Advertisement
ಕಳೆದ ವರ್ಷ ಈ ಸಮಯಕ್ಕೆ ಒಟ್ಟು 186 ಇಲಿ ಜ್ವರದ ಪ್ರಕರಣಗಳು ಪತ್ತೆಯಾಗಿದ್ದವು. ಅಲ್ಲದೆ ಇಬ್ಬರು ರೋಗಿಗಳು ಇಲಿಜ್ವರದಿಂದಾಗಿ ಮರಣ ಹೊಂದಿದ್ದರು. ಈ ಬಾರಿ ಕೇವಲ 136 ಪ್ರಕರಣಗಳ ಪತ್ತೆಯಾಗಿವೆ.
ಚಿಕ್ಕಮಗಳೂರಿನಲ್ಲಿ 2, ದಕ್ಷಿಣ ಕನ್ನಡದಲ್ಲಿ 44, ಉಡುಪಿಯಲ್ಲಿ 57, ಕೊಡಗಿನಲ್ಲಿ 3, ಮಂಡ್ಯ ಹಾಗೂ ಚಾಮರಾಜನಗರದಲ್ಲಿ ತಲಾ ಒಂದೊಂದು ಇಲಿಜ್ವರ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ಉಪ ನಿರ್ದೇಶಕ ಡಾ.ಪ್ರಕಾಶ ಕುಮಾರ್ ತಿಳಿಸಿದ್ದಾರೆ.