Advertisement

ಉದ್ಯೋಗ ನೀಡಿ ಆತ್ಮನಿರ್ಭರ ಸಾಕಾರಗೊಳಿಸಿ : ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್

10:33 PM Dec 07, 2021 | Team Udayavani |

ಬೆಂಗಳೂರು: ಕಾರ್ಪೊರೆಟ್‌ ಸಂಸ್ಥೆಗಳು ಹಾಗೂ ಉದ್ಯಮಗಳು ಮಾಜಿ ಸೈನಿಕರಿಗೆ ಉದ್ಯೋಗ ಕಲ್ಪಿಸುವ ಮೂಲಕ ಆತ್ಮನಿರ್ಭರ ಭಾರತ ಸಾಕಾರಗೊಳಿಸಬೇಕು ಎಂದು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್ ಅವರು ಹೇಳಿದ್ದಾರೆ.

Advertisement

ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಸೇನೆ ವಿಶ್ವದ ಶ್ರೇಷ್ಠ ಸೈನ್ಯದಲ್ಲಿ ಒಂದು ಎಂದು ಪರಿಗಣಿಸಲಾಗುತ್ತಿದೆ. ದೇಶದ ಸೈನ್ಯದ ಬಗ್ಗೆ ಎಲ್ಲರಿಗೂ ಹೆಮ್ಮೆ ಇದೆ.

ಕೇಂದ್ರ ಸರಕಾರ ಮಾಜಿ ಸೈನಿಕರಿಗೆ ಅನೇಕ ಯೋಜನೆಗಳನ್ನು ರೂಪಿಸಿದೆ. ಸೈನಿಕ ಕಲ್ಯಾಣ ಇಲಾಖೆ ಮೂಲಕ ಅನೇಕ ಯೋಜನೆಗಳು ಲಭಿಸುತ್ತಿವೆ. ಮಾಜಿ ಸೈನಿಕರು ಇದರ ಉಪಯೋಗ ಪಡೆಯಬೇಕು ಎಂದು ಹೇಳಿದರು.

ಇದನ್ನೂ ಓದಿ:ಛಾಯಾಗ್ರಾಹಕ ಸೆರೆಹಿಡಿದ ಸೂರ್ಯನ ಚಿತ್ರಕ್ಕೆ ಬರೀ 3, 771 ರೂ.!

ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಸೈನಿಕರ ಸೇವೆಯು, ಕೇವಲ ಗಡಿ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರದೆ ದೇಶದ ಆಂತರಿಕ ಗಲಭೆಗಳನ್ನು ಹತ್ತಿಕ್ಕಲು, ಸೇನಾ ಸಿಬಂದಿಗಳ ಬಳಕೆ ಆಗುತ್ತಿದೆ.

Advertisement

ಪಂಜಾಬ್‌ ರಾಜ್ಯದಲ್ಲಿ ಉಗ್ರವಾದಿಗಳನ್ನು ನಿಯಂತ್ರಿಸುವಲ್ಲಿ, ಕಾಶ್ಮೀರದಲ್ಲಿ ಉಗ್ರವಾದಿಗಳ ಕಿರುಕುಳಗಳನ್ನು ಹತೋಟಿಗೆ ತರುವಲ್ಲಿ ನಮ್ಮ ಸೇನಾ ಸಿಬಂದಿಯ ಕೊಡುಗೆ ಅಪಾರ . ಸೈನಿಕರ ಹಾಗೂ ಅವರ ಕುಟುಂಬ ವರ್ಗದವರ ಕಲ್ಯಾಣಕ್ಕಾಗಿ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳು ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next