Advertisement

ಟ್ವಿಟರ್‌ ಸೈನ್‌-ಅಪ್‌ನಲ್ಲಿ ಸಾರ್ವಕಾಲಿಕ ದಾಖಲೆ: ಎಲಾನ್‌ ಮಸ್ಕ್

06:34 PM Nov 27, 2022 | Team Udayavani |

ವಾಷಿಂಗ್ಟನ್‌: ಟ್ವಿಟರ್‌ನಿಂದ ಜಾಹೀರಾತುದಾರರು ದೂರ ಸರಿಯುತ್ತಿರುವ ಹಾಗೂ ಹಲವು ಬಳಕೆದಾರರು ಇತರೆ ಪ್ಲಾಟ್‌ಫಾರಂಗಳತ್ತ ವಲಸೆ ಹೋಗುತ್ತಿರುವಂತೆಯೇ, ಟ್ವಿಟರ್‌ ಮಾಲೀಕ ಎಲಾನ್‌ ಮಸ್ಕ್ ಮಾತ್ರ “ಹೊಸ ಬಳಕೆದಾರರ ಸಂಖ್ಯೆ ಸಾರ್ವಕಾಲಿಕ ದಾಖಲೆ ಬರೆದಿದೆ’ ಎಂದು ಘೋಷಿಸಿಕೊಂಡಿದ್ದಾರೆ!

Advertisement

ಕಳೆದ 7 ದಿನಗಳಿಂದ ದಿನಕ್ಕೆ ಸುಮಾರು 20 ಲಕ್ಷ ಮಂದಿ ಹೊಸದಾಗಿ ಟ್ವಿಟರ್‌ಗೆ ಸೇರ್ಪಡೆಯಾಗಿದ್ದಾರೆ. 2021ರ ಇದೇ ಅವಧಿಗೆ ಹೋಲಿಸಿದರೆ ಸೈನ್‌ಅಪ್‌ ಆದವರ ಪ್ರಮಾಣ ಶೇ.66ರಷ್ಟು ಹೆಚ್ಚಳವಾಗಿದೆ. ಅಷ್ಟೇ ಅಲ್ಲ, ಬಳಕೆದಾರರ ಸಕ್ರಿಯ ಪಾಲ್ಗೊಳ್ಳುವಿಕೆಯೂ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ.

ಒಂದು ವಾರದಿಂದ ದಿನಕ್ಕೆ 8 ಶತಕೋಟಿ ಸಕ್ರಿಯ ನಿಮಿಷಗಳು ದಾಖಲಾಗಿದ್ದು, ಕಳೆದ ವರ್ಷದ ಇದೇ ವಾರಕ್ಕೆ ಹೋಲಿಸಿದರೆ ಶೇ.30ರಷ್ಟು ಹೆಚ್ಚಳವಾಗಿದೆ ಎಂದೂ ಮಸ್ಕ್ ಹೇಳಿದ್ದಾರೆ. ಜತೆಗೆ, ದ್ವೇಷಪೂರಿತ ಅಂಶಗಳೂ ಇಳಿಕೆಯಾಗಿವೆ ಎಂದಿದ್ದಾರೆ.

ಉ.ಪ್ರ. ಪೊಲೀಸರ ಟ್ವೀಟ್‌ ವೈರಲ್‌:
ವ್ಯಂಗ್ಯಭರಿತ ಪ್ರತಿಕ್ರಿಯೆಗೆ ಮಸ್ಕ್ ಅವರೇ ಹೆಸರುವಾಸಿ. ಆದರೆ, ಈ ಬಾರಿ ಮಸ್ಕ್ಗೇ ಉತ್ತರಪ್ರದೇಶ ಪೊಲೀಸರು ಟಾಂಗ್‌ ಕೊಟ್ಟಿದ್ದಾರೆ. “ನಾನು ಮಾಡುವ ಟ್ವೀಟ್‌ ಅನ್ನು ಕೆಲಸ ಎಂದು ಪರಿಗಣಿಸಲಾಗುತ್ತದೆಯೇ?’ ಎಂದು ಇತ್ತೀಚೆಗೆ ಮಸ್ಕ್ ಟ್ವೀಟಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಉ.ಪ್ರ. ಪೊಲೀಸರು, “ನಿಮ್ಮ ಈ ಟ್ವೀಟ್‌ ಸಮಸ್ಯೆಯನ್ನು ಯುಪಿ ಪೊಲೀಸರು ಪರಿಹರಿಸಿದರೆ, ಅದು ಕೂಡ ಕೆಲಸ ಎಂದು ಪರಿಗಣಿಸಲ್ಪಡುತ್ತದೋ’ ಎಂದು ಬರೆದಿದ್ದಾರೆ. ಇದು ಭಾರೀ ವೈರಲ್‌ ಆಗಿದ್ದು, ಪೊಲೀಸರ ಹಾಸ್ಯಪ್ರಜ್ಞೆಯನ್ನು ಎಲ್ಲರೂ ಮೆಚ್ಚಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next