Advertisement

ಭಣಗುಡುತ್ತಿವೆ ಪೆಟ್ರೋಲ್‌ ಬಂಕ್‌ಗಳು

01:19 PM Apr 23, 2020 | Suhan S |

ಹುಬ್ಬಳ್ಳಿ: ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಶೂನ್ಯಕ್ಕಿಳಿದಿದೆ. ಇನ್ನೊಂದು ಕಡೆ ಕೋವಿಡ್ 19 ಕಾರಣದಿಂದ ನಗರದ ಬಹುತೇಕ ಪೆಟ್ರೋಲ್‌ ಬಂಕ್‌ಗಳು ವಹಿವಾಟು ಇಲ್ಲದೆ ಬಣಗುಟ್ಟುತ್ತಿವೆ. ವಾಹನ ಸಂಚಾರ ವಿರಳವಾಗಿದ್ದರಿಂದ ವಾಯು-ಶಬ್ದ ಮಾಲಿನ್ಯದಲ್ಲೂ ಗಣನೀಯ ಇಳಿಕೆಯಾಗಿದೆ.

Advertisement

ಸರಕಾರಿ-ಖಾಸಗಿ ಸಾರಿಗೆ, ರೈಲ್ವೆ ಸಂಚಾರ, ವಿವಿಧ ವಾಹನಗಳ ಸಂಚಾರ ಬಹುತೇಕ ಸ್ಥಗಿತಗೊಂಡಿದ್ದರಿಂದ ಪೆಟ್ರೋಲ್‌-ಡಿಸೇಲ್‌ ಬಳಕೆ ಪ್ರಮಾಣ ಗಣನೀಯವಾಗಿ ತಗ್ಗಿದೆ. ನಗರದಲ್ಲಿ ಸುಮಾರು 50ಕ್ಕೂ ಹೆಚ್ಚು ವಿವಿಧ ಕಂಪೆನಿಗಳ ಪೆಟ್ರೋಲ್‌ ಪಂಪ್ ಗ್ಳಿದ್ದು, ಅಲ್ಲೆಲ್ಲ ಈಗಾಗಲೇ ಕಳೆದ ಒಂದು ತಿಂಗಳಿಂದ ಖಾಸಗಿ ವಾಹನಗಳು ಪೆಟ್ರೋಲ್‌, ಡಿಸೇಲ್‌ ಹಾಕಿಸಿಕೊಳ್ಳುವುದು ಬಂದ್‌ ಆಗಿದೆ. ಲಾಕ್‌ಡೌನ್‌ ನಿಂದ ಸಾವಿರಾರು ವಾಹನಗಳು ಮನೆಯ ಅಂಗಳ ಬಿಟ್ಟು ಹೊರ ಬಂದಿಲ್ಲ. ಇದರಿಂದ ಸುಮಾರು ಶೇ.70 ಪೆಟ್ರೋಲ್‌ ಹಾಗೂ ಡಿಸೇಲ್‌ ಉಳಿತಾಯವಾಗಿದೆ ಎನ್ನುಬಹುದು.

ಕೃಷಿ-ಅತ್ಯವಶ್ಯಕ ವಾಹನಗಳಿಗೆ ಮಾತ್ರ: ನಗರದಲ್ಲಿರುವ ಬಹುತೇಕ ಪೆಟ್ರೋಲ್‌ ಪಂಪ್‌ಗ್ಳಲ್ಲಿ ಅವಶ್ಯಕವಾಗಿ ಬೇಕಾಗಿರುವ ವಾಹನಗಳು ಅಂದರೆ ಆಂಬ್ಯುಲನ್ಸ್‌, ಕೃಷಿ ಕಾರ್ಯದ ವಾಹನ, ಪೊಲೀಸ್‌ ವಾಹನ, ವಿವಿಧ ಇಲಾಖೆಗಳ ವಾಹನಗಳು, ಅವಶ್ಯಕ ವಸ್ತುಗಳ ಸಾಗಣೆ ವಾಹನ, ತುರ್ತು ಸೇವೆಯಲ್ಲಿದ್ದವರು, ತುರ್ತು ಕಾರ್ಯಕ್ಕೆಂದು ಹೋಗುವವರು, ಮಾಧ್ಯಮದ ವಾಹನಗಳಿಗೆ ಮಾತ್ರ ಪೆಟ್ರೋಲ್‌, ಡಿಸೇಲ್‌ ನೀಡಲಾಗುತ್ತಿದೆ. ಸಾಕಷ್ಟು ಸಂಗ್ರಹ: ನಗರದಲ್ಲಿರುವ ಬಿಪಿಸಿಎಲ್‌, ಎಚ್‌ಪಿ, ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ಸೇರಿದಂತೆ ಎಲ್ಲ ಇಂಧನ ವಿತರಕರ ಬಳಿಯೂ ಇಂಧನ ಸಾಕಷ್ಟು ದಾಸ್ತಾನು ಇದ್ದು, ಯಾವುದೇ ಸಮಸ್ಯೆ ಇಲ್ಲ. ಸಂಗ್ರಹವಿದೆ.

ಲಾಕ್‌ಡೌನ್‌ ಘೋಷಣೆ ಹಿನ್ನೆಲೆಯಲ್ಲಿ ಸರಕಾರಿ-ಖಾಸಗಿ ಸೇರಿದಂತೆ ಬಹುತೇಕ ವಾಹನಗಳ ಸಂಚಾರ ಬಂದ್‌ ಆಗಿರುವುದರಿಂದ ಶೇ.70 ಇಂಧನ ಉತ್ಪನ್ನಗಳ ಮಾರಾಟ ಇಳಿಕೆ ಕಂಡಿದೆ. ಅಗತ್ಯ ಸೇವೆಯಲ್ಲಿರುವ ವಾಹನಗಳಿಗೆ ಮಾತ್ರ ಇಂಧನ ಬಳಕೆ ಮಾಡಲಾಗಿದ್ದು, ಇದರಿಂದ ಹೆಚ್ಚು ಉಳಿತಾಯವಾಗಿದೆ ಎನ್ನಬಹುದು. ಇನ್ನು ಇಂಧನ ದಾಸ್ತಾನು ಸಾಕಷ್ಟು ಇದ್ದು, ಯಾವುದಕ್ಕೂ ಕೊರತೆ ಇಲ್ಲವಾಗಿದೆ.  –ಹೆಸರು ಹೇಳಲಿಚ್ಛಿಸದ ಐಓಸಿ ಕಂಪನಿ ಅಧಿಕಾರಿ.

 

Advertisement

-ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next