ಕೊರಟಗೆರೆ: ತಾಲೂಕಿನ ಇತಿಹಾಸ ಪ್ರಸಿದ್ಧವಾಗಿರುವ ತಾಯಿ ಯಲ್ಲಮ್ಮ ದೇವಿಯ ಹೆಸರು ಕೇಳಿದರೆ ಸಾಕು ಕೋಟ್ಯಂತರ ಭಕ್ತ ಸಮುದಾಯ ಪುಳಕಿತರಾಗುತ್ತಾರೆ. ಯಲ್ಲಮ್ಮ ದೇವಿ ಮಹಿಮೆಯೇ ಅಂಥಾದ್ದು.. ಭಕ್ತಿಯಿಂದ ಕೈ ಮುಗಿದು ಆರಾಧಿಸೋಕೆ ಅಂತಾನೆ ಸಾವಿರಾರು ಜನ ಭಕ್ತರು ಭೇಟಿ ಕೊಡ್ತಾರೆ. ತುಮಕೂರು ಜಿಲ್ಲೆ, ಕೊರಟಗೆರೆ ತಾಲೂಕಿನ, ಹೊಳವನಹಳ್ಳಿ ಅಂಬೇಡ್ಕರ್ ಬಡಾವಣೆಯಲ್ಲಿರುವ ಎಲ್ಲಮ್ಮ ದೇವಿ ಇಂದಿಗೂ ಅದೆಷ್ಟೋ ಭಕ್ತರ ಪಾಲಿಗೆ ಕಷ್ಟಗಳನ್ನ ನಿವಾರಿಸೋ ಸಾಕ್ಷಾತ್ ದೈವತ್ವ ತುಂಬಿರೋ ಕ್ಷೇತ್ರವಾಗಿ ನಿಂತಿದೆ.
ಇಂತಹ ಪುಣ್ಯ ಕ್ಷೇತ್ರದಲ್ಲಿ ಇದೀಗ ಆರನೇ ವರ್ಷದ ಲಕ್ಷ ದೀಪೋತ್ಸವವನ್ನು. ಕಾರ್ತಿಕ ಮಾಸದ ಕಾಲದಲ್ಲಿ ನಡೆಯೋ ಈ ದೀಪೋತ್ಸವ ಸಂಭ್ರಮದ ಅಂಗವಾಗಿ ಅಪಾರ ಭಕ್ತರ ಸಮೂಹವೇ ಇಲ್ಲಿ ಹರಿದು ಬಂದಿದ್ದು. ಇನ್ನು ದೀಪೋತ್ಸವಕ್ಕೆ ಬರೋ ಭಕ್ತರನ್ನ ಆಕರ್ಷಿಸೋ ಉದ್ದೇಶದಿಂದ ಇಡೀ ದೇವಸ್ಥಾನದ ಸುತ್ತ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಭಕ್ತರನ್ನ ಆಕರ್ಷಿಸುತ್ತಿದೆ. ಪ್ರತಿ ಶುಕ್ರವಾರ ಹಾಗೂ ಮಂಗಳವಾರ ಹಗಲು ರಾತ್ರಿ ಪೂಜೆ ನಡೆಯೋ ಮೂಲಕ ಎಲ್ಲಮ್ಮ ತಾಯಿಗೆ ವಿಶೇಷ ಪೂಜೆ ನೆರವೇರಿಸಲಾಗಿತ್ತು. ಹೀಗಾಗಿ ತಡರಾತ್ರಿಯವರೆಗೂ ಕ್ಷೇತ್ರದಲ್ಲಿ ಜನ ಸಂದಣಿ ಇರೋ ಕಾರಣದಿಂದ ನಿರಂತರ ಪ್ರಸಾದ ಹಾಗೂ ಅನ್ನ ಸಂತರ್ಪಣೆಯೂ ನಡೆಯಿತ್ತು.
ಇನ್ನು ಈ ಗ್ರಾಮದಲ್ಲಿರುವ ಎಲ್ಲಮ್ಮ ತಾಯಿಯ ದರ್ಶನ ಪಡೆಯೋ ಭಕ್ತರು ಇಲ್ಲಿನ ವೈಭವನ್ನ ಕಣ್ತುಂಬಿ ಕೊಳ್ಳೋ ಮೂಲಕ ಖುಷಿ ಪಡ್ತಿದ್ದಾರೆ. ದೂರದ ಊರಿನಿಂದಲೂ ಸಾವಿರಾರು ಜನರು ಕ್ಷೇತ್ರಕ್ಕೆ ಆಗಮಿಸುತ್ತಾ ಇದ್ದು, ಈ ಎಲ್ಲಾ ವ್ಯವಸ್ಥೆ ಭಕ್ತರಲ್ಲಿ ಖುಷಿ ತಂದಿದ್ದು, ಇದರಿಂದಾಗಿಯೇ ಜನಸಂದಣಿ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚ ತೊಡಗಿದೆ.
ತಾಯಿ ಯಲ್ಲಮ್ಮ ದೇವಿಯ ಹೆಸರು ಕೇಳಿದರೆ ಸಾಕು ಕೋಟ್ಯಂತರ ಭಕ್ತ ಸಮುದಾಯ ಪುಳಕಿತರಾಗುತ್ತಾರೆ. ಯಲ್ಲಮ್ಮ ದೇವಿ ಮಹಿಮೆಯೇ ಅಂಥಾದ್ದು.. ಭಕ್ತಿಯಿಂದ ಕೈ ಮುಗಿದು ಆರಾಧಿಸೋಕೆ ಅಂತಾನೆ ಸಾವಿರಾರು ಜನ ಭಕ್ತರು ಭೇಟಿ ಕೊಡ್ತಾರೆ.
ತಾಯಿ ಯಲ್ಲಮ್ಮ ದೇವಿಯ ಕಾರ್ತಿಕ ಮಾಸ ಲಕ್ಷದೀಪೋತ್ಸದ ಹಿನ್ನಲೆಯಲ್ಲಿ ದೇವಸ್ಥಾನವನ್ನು ಸಾವಿರಾರು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದೆ. ಎಲ್ಲಿ ನೋಡಿದ್ರೂ ಝಗಮಗಿಸುವ ಬೆಳಕಿನ ಚಿತ್ತಾರ ಭಕ್ತರ ಕಣ್ಣುಗಳಿಗೆ ಸ್ವರ್ಗದ ಅನುಭವವನ್ನು ನೀಡುತ್ತಿದೆ.
– ನಯನ, ಯಲ್ಲಮ್ಮ ತಾಯಿಯ ಭಕ್ತೆ
ನಮ್ಮ ಮನೆಯ ದೇವರು ಈ ಎಲ್ಲಮ್ಮ ತಾಯಿ ಲಕ್ಷ ದೀಪೋತ್ಸವ ಅದ್ಧೂರಿಯಿಂದ ನಡೆಯುತ್ತಿದ್ದು ಎಂದಿನಂತೆ ಈ ಭಾರಿಯೂ ನಾಡಿನ ಕಲೆ, ಸಾಹಿತ್ಯ,ಸಂಸ್ಕೃತಿ ಮೇಳೈಸಿದೆ. ಇದನ್ನ ನೋಡುತ್ತಿದ್ದರೆ ಸ್ವರ್ಗವೇ ಧರೆಗಿಳಿದಿದ್ದು ಬಂದಂತಾಗುತ್ತಾದೆ.
ನಿಕಿತಾ, ಯಲ್ಲಮ್ಮ ದೇವಿ ಭಕ್ತೆ ಅಂಬೇಡ್ಕರ್ ಬಡಾವಣೆ ಹೊಳವನಹಳ್ಳಿ