Advertisement
ಎಷ್ಟು ನಿಜ ಅಲ್ಲವೇ? ಮುಖ್ಯವಾಹಿನಿಯಿಂದ ಬೇರ್ಪಟ್ಟು, ದೂರದÇÉೇ ಒಂಟಿಯಾಗಿದ್ದು ಬಿಟ್ಟರೆ ತೊರೆ ತೊರೆಯಾಗೇ ಉಳಿದು ಬಿಡುತ್ತದೆ. ಮುಂದೆ ಹರಿದು ಹೊಳೆ, ಸರೋವರ, ಸಮುದ್ರ ಸಿಗದೇ ಹೂಳು, ಕೆಸರು ತುಂಬಿ ಕ್ರಮೇಣ ಸಂಪೂರ್ಣ ಇಲ್ಲವಾಗಿಬಿಡುತ್ತದೆ. ಇದೇ ರೀತಿ ಸಮಾಜದಲ್ಲೂ ಕೂಡ. ಹಲವು ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವವರನ್ನು ಅವರ ಸಮಸ್ಯೆಗಳ ಜೊತೆ ಜೋತಾಡುವುದಕ್ಕೆ ಬಿಟ್ಟು, ಅಸಂಬದ್ಧ ಮೂಢನಂಬಿಕೆಗಳನ್ನೂ ಅವರ ಮೇಲೆ ಹೇರಿ ದೂರವಿಟ್ಟು, ಬೆನ್ನು ತಿರುವಿದರೆ… ಅವರ ಬದುಕೂ ಹೂಳು, ಕೊಳೆ ತುಂಬಿದ ತೋಡಿನಂತೇ ಆಗಿಬಿಡುತ್ತದೆ, ಅಲ್ಲವೆ?
ನಾನಾಗ ಬಾಲವಾಡಿಯನ್ನೂ ಸೇರಿರಲಿಲ್ಲ. ಮೂರೂವರೆ ವರುಷಗಳಾಗಿದ್ದಿರಬೇಕು. ಹಾಗಾಗಿ, ಎಲ್ಲವೂ ಸುಸ್ಪಷ್ಟವಾಗಿ ನೆನಪಿಲ್ಲ. ಕೆಲವು ತುಣುಕುಗಳು ಮಸುಕಾಗಿದ್ದರೆ, ಉಳಿದ¨ªೆಲ್ಲವನ್ನೂ ಅಪ್ಪ, ಅಮ್ಮ ನನ್ನಲ್ಲಿ ಹೇಳಿದ್ದು. ಹುಟ್ಟುತ್ತಲೇ ಕಾಲುಗಳಲ್ಲಿ ಶಕ್ತಿ ಇಲ್ಲದ ನನ್ನ ಭವಿಷ್ಯತ್ತಿನ, ಅದರಲ್ಲೂ ವಿದ್ಯಾಭ್ಯಾಸದ ಚಿಂತೆ ಹೆತ್ತವರಿಗೆ ಸಹಜವಾಗಿ ಆವರಿಸಿತ್ತು. ಇದನ್ನು ಅಪ್ಪ ತನ್ನ ಸ್ನೇಹಿತರಲ್ಲಿ ಹಂಚಿಕೊಂಡಾಗ, ಒಂದಿಬ್ಬರು ಮಂಗಳೂರಿನ ವಾಮಂಜೂರಿನಲ್ಲಿದ್ದ ಅಂಗವಿಕಲರ ಸ್ಪೆಷಲ್ ಸ್ಕೂಲಿಗೆ ಸೇರಿಸಲು ಸಲಹೆ ನೀಡಿ ಒತ್ತಾಯಿಸಿದ್ದರಂತೆ. ಆದರೆ ಅಲ್ಲಿ ಕೆಲವು ಸಾಮಾನ್ಯ ಮಕ್ಕಳೂ ಅಭ್ಯಾಸ ಮಾಡುತ್ತಿದ್ದರು. ಅರೆ ಮನಸ್ಸಿನೊಂದಿಗೇ ನನ್ನನ್ನು ಅಪ್ಪ ಅಲ್ಲಿಗೆ ಕರೆದೊಯ್ದಿದ್ದು. ನನಗೆ ಬೇರೇನೂ ನೆನಪಿಲ್ಲ. ಹಳದಿ ಬಸ್ಸುಗಳು, ಹಳೆಯ ಕಟ್ಟಡ, ವಿವಿಧ ರೀತಿಯ ದೈಹಿಕ ನ್ಯೂನ್ಯತೆಯುಳ್ಳ ಮಕ್ಕಳು. ಇವಿಷ್ಟು ಇನ್ನೂ ನೆನಪಿವೆ. ಆದರೆ, ನಾನು ಅದೇ ದಿನ ರಾತ್ರಿ ಅಪ್ಪನ ಬಳಿ ರಚ್ಚೆ ಹಿಡಿದು ಅತ್ತಿ¨ªೆನಂತೆ. “”ನಾನು ಅಲ್ಲಿಗೆ ಕಲಿಯಲು ಹೋಗುವುದಿಲ್ಲ.
Related Articles
Advertisement
ಒಮ್ಮೆ ನನ್ನಲ್ಲಿ ಓರ್ವ ಗೆಳತಿ, “ತನ್ನ ಕುಬjತೆಯಿಂದಾಗಿ ತಾನು ಅದೆಂತು ಕೀಳರಿಮೆ ಅನುಭವಿಸುತ್ತಿದ್ದೇನೆ. ಅಕ್ಕಪಕ್ಕದಲ್ಲಿರುವ ಕೆಲವರು ತನ್ನನ್ನು ಹೇಗೆ ಗೇಲಿ ಮಾಡಿ ದೂಷಿಸುತ್ತಿ¨ªಾರೆ, ಕೆಲವು ನೆಂಟರು ಅವಹೇಳನ ಮಾಡಿ ಚುಚ್ಚುತ್ತಾರೆ’ ಎಂದೆಲ್ಲ ತನ್ನ ನೋವನ್ನು ತೋಡಿಕೊಂಡಿದ್ದಳು. ಇದೇ ರೀತಿ ತಮ್ಮದಲ್ಲದ ತಪ್ಪಿಗಾಗಿ, ತಮ್ಮೊಳಗಿನ ಸಮಸ್ಯೆ ಯಾವ ರೀತಿಯಲ್ಲೂ ಇತರರನ್ನೂ ಬಾಧಿಸದೇ ಇದ್ದರೂ ನಿರಂತರ ಅವಹೇಳನಕ್ಕೆ ಒಳಗಾಗುತ್ತಿರುವವರ ಸಂಖ್ಯೆಯೇ ದೊಡ್ಡದಿದೆ. ನಾನೂ ಇಂಥ ಅನೇಕಾನೇಕ ಕುಹಕಗಳನ್ನು ಎದುರಿಸಿಯೇ ಬೆಳೆದವಳು.
ಆಕ್ರೋಶಗೊಂಡಾಗೆಲ್ಲ ಅಪ್ಪ ಹೇಳಿದ್ದ ಮಾತು ನೆನಪಿಗೆ ಬರುತ್ತದೆ. ಸಮಾಜ ನಮಗಿಂತ ಭಿನ್ನವಲ್ಲ , ನಮ್ಮೊಳಗೂ ಸಣ್ಣಪುಟ್ಟ ಕುಂದುಕೊರತೆಗಳು ಇದ್ದೇ ಇರುತ್ತವೆ. ಅದೇ ರೀತಿ ನಮ್ಮ ಸುತ್ತಮುತ್ತಲೂ ಒಳತಿನ ಜೊತೆಗೆ ಕೆಡುಕೂ ಇದ್ದೇ ಇರುತ್ತದೆ. ಧನಾತ್ಮಕ ವಿಚಾರಗಳನ್ನು, ಅಂಥ ವ್ಯಕ್ತಿ/ವ್ಯಕ್ತಿತ್ವಗಳನ್ನು ಹೆಚ್ಚೆಚ್ಚು ನಮ್ಮ ಒಡನಾಟದಲ್ಲಿಟ್ಟುಕೊಂಡರೆ, ಇಂಥ ಕೆಲಸಕ್ಕೆ ಬಾರದ ವ್ಯಂಗ್ಯ, ಕುಹಕ, ಗೇಲಿಗಳನ್ನು ನಾವು ಖಂಡಿತ ಮೀರಬÇÉೆವು. ನಮ್ಮ ಬದುಕು ನಮ್ಮದು. ಹಾಗಾಗಿ, ನಮ್ಮ ಬದುಕಿಗೆ ಸಂಬಂಧ ಪಡದವರ ಯಾವ ಕೊಂಕು, ವ್ಯಂಗ್ಯವೂ ನಮ್ಮನ್ನು ಘಾಸಿ ಮಾಡದಂಥ ಆತ್ಮಾಭಿಮಾನವನ್ನು ಬೆಳೆಸಿಕೊಳ್ಳುವುದು ಅವಶ್ಯ.
ಸಾಗರ ಎಂದಾಕ್ಷಣ ನೆನಪಿಗೆ ಬರುವುದೇ ಅದರ ಸುವಿಶಾಲ ಮೇಲ್ಮೆ„. ಅದು ತನ್ನೊಳಗೆ ಸೇರಿದ ಕಸ, ಕೊಳಕನ್ನೆಲ್ಲ ತೆರೆಗಳ ಹೆಡೆಯ ಮೇಲೆ ಹೊತ್ತು ತಂದು ದಡದಲ್ಲಿ ಹಾಕಿ ಮರಳಿ, ತನ್ನೊಳಗೆ ತಾನು ನಿರುಮ್ಮಳವಾಗಿ ಭೋರ್ಗರೆಯುತ್ತಿರುತ್ತದೆ. ಸಾಗರ ಕಿನಾರೆ ನನ್ನ ಅಚ್ಚುಮೆಚ್ಚಿನ ತಾಣ.