Advertisement

Rural ಅಂಚೆ ಸೇವಕರಿಗೆ ಸಿಹಿ ಸುದ್ದಿ: ಸಂಭಾವನೆ ಹೆಚ್ಚಳ

12:23 AM Mar 17, 2024 | Team Udayavani |

ಹೊಸದಿಲ್ಲಿ: ಭಾರತೀಯ ಅಂಚೆಯ ಬೆನ್ನೆಲುಬಾಗಿರುವ ಗ್ರಾಮೀಣ ಅಂಚೆ ಸೇವಕರ ಸಂಭಾವನೆ ಹೆಚ್ಚಿಸುವುದಾಗಿ ಕೇಂದ್ರ ಸರಕಾರ ಪ್ರಕಟಿಸಿದೆ. ಗ್ರಾಮೀಣ ಅಂಚೆ ಸೇವಕರ ಆರ್ಥಿಕ ಸಬಲೀಕರಣ ಯೋಜನೆ-2024ರಿಂದ ದೇಶದ 2.56 ಲಕ್ಷ ಗ್ರಾಮೀಣ ಅಂಚೆ ಸೇವಕರಿಗೆ ಅನುಕೂಲವಾಗಲಿದೆ ಎಂದು ಸಂಪರ್ಕ ಖಾತೆ ಸಚಿವ ಅಶ್ವಿ‌ನಿ ವೈಷ್ಣವ್‌ ತಿಳಿಸಿದ್ದಾರೆ. ಈ ಯೋಜನೆಯಂತೆ 12 ವರ್ಷ ಸೇವೆ ಸಲ್ಲಿಸಿದ ಗ್ರಾಮೀಣ ಅಂಚೆ ಸೇವಕರಿಗೆ ವಾರ್ಷಿಕ 4,320 ರೂ., 24 ವರ್ಷ ಸೇವೆ ಸಲ್ಲಿಸಿದವರಿಗೆ 5,520 ರೂ.ಮತ್ತು 36 ವರ್ಷ ಸೇವೆ ಸಲ್ಲಿಸಿದವರಿಗೆ 7,200 ಹೆಚ್ಚುವರಿ ಸಂಭಾವನೆ ದೊರೆಯಲಿದೆ.

Advertisement

ಎಲ್‌ಐಸಿ ನೌಕಕರ ವೇತನ ಶೇ.17ರಷ್ಟು ಹೆಚ್ಚಳ
ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ)ದ ಉದ್ಯೋಗಿಗಳಿಗೆ ಕೇಂದ್ರ ಸರಕಾರ ಬಂಪರ್‌ ಗಿಫ್ಟ್ ನೀಡಿದೆ. ಎಲ್‌ಐಸಿ ಉದ್ಯೋಗಿಗಳ ವೇತನವನ್ನು ಶೇ.17ರಷ್ಟು ಹೆಚ್ಚಿಸಲು ಅನುಮೋದನೆ ನೀಡಿದೆ. ಈ ಸಂಬಂಧ ಎಲ್‌ಐಸಿ ಮಾಹಿತಿ ನೀಡಿದ್ದು, 2022ರ ಆ. 1ರಿಂದಲೇ ಇದು ಪೂರ್ವಾನ್ವಯವಾಗಲಿದೆ. ನೂತನ ಪಿಂಚಣಿ ಯೋಜನೆ ಅನ್ವಯ 2010ರ ಎ.1ಕ್ಕೂ ಮುಂಚೆ ಸಂಸ್ಥೆ ಸೇರಿದ ಸುಮಾರು 24 ಸಾವಿರ ಉದ್ಯೋಗಿಗಳ ಪಿಂಚಣಿಯನ್ನೂ ಶೇ.10ರಿಂದ ಶೇ.14ಕ್ಕೆ ಏರಿಕೆ ಮಾಡಲಾಗಿದೆ. ವೇತನ ಹೆಚ್ಚಳವು 1.10 ಲಕ್ಷ ಎಲ್‌ಐಸಿ ಉದ್ಯೋಗಿಗಳಿಗೆ ಲಾಭ ತರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next