ನವದೆಹಲಿ: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) “ಇಂಡಿಯನ್ ಎಂಬೆಡೆಡ್ ವ್ಯಾಲ್ಯೂ’ (ಐಇವಿ) ನಿಗದಿಗೊಳಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಮತ್ತಷ್ಟು ಕಾಲಾವಕಾಶ ಬೇಕಾಗುತ್ತದೆ ಎಂದು ಎಲ್‌ಐಸಿ ತಿಳಿಸಿದೆ.
Advertisement
ಮಾ. 31ರವರೆ ಅನ್ವಯವಾಗುವಂತೆ ಐಇವಿ ನಿಗದಿ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿದೆ. ಇದು ಪೂರ್ಣಗೊಂಡ ನಂತರ ಹಾಗೂ ಸರ್ಕಾರದ ಕಡೆಯಿಂದ ಸಿಗಬೇಕಿರುವ ಕೆಲವು ಅನುಮತಿಗಳು ಸಿಕ್ಕ ನಂತರ, ಐಇವಿ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಲಾಗುತ್ತದೆ.
ಸದ್ಯದ ಮಟ್ಟಿಗೆ ಜು. 15ರಂದು ಐಇವಿ ಕುರಿತ ಪ್ರಕಟಣೆ ಬಿಡುಗಡೆ ಮಾಡಲು ಸಾಧ್ಯವಾಗಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ನಿಗಮ ತಿಳಿಸಿದೆ.