ್ಯಕ್ತಪಡಿಸಿದೆ.

Advertisement

ಶಿವಸೇನಾದ ಮುಖವಾಣಿ ಸಾಮ್ನಾದಲ್ಲಿ ಬರೆದಿರುವ ಸಂಪಾದಕೀಯದಲ್ಲಿ, ಕೋವಿಡ್ 19 ವೈರಸ್ ಹತೋಟಿಗೆ ತರಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಜತೆಗೂಡಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಪಕ್ಷ ಒತ್ತಡ ಹೇರಬೇಕಾಗಿದೆ. ಜಾಗತಿಕವಾಗಿ 25,0000 ಲಕ್ಷ ಮಂದಿ ಕೋವಿಡ್ 19 ವೈರಸ್ ಪೀಡಿತರಾಗಿದ್ದು, 2 ಲಕ್ಷಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ.

ಮಹಾರಾಷ್ಟ್ರದಲ್ಲಿ ಬುಧವಾರ ಕೋವಿಡ್ 19 ವೈರಸ್ ಪೀಡಿತರ ಸಂಖ್ಯೆ 5,218ಕ್ಕೆ ಏರಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇದರಲ್ಲಿ 722 ಮಂದಿ ಗುಣಮುಖರಾಗಿದ್ದು, ರಾಜ್ಯದಲ್ಲಿ ಕೋವಿಡ್ 19 ವೈರಸ್ ಗೆ ಬಲಿಯಾದವರ ಸಂಖ್ಯೆ 251ಕ್ಕೆ ತಲುಪಿದೆ ಎಂದು ಹೇಳಿದೆ.

ಮಹಾರಾಷ್ಟ್ರದಲ್ಲಿ ಮಂಗಳವಾರದಂದು ಕೋವಿಡ್ 19 ವೈರಸ್ ಗೆ 19 ಮಂದಿ ಸಾವನ್ನಪ್ಪಿದ್ದರು. ಇದರಲ್ಲಿ 12 ಮಂದಿ ಮುಂಬೈ, ಪುಣೆಯಲ್ಲಿ 2, ಥಾಣೆಯಲ್ಲಿ 2 ಹಾಗೂ ಪಿಂಪ್ರಿ ಚಿಂಚಾವಾಡ್ ನಲ್ಲಿ ಒಬ್ಬರು ಸಾವನ್ನಪ್ಪಿದ್ದರು. ದೇಶದಲ್ಲಿ ಅತೀ ಹೆಚ್ಚು ಕೋವಿಡ್ 19 ಸೋಂಕಿಗೆ ಒಳಗಾದ ರಾಜ್ಯದಲ್ಲಿ ಮಹಾರಾಷ್ಟ್ರ ಒಂದನೇ ಸ್ಥಾನದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next