Advertisement

Elon Musk: ಏ.17ಕ್ಕೆ ಮಸ್ಕ್ ನೌಕೆ ಬಾಹ್ಯಾಕಾಶಕ್ಕೆ!

08:15 PM Apr 15, 2023 | Team Udayavani |

ವಾಷಿಂಗ್ಟನ್‌: ಎಲಾನ್‌ ಮಸ್ಕ್ ಒಡೆತನದ ಖಾಸಗಿ ರಾಕೆಟ್‌ ಉಡಾವಣಾ ಸಂಸ್ಥೆ ಸ್ಪೇಸ್‌ಎಕ್ಸ್‌ಗೆ ಎಫ್ಎಎ (ಅಮೆರಿಕ ಒಕ್ಕೂಟ ವೈಮಾನಿಕ ಆಡಳಿತ) ಮಹತ್ವದ ಅನುಮತಿ ನೀಡಿದೆ. ಇದರಿಂದ ಉತ್ಸಾಹಿತಗೊಂಡಿರುವ ಸ್ಪೇಸ್‌ಎಕ್ಸ್‌ ಸ್ಟಾರ್‌ಶಿಪ್‌ ಹೆಸರಿನ ಬಲಿಷ್ಠ ಬಾಹ್ಯಾಕಾಶ ನೌಕೆಯನ್ನು ಪರೀಕ್ಷಾರ್ಥ ಉಡಾವಣೆ ಮಾಡಲು ಸಜ್ಜಾಗಿದೆ. ಅದರಂತೆ ಸೋಮವಾರ ಅಂದರೆ ಏ.17ಕ್ಕೆ ಟೆಕ್ಸಾಸ್‌ನ ಸ್ಟಾರ್‌ಬೇಸ್‌ನಲ್ಲಿ ಉಡಾವಣೆ ನಡೆಯಲಿದೆ.

Advertisement

ಸ್ಟಾರ್‌ಶಿಪ್‌ ಅತ್ಯಂತ ಬಲಿಷ್ಠ ರಾಕೆಟ್‌ ಆಗಿದ್ದು, ಗಗನಯಾತ್ರಿಗಳನ್ನು ಚಂದ್ರನಲ್ಲಿಗೆ ಹಾಗೂ ಮಂಗಳನ ಅಂಗಳಕ್ಕೆ ತಲುಪಿಸುವ ಗುರಿಯೊಂದಿಗೆ ವಿನ್ಯಾಸಗೊಳಿಸಲಾಗಿದೆ. ಮರುಬಳಕೆಗೆ ಅರ್ಹವಾಗಿರುವ ಸ್ಟಾರ್‌ಶಿಪ್‌ ಅನ್ನು ಮೊದಲ ಪರೀಕ್ಷಾರ್ಥ ಉಡಾವಣೆಯಲ್ಲಿ ಮತ್ತೆ ಭೂಮಿಗೆ ಇಳಿಸುವ ಉದ್ದೇಶವನ್ನು ಸ್ಪೇಸ್‌ಎಕ್ಸ್‌ ಹೊಂದಿಲ್ಲ. ಟೆಕ್ಸಾಸ್‌ನ ದಕ್ಷಿಣ ತುದಿಯಿಂದ ಹವಾಯಿವರೆಗೆ ಬಾಹ್ಯಾಕಾಶ ನೌಕೆ ಹಾರಾಟ ನಡೆಸಲಿದ್ದು, ಮೆಕ್ಸಿಕೊ ಮಾರ್ಗವಾಗಿ ಫೆಸಿಫಿಕ್‌ ಸಾಗರ ತಲುಪಲಿದೆ.

Advertisement

Udayavani is now on Telegram. Click here to join our channel and stay updated with the latest news.

Next