Advertisement

Araga Jnanendra; ಎಳ್ಳಮಾವಾಸ್ಯೆ ಜಾತ್ರೆ ತೀರ್ಥಹಳ್ಳಿಯೇ ಸಂಭ್ರಮ ಪಡುವ ಉತ್ಸವ

05:59 PM Jan 12, 2024 | Team Udayavani |

ತೀರ್ಥಹಳ್ಳಿ : ರಾಮಕೊಂಡದಲ್ಲಿ ಗುರುವಾರ ಸಾವಿರಾರು ಮಂದಿ ತೀರ್ಥಸ್ನಾನ ಮಾಡಿದ್ದಾರೆ. ಇಂದು ಸಹ ರಥೋತ್ಸವಕ್ಕೂ ಸಾವಿರಾರು ಜನ ಸೇರಿದ್ದಾರೆ.ಶನಿವಾರ ಶ್ರೀ ರಾಮೇಶ್ವರ ಸ್ವಾಮಿಯ ಅದ್ದೂರಿ ತೆಪ್ಪೋತ್ಸವವನ್ನು ತುಂಗಾ ನದಿಯಲ್ಲಿ ಆಚರಿಸಲಿದ್ದೇವೆ. ಪ್ರತಿ ವರ್ಷದಂತೆ ಈ ವರ್ಷವೂ 25 ಸಾವಿರಕ್ಕೂ ಹೆಚ್ಚಿನ ಜನ ತುಂಗಾ ನದಿಯ ಮರಳು ದಿಬ್ಬದ ಮೇಲೆ ಕುಳಿತು ತೆಪ್ಪೋತ್ಸವ ವೀಕ್ಷಣೆ ಮಾಡಲಿದ್ದಾರೆ. ಇದು ತೀರ್ಥಹಳ್ಳಿಯೇ ಸಂಭ್ರಮ ಪಡುವ ಉತ್ಸವ ಎಂದು ಮಾಜಿ ಗೃಹ ಸಚಿವ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

Advertisement

ಶುಕ್ರವಾರ ರಾಮೇಶ್ವರ ದೇವರ ರಥೋತ್ಸವದ ನಂತರ ಭಕ್ತರಿಗೆ ತಾವೇ ಸ್ವತಃ ಊಟವನ್ನು ಬಡಿಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು ದೇವಸ್ಥಾನಕ್ಕೆ ಹಲವಾರು ರೀತಿ ಜನರು ಜಾತ್ರೆಯ ಸಂದರ್ಭದಲ್ಲಿ ಬರುತ್ತಾರೆ. ದೇವಸ್ಥಾನದಲ್ಲಿ ದೇವರ ಧ್ಯಾನ ಮಾಡುವಾಗ ನಿಮ್ಮ ಬ್ಯಾಗ್ ಲೂಟಿ ಹೊಡೆಯುವ ಸಾಧ್ಯತೆ ಇರುತ್ತದೆ ಹಾಗಾಗಿ ಜಾತ್ರೆಯಲ್ಲಿ ಪ್ರತಿಯೊಬ್ಬರೂ ಭಕ್ತರು ಎಚ್ಚರಿಕೆ ವಹಿಸಬೇಕು ಎಂದರು.

ಯುವನಿಧಿ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಅವರು ನಮ್ಮ ತಾಲೂಕಿನಿಂದ ಯುವ ನಿಧಿಗೆ ಯಾರು ಕೂಡ ಹೋಗಿಲ್ಲ.12 ಬಸ್ ಗಳು ಪಟ್ಟಣದಲ್ಲೇ ನಿಂತಿವೆ.ಎಲ್ಲೋ ಒಂದೊಂದು ಬಸ್ ನಲ್ಲಿ ನಾಲ್ಕೈದು ಜನ ಹೋಗಿದ್ದಾರೆ. ಅದು ಸರ್ಕಾರಿ ಕಾರ್ಯಕ್ರಮ ಆಗದೇ ಪಕ್ಷದ ಕಾರ್ಯಕ್ರಮ ಆಗಿದೆ.ಇದರಿಂದ ಜನರಿಗೆ ಬೇಸರವಾಗಿದೆ. ಅಭಿವೃದ್ಧಿಯನ್ನು ಬಲಿಕೊಟ್ಟು ಅಂಧ ದರ್ಬಾರ್ ಮಾಡುವಂತಹ ಸರ್ಕಾರಿ ಹಣವನ್ನು ಮನಸೋ ಇಚ್ಛೆ ವಿತರಣೆ ಮಾಡುವ ಕೆಲಸ ನಡೆಯುತ್ತಿದೆ. ಕುಡಿಯುವ ನೀರಿಲ್ಲ, ಬರ ಬಂದಿದೆ ಇಂತಹ ಸಂದರ್ಭದಲ್ಲಿ ಈ ರೀತಿ ರಂಪಾಟ ಮಾಡುವುದು ನೋಡಿದರೆ ಈ ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಎಂದರು.

ನಂತರ ಅಯೋಧ್ಯೆಯ ಬಗ್ಗೆ ಮಾತನಾಡಿ ಅವರು ರಾಮ ನಮ್ಮ ಶ್ರದ್ದೆಯ ಕೇಂದ್ರ. ರಾಮ ಹುಟ್ಟಿದ ಜನ್ಮಸ್ಥಳದಲ್ಲಿ ಮಂದಿರ ನಿರ್ಮಾಣ ಆಗುತ್ತಿದೆ.ಮೋದಿಯವರ ನೇತೃತ್ವದಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಆಗಲಿದೆ.ಅನೇಕರು ಬಹಳ ಕೀಳಾಗಿ ಮಾತನಾಡುತ್ತಿದ್ದಾರೆ. ಮೋದಿಯಂತಹ ಅತ್ಯಂತ ಹಿಂದುಳಿದ ವರ್ಗದ ನಾಯಕ ಪ್ರಧಾನಿ ಆಗಿದ್ದೆ ರಾಮನ ಕೃಪೆಯಿಂದ, ಆಶೀರ್ವಾದದಿಂದ ಹಿಂದೂ ಸಮಾಜವಷ್ಟೇ ಅಲ್ಲದೆ ದೇಶದ ಏಕತೆಯನ್ನ ಸಮಗ್ರತೆಯನ್ನು ರಕ್ಷಣೆ ಮಾಡುವಂತಹ ಕೆಲಸ ರಾಮಮಂದಿರದ ಮೂಲಕ ಆಗಲಿದೆ ಎಂದರು.

ನೀವು ರಾಮಮಂದಿರಕ್ಕೆ ಹೋಗುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಅವರು ನಾನು ರಾಮಮಂದಿಕ್ಕೆ ಹೋಗುತ್ತೇನೆ ಆದರೆ 22 ರಂದು ನಡೆಯುವ ಕಾರ್ಯಕ್ರಮಕ್ಕೆ ಹೋಗುವುದಿಲ್ಲ. ನಮಗೆಲ್ಲ ಸಮಯ ಕೊಟ್ಟಿದ್ದಾರೆ ಇನ್ನೆರಡು ತಿಂಗಳ ಒಳಗೆ ಹೋಗಿ ದರ್ಶನ ಪಡೆಯಲಿದ್ದೇವೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next