Advertisement

ಯೋಗ-ಧ್ಯಾನ-ಪ್ರಾಣಾಯಾಮ ಅಳವಡಿಸಿಕೊಳ್ಳಿ

03:46 PM Dec 10, 2019 | Team Udayavani |

ರಾಣಿಬೆನ್ನೂರ: ಮನುಷ್ಯನ ವಿಕಾಸತೆಗೆ ಮತ್ತು ನಿತ್ಯದ ಕ್ರೀಯಾ ಚಟುವಟಿಕೆಗೆ ಯೋಗ, ಧ್ಯಾನ, ಪ್ರಾಣಾಯಾಮ ಪ್ರತಿಯೊಬ್ಬರು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹಾವೇರಿ ಜಿಲ್ಲಾ ಪತಂಜಲಿ ಯೋಗ ಸಮಿತಿಯ ಮಹಿಳಾ ಪ್ರಭಾರಿ ಜ್ಯೋತಿ ಜಂಬಿಗಿ ಹೇಳಿದರು.

Advertisement

ಇಲ್ಲಿನ ಮೃತ್ಯುಂಜಯ ನಗರದ ಸಭಾಭವನದಲ್ಲಿ ನಡೆದ ಜಿಲ್ಲಾ ಪತಂಜಲಿ ಮಹಿಳಾ ಯೋಗ ಸಮಿತಿ ಆಯೋಜಿಸಿದ್ದ ನೂತನ ಶ್ರೀ ದಾನೇಶ್ವರಿ ಯೋಗ ಧ್ಯಾನ ಮಂದಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಯೋಗವನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ವಾಸ್ತವಿಕ ಸತ್ಯವಾಗಿ ಕಂಡುಬರುತ್ತದೆ ಎಂದರು.

ಹೆಣ್ಣು ಕೇವಲ ನಾಲ್ಕು ಗೋಡೆಗೆ ಮಾತ್ರ ಸೀಮಿತವಾಗದೇ, ಸಮಾಜಮುಖೀ ಕಾರ್ಯದಲ್ಲಿ ತೊಡಗಿಕೊಳ್ಳಬೇಕು, ಅಲ್ಲದೆ ಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿಯೇ ಯೋಗ ಕಲಿಸುವುದು ಸೂಕ್ತ. ಅಂದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.

ಜಿಲ್ಲಾ ಭಾರತ್‌ ಸ್ವಾಭಿಮಾನ್‌ ಟ್ರಸ್ಟ್‌ ಅಧ್ಯಕ್ಷ ಆರ್‌.ಎನ್‌.ರಾಠೊಡ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷಗಳಿಂದ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡು ಯೋಗ, ಧ್ಯಾನ, ಪ್ರಾಣಾಯಾಮದ ಮೂಲಕ ಸಾವಿರಾರು ಕೇಂದ್ರಗಳನ್ನು ಆರಂಭಿಸಲಾಗಿದ್ದು, ಈ ಭಾಗದ ಸಾವಿರಾರು ಜನತೆ ಆರೋಗ್ಯಯುತ ಬದುಕು ಸಾಗಿಸುತ್ತಿದ್ದಾರೆ. ಕೆಲವು ಸಮಯ ಮೀಸಲಿಟ್ಟು ಇದರ ಪ್ರಯೋಜನ ಪಡೆಯಲು ಮುಂದಾಗಬೇಕು ಎಂದರು.

ಸುನಂದಮ್ಮ ತಿಳವಳ್ಳಿ ಅಧ್ಯಕ್ಷತೆ ವಹಿಸಿದ್ದರು. ಎಂ.ಬಿ.ಮೊಟಳ್ಳಿ, ಹೇಮಾ ತಾಳೂರ, ಶೋಭಾ ಗುಡಮಿ, ಕವಿತಾ ಕುಬಸದ, ಲಲಿತಾ ಮೇಲಗಿರಿ, ಶಶಿಕಲಾ ಬಡೆಂಕಲ್‌, ರಾಧಾ, ಗೀತಾ, ಶಿವಾನಂದ ಬಡೆಂಕಲ್‌, ಆರ್‌.ಬಿ.ಪಾಟೀಲ, ಪಾಂಡಪ್ಪ ಪೂಜಾರ, ಪ್ರಕಾಶ ಮಾಗೋಡ, ಕೃಷ್ಣಮೂರ್ತಿ ಐರಣಿ, ವಾಸುದೇವ ಗುಪ್ತಾ, ಪ್ರಕಾಶ ಚಂದ್ರಶೇಖರಮಠ ಸೇರಿದಂತೆ ಯೋಗಸಾಧಕರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next