Advertisement

ಕೆಮ್ರಾಲ್‌ ಗ್ರಾಮ ಸಭೆ

12:48 PM Jan 21, 2018 | |

ಕೆಮ್ರಾಲ್‌ : ಇಲ್ಲಿನ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕೈಗೆಟಕುವ ರೀತಿಯಲ್ಲಿ ವಿದ್ಯುತ್‌ ತಂತಿಗಳಿವೆ. ಚರ್ಚ್‌ ಸಮೀಪದ ಬಸ್‌ ನಿಲ್ದಾಣ ತೆರವುಗೊಳಿಸಿ, ಪಶುವೈದ್ಯರು, ಸರಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವಂತೆ ಕೆಮ್ರಾಲ್‌ ಗ್ರಾ.ಪಂ.ನ ಪಂಜ ಕೆಮ್ರಾಲ್‌, ಕೊಯಿಕುಡೆ ಗ್ರಾಮಗಳ 2017- 18ನೇ ಸಾಲಿನ 2ನೇ ಹಂತದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದರು. ಗ್ರಾ.ಪಂ. ಅಧ್ಯಕ್ಷ ನಾಗೇಶ್‌ ಅಂಚನ್‌ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಗೈರಿಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ಜರಗಿತು.

Advertisement

ವೈದ್ಯರ ಮಾಹಿತಿ ನೀಡಿ
ಕೆಮ್ರಾಲ್‌ ಪಶು ವೈದ್ಯಕೀಯ ಕೇಂದ್ರದಲ್ಲಿ ಕೆಳದ ಮೂರು ವರ್ಷಗಳಿಂದ ವೈದ್ಯರು ಇರಲಿಲ್ಲ. ಆದರೆ ಒಂದೂವರೆ ತಿಂಗಳ ಹಿಂದೆ ವೈದ್ಯರು ಬಂದಿದ್ದಾರೆ. ಈ ಬಗ್ಗೆ ಜನರಿಗೆ ಮಾಹಿತಿಯೇ ಇಲ್ಲ. ವೈದ್ಯರ ಮೊಬೈಲ್‌ ನಂಬರ್‌ ನೀಡಿ, ಇಲ್ಲವಾದರೆ ವಾರದಲ್ಲಿ ಇಷ್ಟು ದಿನ ಇರ್ತಾರೆ ಎಂಬ ಮಾಹಿತಿ ನೋಟಿಸ್‌ ಬೋರ್ಡ್‌ನಲ್ಲಿ ಹಾಕಿ ಎಂದು ಬೇಬಿ ಕೋಟ್ಯಾನ್‌, ಸುಂದರ ಕೋಟ್ಯಾನ್‌ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವೈದ್ಯ ಡಾ| ಮನೋಹರ್‌, ವಾರದಲ್ಲಿ ಹೆಚ್ಚಿನ ದಿನ ಇರುವುದಾಗಿ ತಿಳಿಸಿದರು.

ಗ್ರಾ. ಪಂ. ವ್ಯಾಪ್ತಿಯ ಅತ್ತೂರು ಬೈಲಿನ ಹಲವೆಡೆ ಗದ್ದೆಯ ಬಯಲು ಪ್ರದೇಶದಲ್ಲಿ ತಂತಿಗಳು ಜೋತು ಬಿದ್ದಿದ್ದು, ಅಪಾಯಕಾರಿಯಾಗಿದೆ. ಯಾಕೆ ಕ್ರಮಕೈಗೊಂಡಿಲ್ಲ ಎಂದು ಬಾಲದಿತ್ಯ ಆಳ್ವ ಪ್ರಶ್ನಿಸಿದಾಗ, ಯಾವ ಜಾಗ ಅಂತ ಹೇಳಿ ಕ್ರಮ ಕೈಗೊಳ್ಳಲಾಗುವುದು ಎಂದು ಕಿನ್ನಿಗೋಳಿ ಮೆಸ್ಕಾಂ ಅಧಿಕಾರಿ ದಾಮೋದರ್‌ ತಿಳಿಸಿದರು. ಕಿನ್ನಿಗೋಳಿ ಮೆಸ್ಕಾಂ ಇಲಾಖೆಯಲ್ಲಿ ರಾತ್ರಿ ಹೊತ್ತು ಕಚೇರಿಯಲ್ಲಿ ಜನ ಇಲ್ಲ. ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ನಿತಿನ್‌ ವಾಸ್‌ ದೂರಿದಾಗ ,ಮೂಲ್ಕಿ ಕಚೇರಿಯನ್ನು ಸಂರ್ಪಕಿಸುವಂತೆ ಅಧಿಕಾರಿಗಳು ತಿಳಿಸಿದರು.

ಪದ್ಮನೂರು ಮುಲ್ಲಟ್ಟ ಸಮೀಪ ಮನೆಯ ಹತ್ತಿರದ ತಂತಿ ಬದಲಿಸಿ ಎಂದು ಕಳೆದ ಎಂಟು ತಿಂಗಳಿನಿಂದ ದೂರು ನೀಡಿದ್ದರೂ ಕ್ರಮಕೈಗೊಂಡಿಲ್ಲ ಎಂದು ಕುಮಾರ್‌ ದೂರಿದಾಗ, ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳುವುದಾಗಿ ಅಧಿಕಾರಿ ಭರವಸೆ ನೀಡಿದರು. ಮತದಾರರ ಗುರುತು ಚೀಟಿ ಸರಿಪಡಿಸಿ ಹಾಗೂ ತಿದ್ದುಪಡಿಗೆ ಕಳುಹಿಸಿದರೆ 10 ತಿಂಗಳಾದರೂ ಬಂದಿಲ್ಲ ಯಾಕೆ ಎಂದು ಕುಮಾರ್‌ ಪ್ರಶ್ನಿಸಿದಾಗ, ಮುಂದಿನ ಚುನಾವಣೆಗಿಂತ ಮೊದಲು ಬರುತ್ತೆ ಎಂದು ಕಂದಾಯ ಇಲಾಖೆಯ ಸಂತೋಷ್‌ ತಿಳಿಸಿದರು.

ಮದರ್‌ ತೆರೆಸಾ ವಸತಿ ನಿವೇಶನದಲ್ಲಿ ಒಳಚಂರಡಿ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಇದರಿಂದ ಪರಿಸರದಲ್ಲಿ ದುರ್ನಾತ ಬೀರುತ್ತಿದೆ ಎಂದು ಕಿಶೋರ್‌ ಡಯಾಸ್‌ ದೂರಿದರು. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪಿಡಿಒ ರಮೇಶ್‌ ರಾಥೋಡ್‌ ತಿಳಿಸಿದರು. ಚರ್ಚ್‌ ಬಸ್‌ ನಿಲ್ದಾಣ ಅಕ್ರಮ ಅಡ್ಡೆಯಾಗಿದೆ. ಪುಂಡು ಪೋಕರಿಗಳು ತಾಣವಾಗಿದೆ. ಅದನ್ನು ತೆರವುಗೊಳಿಸಿ ಎಂದು ಸೀತಾರಾಮ ಒತ್ತಾಯಿಸಿದರು. ಈ ಬಗ್ಗೆ ನಿರ್ಣಯ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.

Advertisement

ಆಂಗ್ಲ ಭಾಷೆಗೆ ಅನುಮತಿ ನೀಡಿ
ಕೆಮ್ರಾಲ್‌ ಅತ್ತೂರು ಕನ್ನಡ ಶಾಲೆಯಲ್ಲಿ ಮಕ್ಕಳು ಬರುತ್ತಿಲ್ಲ. ಆಂಗ್ಲ ಭಾಷೆಯ ವ್ಯಾಮೋಹದಿಂದ ಶಾಲೆ ಮುಚ್ಚುವ ಭೀತಿ ಇದೆ. ಕನ್ನಡ ಶಾಲೆಯಲ್ಲಿ ಒಂದನೇ ತರಗತಿಯಿಂದ ಆಂಗ್ಲ ಭಾಷೆಗೆ ಅನುಮತಿ ನೀಡಿ ಎಂದು ಬಾಲಾದಿತ್ಯ ಆಳ್ವ ಒತ್ತಾಯಿಸಿದಾಗ, ಕಸ್ತೂರಿ ಪಂಜ ಮಾತನಾಡಿ, ಜಿಲ್ಲೆಯಲ್ಲಿ ಆಂಗ್ಲ ಶಾಲೆಗೆ ಅನುಮತಿ ನೀಡಿಲ್ಲ. ನೀಡಿದ್ದರೂ ಅದರಲ್ಲಿ ಕನ್ನಡ ಕಲಿಸಬೇಕು ಎಂಬ ನಿಯಮ ಇದೆ ಎಂದು ತಿಳಿಸಿದರು. ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಡಾ| ಮಾಧವ ಪೈ, ಪಡಿತರ ಚೀಟಿ ಇಲಾಖೆಯ ವಾಸು ಶೆಟ್ಟಿ, ಶಿಕ್ಷಣ ಇಲಾಖೆಯ ಐರಿನ್‌ ಪಿಂಟೋ, ಪಂಚಾಯತ್‌ ರಾಜ್ಯ ಇಲಾಖೆಯ ಪ್ರಶಾಂತ್‌ ಆಳ್ವ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಶ್ವಿ‌ನಿ, ಕೃಷಿ ಇಲಾಖೆಯ ಎಲ್ಲಣ್ಣ ಗೌಡ ಇಲಾಖಾ ಮಾಹಿತಿ ನೀಡಿದರು.

ತಾ.ಪಂ. ಸದಸ್ಯೆ ವಜ್ರಾಕ್ಷಿ ಶೆಟ್ಟಿ , ಶುಭಲತಾ ಶೆಟ್ಟಿ, ಉಪಾಧ್ಯಕ್ಷೆ ತುಳಸಿ ಶೆಟ್ಟಿಗಾರ್‌, ಗ್ರಾ. ಪಂ. ಸದಸ್ಯರಾದ ದೀಪಕ್‌ ಕೋಟ್ಯಾ ನ್‌, ಲೀಲಾ ಪೂಜಾರ್ತಿ, ಮಯ್ಯದ್ದಿ , ಸುಧಾಕರ ಶೆಟ್ಟಿ , ಸೇಸಪ್ಪ ಸಾಲ್ಯಾನ್‌ , ಸುರೇಶ್‌ ದೇವಾಡಿಗ ಪಂಜ, ಹರಿಪ್ರಸಾದ್‌, ರೇವತಿ ಶೆಟ್ಟಿಗಾರ್‌, ಮಮತಾ ಅಮೀನ್‌, ಪ್ರಮೀಳಾ ಡಿ. ಶೆಟ್ಟಿ , ಸುಮತಿ, ಆಶಾಲತಾ, ಮಾಲತಿ ಆಚಾರ್ಯ, ಲೋಹಿತ್‌ ಉಪಸ್ಥಿತರಿದ್ದರು. ರಮೇಶ್‌ ರಾಥೋಡ್‌ ನಿರೂಪಿಸಿದರು. ಕೇಶವ ದೇವಾಡಿಗ ವಂದಿಸಿದರು.

ಇಲಾಖಾ ಅಧಿಕಾರಿಗಳ ಗೈರು
ಗ್ರಾಮ ಪಂಚಾಯತ್‌ನಲ್ಲಿ ವರ್ಷಕ್ಕೆ ಎರಡು ಸಲ ಮಾತ್ರ ಗ್ರಾಮ ಸಭೆ ಆಗುತ್ತದೆ. ಆದರೆ ಮಾಹಿತಿ ನೀಡುವ ಅಧಿಕಾರಿಗಳು ಗೈರು ಹಾಜರಾಗುತ್ತಾರೆಎಂದು ನಿತಿನ್‌ ವಾಸ್‌ ಹಾಗೂ ಬಾಲದಿತ್ಯ ಆಳ್ವ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷೆ ಕಸ್ತೂರಿ ಪಂಜ, ಈ ಬಗ್ಗೆ ನಿರ್ಣಯ ಮಾಡಿ ಜಿ.ಪಂ.ಗೆ ಕಳುಹಿಸಿ. ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next