Advertisement
ಇಲ್ಲಿನ ಕಿತ್ತೂರು ಚೆನ್ನಮ್ಮ ವೃತ್ತ ಬಳಿಯ ಈದ್ಗಾ ಮೈದಾನದಲ್ಲಿ ಪಾಲಿಕೆ ವತಿಯಿಂದ ಸ್ವಾತಂತ್ರೊತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಬ್ರಿಟಿಷರ ಕಪಿಮುಷ್ಠಿಯಲ್ಲಿದ್ದ ದೇಶವನ್ನು ಮಹಾತ್ಮ ಗಾಂಧಿ ಹಾಗೂ ಅನೇಕ ಮಹನೀಯರು ತಮ್ಮ ನಿಸ್ವಾರ್ಥ ಸೇವೆ, ತ್ಯಾಗ, ಬಲಿದಾನ ಮೂಲಕ ಮುಕ್ತಗೊಳಿಸಿದರು.
Related Articles
Advertisement
ರಾಜ್ಯ ಸರಕಾರದ ವಿಶೇಷ ಅನುದಾನದ 100 ಕೋಟಿ ರೂ. ಗಳಲ್ಲಿ 70 ಕೋಟಿ ರೂ. ಕಾಮಗಾರಿ ಮುಗಿದಿದೆ. ಇನ್ನು 22 ಕೋಟಿ ರೂ. ಕಾಮಗಾರಿಗೆ ಹಾಗೂ ಸೋಲಾರ್ ಟಾಪ್ ರೂμಂಗ್‌ಗೆ ಶೀಘ್ರವೇ ಟೆಂಡರ್ ಕರೆಯಲಾಗುವುದು. 35 ಕೋಟಿ ರೂ. ವೆಚ್ಚದಲ್ಲಿ ಗಣಕೀಕೃತ ಸ್ಮಾರ್ಟ್ ಲೈಟಿಂಗ್ ವ್ಯವಸ್ಥೆಯನ್ನು ಮುಂಬರುವ ತಿಂಗಳಲ್ಲಿ ಅನುಷ್ಠಾನ ಗೊಳಿಸಲಾಗುವುದು.
ಅವಳಿ ನಗರದ ಜನತೆಗೆ ಕಾಗದ ರಹಿತ, ನಗದು ರಹಿತ ಇ-ಆಡಳಿತ ಸೇವೆ ನೀಡಲಾಗುವುದು. ಪಾಲಿಕೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಅವಳಿ ನಗರದಲ್ಲಿ 40 ಸಾವಿರ ಸಸಿಗಳನ್ನು ನೆಡಲಾಗಿದೆ. ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್ ಮುಕ್ತ ನಗರವನ್ನಾಗಿಸಲಾಗುವುದು ಎಂದರು.
ಸಂಸದ ಪ್ರಹ್ಲಾದ ಜೋಶಿ, ಶಾಸಕ ಪ್ರಸಾದ ಅಬ್ಬಯ್ಯ, ಮಹಾಪೌರ ಡಿ.ಕೆ. ಚವ್ಹಾಣ, ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ ಹೊರಕೇರಿ, ಸುಧೀರ ಸರಾಫ, ರಾಜಣ್ಣ ಕೊರವಿ, ಅಲ್ತಾಫ್ ಕಿತ್ತೂರ, ಮೋಹನ ಹಿರೇಮನಿ, ಶಿವು ಮೆಣಸಿನಕಾಯಿ, ಕೃಷ್ಣಾ ಗಂಡಗಾಳೇಕರ, ಲೀನಾ ಮಿಸ್ಕಿನ, ಎಸ್.ಎಚ್. ನರೇಗಲ್ಲ ಇತರರಿದ್ದರು.
ರಾಯಣ್ಣನ ಮೂರ್ತಿಗೆ ಮಾಲಾರ್ಪಣೆ: ಇದೇ ವೇಳೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತ್ಯುತ್ಸವ ನಿಮಿತ್ತ ರಾಯಣ್ಣನ ಪ್ರತಿಮೆಗೆ ಪಾಲಿಕೆಯಿಂದ ಮಹಾಪೌರ ಡಿ.ಕೆ. ಚವ್ಹಾಣ ಮಾಲಾರ್ಪಣೆ ಮಾಡಿದರು.