Advertisement
ಸಬ್‌ಸ್ಪೆಷಾಲಿಟಿ ಕೇಂದ್ರವಾಗಿ ಭ್ರೂಣ ಕ್ಲಿನಿಕ್‌ನ ಪಾತ್ರವೇನು?
ಮಾಮೂಲಿ ಸ್ಕ್ಯಾನಿಂಗ್ ಸಂದರ್ಭದಲ್ಲಿ ಭ್ರೂಣಶಿಶುವಿನಲ್ಲಿ ವಿಕಲತೆ ಕಂಡುಬಂದಲ್ಲಿ ಗರ್ಭಧಾರಣೆಯ ನಿರ್ವಹಣೆಯನ್ನು ಸಬ್ ಸ್ಪೆಷಾಲಿಟಿ ಕ್ಲಿನಿಕ್‌ನಲ್ಲಿ ಭ್ರೂಣ ಸಂಬಂಧಿ ಎಲ್ಲ ಸಮಸ್ಯೆಗಳ ಬಗ್ಗೆ ಉತ್ತಮ ಆರೈಕೆ ಒದಗಿಸುವ ಮೂಲಕ ನಿಭಾಯಿಸಲಾಗುವುದು. ಭ್ರೂಣ ಚಿಕಿತ್ಸಾ ಕೇಂದ್ರವು ಒಂದು ವಿಶಿಷ್ಟ ಮಲ್ಟಿಸ್ಪೆಷಾಲಿಟಿ ಕೇಂದ್ರವಾಗಿದ್ದು ಸಾಧ್ಯವಿರುವ ಉತ್ತಮ ಫಲಿತಾಂಶ ನೀಡಲು ನೆರವಾಗುವ ತಜ್ಞರನ್ನು ಒಳಗೊಂಡಿದೆ. ಈ ಸಬ್‌ಸ್ಪೆಷಾಲಿಟಿ ಕ್ಲಿನಿಕ್‌ನಲ್ಲಿ ಈ ವಿಷಯದ ಬಗ್ಗೆ ವಿಶೇಷ ಪರಿಣತಿ ಪಡೆದ ಪ್ರಸೂತಿ ಶಾಸ್ತ್ರಜ್ಞರು ಇದ್ದು, ಉಳಿದ ತಜ್ಞರ ಅಭಿಪ್ರಾಯ ಪಡೆದು ಸಮಸ್ಯೆಗೆ ಸಮಗ್ರ ವಿಧಾನದ ಮೂಲಕ ಪರಿಹಾರ ಕಂಡುಕೊಳ್ಳುವ ಗುರುತರ ಜವಾಬ್ದಾರಿ ಅವರ ಮೇಲಿರುತ್ತದೆ. ಉತ್ತಮ ಆರೈಕೆ ಒದಗಿಸಲು ಜೆನೆಟಿಕ್ಸ್ ತಜ್ಞರು, ಜೆನೆಟಿಕ್ ಪ್ರಯೋಗ ಶಾಲೆ ಮತ್ತು ಜೆನೆಟಿಕ್ ಕೌನ್ಸಲರ್‌ಗಳ ಆವಶ್ಯಕತೆ ಇರುತ್ತದೆ. ಇದರೊಂದಿಗೆ, ಭ್ರೂಣ ಚಿಕಿತ್ಸಾ ಕೇಂದ್ರವು ರೇಡಿಯಾಲಜಿ ತಜ್ಞರು, ನವಜಾತ ಶಿಶು ತಜ್ಞರು, ಮಕ್ಕಳ ಶಸ್ತ್ರಚಿಕಿತ್ಸಕರು, ಪೆರಿನೇಟಲ್ ಪ್ಯಾಥಲಾಜಿಸ್ಟರು ಮತ್ತು ಇನ್ನೂ ಹಲವರನ್ನೊಳಗೊಂಡಿರುತ್ತದೆ.
ಹೌದು. ಡಯಾಗ್ನೊàಸಿಸ್ ಪೂರ್ತಿಗೊಳಿಸಲು ಮತ್ತು ಈ ಸಮಸ್ಯೆಗೆ ಕಾರಣವೇನು ಎಂಬ ನಿರ್ಧಾರಕ್ಕೆ ಬರಲು ಭ್ರೂಣ ಚಿಕಿತ್ಸಾ ಕ್ಲಿನಿಕ್‌ನಲ್ಲಿ ಹಲವಾರು ಬೇರೆ ಪರೀಕ್ಷೆಗಳನ್ನು ಮಾಡುತ್ತಾರೆ. ಒಂದು ಸಾಮಾನ್ಯ ಉದಾಹರಣೆ ಎಂದರೆ ಮ್ನಿಯೋಸೆಂಟೆಸಿಸ್‌ನಂಥ ಇನ್ವೇಸಿವ್ ಡಯಾಗ್ನೊàಸ್ಟಿಕ್ ಪ್ರಕ್ರಿಯೆಗಳು. ಇದರಲ್ಲಿ ಒಂದು ಸಪೂರ ಸೂಜಿಯನ್ನು ಗರ್ಭಿಣಿಯ ಗರ್ಭಾಶಯದೊಳಗೆ ತೂರಿಸಿ, ಮಗುವಿನ ಸುತ್ತಲಿನ ದ್ರವದ ಸ್ವಲ್ಪ ಪ್ರಮಾಣವನ್ನು ತೆಗೆಯಲಾಗುತ್ತದೆ ಮತ್ತು ಆನುವಂಶೀಯ ವಿಕಲತೆಯನ್ನೊಳಗೊಂಡಂತೆ ಅನೇಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
Related Articles
ವಿಕಲತೆಗೆ ಏನಾದರೂ
ಪರಿಹಾರವಿದೆಯೇ?
ಹೌದು. ಗರ್ಭಾವಸ್ಥೆಯಲ್ಲಿನ ವಿವಿಧ ಭ್ರೂಣ ಸಂಬಂಧಿ ಸಮಸ್ಯೆಗಳಿಗೆ ಹಲವಾರು ಬಗೆಯ ಚಿಕಿತ್ಸಾ ಕ್ರಮಗಳಿವೆ. ಇದು ಪ್ರಸೂತಿ ಶಾಸ್ತ್ರದಲ್ಲಿ ವೇಗವಾಗಿ ಬೆಳೆಯುತ್ತಿರುವ ವಿಭಾಗವಾಗಿದ್ದು, ನಮ್ಮ ದೇಶದಲ್ಲಿ ದಶಕದ ಹಿಂದೆ ಯಾವುದೇ ಪರಿಹಾರವಿಲ್ಲದ ಭ್ರೂಣ ಸಮಸ್ಯೆಗಳಿಗೆ ಇಂದು ಉತ್ತಮ ಪರಿಹಾರದ ನಿರೀಕ್ಷೆಯಿದೆ. ನಮ್ಮ ದೇಶದ ಭ್ರೂಣ ಚಿಕಿತ್ಸಾ ತಜ್ಞರು ಪಾಶ್ಚಾತ್ಯ ದೇಶಗಳ ಹೆಸರುವಾಸಿ ಕೇಂದ್ರಗಳಲ್ಲಿ ತರಬೇತಿ ಪಡೆದು ಬಂದ ಫಲವಾಗಿ ಈಗ ನಮ್ಮಲ್ಲೂ ಚಿಕಿತ್ಸಾ ಆಯ್ಕೆಗಳ ವ್ಯಾಪ್ತಿ ತ್ವರಿತವಾಗಿ ವಿಸ್ತರಿಸುತ್ತಾ ಹೋಗುತ್ತಿದೆ. ಒಂದು ಸಾಮಾನ್ಯ ಉದಾಹರಣೆಯೆಂದರೆ ರಕ್ತಹೀನತೆಯಿರುವ ಗರ್ಭಸ್ಥ ಶಿಶುವಿಗೆ ಭ್ರೂಣದೊಳಗೆ ರಕ್ತ ಮರುಪೂರಣೆ ಮಾಡುವುದು. ಇದೊಂದು ಯಶಸ್ವೀ ಚಿಕಿತ್ಸಾ ಕ್ರಮವಾಗಿದ್ದು, ಇದು ಲಭ್ಯವಿರದಿದ್ದಲ್ಲಿ ತಂದೆ-ತಾಯಿಯರು ತಮ್ಮ ಮಗುವನ್ನು ಖಂಡಿತವಾಗಿಯೂ ಕಳೆದುಕೊಳ್ಳುತ್ತಿದ್ದರು. ವಿವಿಧ ಬಗೆಯ ಚಿಕಿತ್ಸಾ ಕ್ರಮಗಳನ್ನು ಬಳಸಿ ಅವಳಿ ಮಕ್ಕಳ ಗರ್ಭಧಾರಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಚೆನ್ನಾಗಿ ನಿಭಾಯಿಸಬಹುದು. ವಿಶೇಷವಾಗಿ ಅವಳಿ ಮಕ್ಕಳ ಗರ್ಭಧಾರಣೆಯಲ್ಲಿ ಶಿಶುಗಳು ಒಂದೇ ಕರುಳಬಳ್ಳಿಯನ್ನು ಹಂಚಿಕೊಳ್ಳುವುದರಿಂದ ನಾವು ಫೀಟೋಸ್ಕೋಪಿಕ್ ಲೇಸರ್‌ನಂಥ ಚಿಕಿತ್ಸಾ ಕ್ರಮಗಳನ್ನು ಬಳಸಬಹುದು. ಈ ಚಿಕಿತ್ಸೆಯು ಅವಳಿಗಳಲ್ಲಿ ರಕ್ತಪರಿಚಲನೆಯ ಸಂವಹನವನ್ನು ಕಡಿಮೆ ಮಾಡಿ ಗರ್ಭಧಾರಣೆಯ ಫಲಿತಾಂಶದಲ್ಲಿ ಗಮನಾರ್ಹ ಪ್ರಗತಿಯನ್ನುಂಟು ಮಾಡುತ್ತದೆ.
Advertisement
ಭ್ರೂಣ ಚಿಕಿತ್ಸೆಗೆ ಸಂಬಂಧಿಸಿದಂತೆ ಫಲಿತಾಂಶದಲ್ಲಿ ಅಚ್ಚರಿಯ ಪ್ರಗತಿ ಸಾಧಿಸಿದಂತಹ ಅನೇಕ ಯಶಸ್ವೀ ಕತೆಗಳಿವೆ. ಆದರೆ ಸದ್ಯಕ್ಕೆ ಆಯ್ದ ಕೆಲವು ಭ್ರೂಣ ಸಂಬಂಧಿ ಸಮಸ್ಯೆಗಳಿಗೆ ಮಾತ್ರ ಚಿಕಿತ್ಸಾ ಕ್ರಮಗಳು ಲಭ್ಯವಿವೆ. ಇದೊಂದು ವಿಸ್ತರಿಸುತ್ತಲೇ ಹೋಗುವ ಕ್ಷೇತ್ರವಾಗಿದ್ದು ಸದ್ಯದಲ್ಲೇ ಭ್ರೂಣ ಸಂಬಂಧಿತ ಹೆಚ್ಚು ಹೆಚ್ಚು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು.
ಆದರೂ ಭ್ರೂಣದಲ್ಲಿ ಆನುವಂಶೀಯ ವಿಕಲತೆಗಳನ್ನು “ವಾಸಿ’ ಮಾಡಲು ಸಾಧ್ಯವಿಲ್ಲ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಭ್ರೂಣದಲ್ಲಿರುವಾಗ ಮಗುವಿನ ಹಲವು ದೇಹರಚನಾ ಸಮಸ್ಯೆಗಳಿಗೆ ಪರಿಹಾರ ಕ್ರಮಗಳು ಲಭ್ಯವಿಲ್ಲ. ಇಂತಹ ವಿಕಲತೆಗಳಿದ್ದಲ್ಲಿ, ಪ್ರಸವಕ್ಕಾಗಿ ಉತ್ತಮ ಸಮಯ ಹಾಗೂ ಉತ್ತಮ ಆಸ್ಪತ್ರೆ ಯಾವುದು ಎಂಬುದನ್ನು ನಿರ್ಧರಿಸಲು ಮುಂದಿನ ಭೇಟಿಗಳನ್ನು ನಿಗದಿಪಡಿಸಲಾಗುತ್ತದೆ. ಈ ಕ್ರಮದಿಂದ ಜನನದ ಬಳಿಕ ಶಿಶುವಿಗೆ ಸಾಧ್ಯವಿರುವಷ್ಟು ಉತ್ತಮ ಆರೈಕೆ ನೀಡಲು ಸಾಧ್ಯವಾಗುತ್ತದೆ.
ಮುಗಿಸುವ ಮುನ್ನ… ಪ್ರತಿಯೊಂದು ಭ್ರೂಣವನ್ನು ಈಗ ಪ್ರತ್ಯೇಕ ವ್ಯಕ್ತಿಯನ್ನಾಗಿ ಪರಿಗಣಿಸಲಾಗುತ್ತದೆ. ಮೇಲೆ ವಿಚಾರಿಸಿದಂತೆ, ಭ್ರೂಣ ಚಿಕಿತ್ಸೆಯನ್ನು ಒಂದು ಸ್ಪೆಷಾಲಿಟಿ ಆಗಿ ಪರಿಗಣಿಸುವುದು ಎಲ್ಲ ಟಿರ್ಷಿಯರಿ ಸಂಸ್ಥೆಗಳ ಅಗತ್ಯವಾಗಿದೆ. ಭ್ರೂಣ ಚಿಕಿತ್ಸೆಯ ಉದ್ದೇಶವೇನೆಂದರೆ ಭ್ರೂಣ ಶಿಶುವಿಗೆ ಉತ್ತಮ ಆರೈಕೆ ಕಲ್ಪಿಸುವುದು. ಆರೋಗ್ಯಯುತ ಮಗು ಎಲ್ಲ ತಂದೆ-ತಾಯಿಯರ ಕನಸು ಮತ್ತು ಭ್ರೂಣ ಚಿಕಿತ್ಸಾತಜ್ಞರು ಈ ಕನಸನ್ನು ಸಾಕಾರಗೊಳಿಸಲು ಶ್ರಮಿಸುತ್ತಾರೆ.