Advertisement
“ಬದಲಾವಣೆ ನಿಟ್ಟಿನಲ್ಲಿ ಎಲಾನ್ ಮಸ್ಕ್ ನೀಡಿರುವ ಡೆಡ್‌ಲೈನ್‌ಗೆ ತಕ್ಕಂತೆ ಉದ್ಯೋಗಿಗಳು ಹೆಚ್ಚಿನ ಅವಧಿಗೆ ಕೆಲಸ ಮಾಡುವುದು ಅನಿವಾರ್ಯವಾಗಿದೆ,’ ಎಂದು ಟ್ವಿಟರ್ ವ್ಯವಸ್ಥಾಪಕರು ಹೇಳಿದ್ದಾರೆ. ಅದಕ್ಕೆ ಯಾವುದೇ ರೀತಿಯ ಓವರ್ ಟೈಮ್ ಭತ್ಯೆ ನೀಡಲಾಗುವುದಿಲ್ಲವೆಂದೂ ಖಚಿತಪಡಿಸಲಾಗಿದೆ. ಜತೆಗೆ ಈ ಬಗ್ಗೆ ಚರ್ಚೆಗೆ ಕೂಡ ಅವಕಾಶ ಇಲ್ಲ ಎಂದು ಹೇಳಲಾಗಿದೆ.
ಇದರ ಜತೆಗೆ ಹಲವು ಪ್ರಮುಖ ಅಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಜಾಹೀರಾತು ವಿಭಾಗದ ಮುಖ್ಯಸ್ಥ ಸಾರಾ ಪರ್ಸೊನೆಟ್, ಚೀಫ್ ಆಫ್ ಪೀಪಲ್ ಆ್ಯಂಡ್ ಡೈವರ್ಸಿಟಿ ವಿಭಾಗದ ಡಲಾನಾ ಬ್ರ್ಯಾಂಡ್, ರಾಜೀನಾಮೆ ನೀಡಿದ್ದಾರೆ. ಇನ್ನೂ ಹಲವು ಪ್ರಮುಖ ವಿಭಾಗಗಳ ಅಧಿಕಾರಿಗಳು ಹುದ್ದೆಯನ್ನು ತ್ಯಜಿಸುವ ಇರಾದೆಯಲ್ಲಿ ಇದ್ದಾರೆ ಎಂದು ಹಲವು ಮಾಧ್ಯಮ ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ತೆಸ್ಲಾ ಉದ್ಯೋಗಿಗಳು ಟ್ವಿಟರ್‌ಗೆ?:
ಟೆಸ್ಲಾದ ತನ್ನ ನಂಬಿಕಸ್ಥ ಉದ್ಯೋಗಿಗಳನ್ನು ಟ್ವಿಟರ್‌ಗೆ ಕರೆತರಲು ಎಲಾನ್ ಮಸ್ಕ್ ಮುಂದಾಗಿದ್ದಾರೆ. ಟ್ವಿಟರ್ ಕಂಪನಿಯ ಬೆಳವಣಿಗೆ ನಿಟ್ಟಿನಲ್ಲಿ ಒಂದು ದೃಢವಾದ ತಂಡ ಕಟ್ಟಲು ತನ್ನ ಟೆಸ್ಲಾ ಕಂಪನಿಯ 50 ಉದ್ಯೋಗಿಗಳು ಇನ್ನು ಮುಂದೆ ಟ್ವಿಟರ್‌ಗೆ ಕೆಲಸ ಮಾಡಲಿದ್ದಾರೆ. ಜತೆಗೆ ತನ್ನ ಬೋರಿಂಗ್ ಕಂಪನಿಯ ಇಬ್ಬರು ಉದ್ಯೋಗಿಗಳು ಮತ್ತು ನ್ಯೂರಾಲಿಂಕ್ ಕಂಪನಿಯ ಒಬ್ಬ ಉದ್ಯೋಗಿಯನ್ನು ಟ್ವಿಟರ್ ಕಂಪನಿಗೆ ಮಸ್ಕ್ ವರ್ಗಾವಣೆ ಮಾಡಿದ್ದಾರೆ ಎಂದು ವರದಿಯಾಗಿದೆ.
Related Articles
ಟ್ವಿಟರ್‌ನಲ್ಲಿ ದೃಢಪಡಿಸಿದ ಖಾತೆಗಳಿಗೆ ಬ್ಲೂಟಿಕ್ ಹೊಂದಲು ಹಾಗೂ ಅದನ್ನು ಬಳಕೆ ಮಾಡಲು ಒಂದು ತಿಂಗಳಿಗೆ 8 ಡಾಲರ್ ಪಾವತಿಸಬೇಕಿರುವುದು ಅಧಿಕೃತವಾಗಿ ಖಾತ್ರಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಲಾನ್ ಮಸ್ಕ್, “ದೂರುತ್ತಿರುವವರು ದೂರುತ್ತಲೇ ಇರಿ. ಟ್ವಿಟರ್‌ನಲ್ಲಿ ಬ್ಲೂಟಿಕ್ ಹೊಂದಲು ಹಾಗೂ ಅದನ್ನು ಬಳಕೆ ಮಾಡಲು ಒಂದು ತಿಂಗಳಿಗೆ 8 ಡಾಲರ್ ಪಾವತಿಸಲೇ ಬೇಕಾಗುತ್ತದೆ,’ ಎಂದು ತಿಳಿಸಿದ್ದಾರೆ.
Advertisement