Advertisement

ಮೂರು ವರ್ಷದ ಪ್ರೀತಿ ಮುರಿದುಕೊಂಡ ಉದ್ಯಮಿ ಎಲಾನ್ ಮಸ್ಕ್   

03:51 PM Sep 25, 2021 | Team Udayavani |

ತಂತ್ರಜ್ಞಾನ ಉದ್ಯಮಿ, ಟೆಸ್ಲಾ ಮತ್ತು ಸ್ಪೇಸ್‌ ಎಕ್ಸ್ ಕಂಪೆನಿಗಳ ಮಾಲಿಕ ಎಲಾನ್ ಮಸ್ಕ್ ಅವರ ಪ್ರೀತಿ ಮುರಿದು ಬಿದ್ದಿದೆ. ಕೆನಡಾದ ಗಾಯಕಿ ಗ್ರಿಮೆಸ್ ಜೊತೆಗಿನ ಮೂರು ವರ್ಷಗಳ ಪ್ರೀತಿಯ ಪಯಣಕ್ಕೆ ಇತಿಶ್ರೀ ಹಾಡಿದ್ದಾರೆ.

Advertisement

ಎಲಾನ್ ಮಸ್ಕ್ ಅವರು 2018 ರಲ್ಲಿ ಗ್ರಿಮೆಸ್ ಜೊತೆಗಿನ ಪ್ರೀತಿಯನ್ನು ಬಹಿರಂಗ ಪಡಿಸಿದ್ದರು. ಈ ಜೋಡಿಗೆ ಒಂದು ವರ್ಷದ ಗಂಡು ಮಗು ಕೂಡ ಇದೆ. ಇದೀಗ ಪರಸ್ಪರ ಒಪ್ಪಿಗೆಯ ಮೂಲಕ ಬೇರೆಯಾಗಲು ನಿರ್ಧರಿಸಿದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ಶನಿವಾರ ತಮ್ಮ ಬ್ರೇಕಪ್ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಎಲಾನ್, ನಾವು ಇನ್ಮುಂದೆ ಒಟ್ಟಿಗೆ ಇರುವುದಿಲ್ಲ. ಆದರೆ, ನಾವಿಬ್ಬರು ನಮ್ಮ ಮಗುವಿಗೆ ಸಹಪೋಷಕರಾಗಿ ಮುಂದುವರೆಯಲಿದ್ದೇವೆ. ನಾವು ಪರಸ್ಪರ ದೂರುವಾದರೂ ಕೂಡ ನಮ್ಮ ನಡುವಿನ ಪ್ರೀತಿ ಇದೆ ರೀತಿ ಮುಂದುವರೆಯಲಿದೆ ಎಂದಿದ್ದಾರೆ.

ಎಲಾನ್ ಮಸ್ಕ್ ವಿಶ್ವದ ನಂಬರ್ ಒನ್ ಉದ್ಯಮಿಗಳ ಸ್ಥಾನದಲ್ಲಿದ್ದಾರೆ. ಅವರು ಉತ್ಪಾದಿಸುತ್ತಿರುವ ಟೆಸ್ಲಾ ಕಾರುಗಳು ಜಾಗತಿಕ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುತ್ತಿವೆ. ನಾವೀನ್ಯ ತಂತ್ರಜ್ಞಾನದ ಟೆಸ್ಲಾ ವಾಹನಗಳು ಕಾರು ಪ್ರಿಯರನ್ನು ಸೆಳೆಯುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next