Advertisement

ಎಲಿಸೆ ಪೆರ್ರಿ ವರ್ಷದ ಶ್ರೇಷ್ಠ ಏಕದಿನ ಆಟಗಾರ್ತಿ

09:58 AM Dec 18, 2019 | sudhir |

ದುಬಾೖ: ಈ ಋತುವಿನಲ್ಲಿ ಸ್ಮರಣೀಯ ನಿರ್ವಹಣೆ ನೀಡಿರುವ ಭಾರತ ತಂಡದ ಆರಂಭಿಕ ಆಟಗಾರ್ತಿ ಸ್ಮತಿ ಮಂದನಾ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ)ನ ವರ್ಷದ ಏಕದಿನ ಮತ್ತು ಟಿ20 ತಂಡಗಳಲ್ಲಿ ಹೆಸರಿಸಲಾಗಿದೆ.

Advertisement

ವರ್ಷದ ಏಕದಿನ ತಂಡದಲ್ಲಿ ಮಂದನಾ ಅವರಲ್ಲದೇ ಜೂಲನ್‌ ಗೋಸ್ವಾಮಿ, ಪೂನಂ ಯಾದವ್‌ ಮತ್ತು ಶಿಖಾ ಪಾಂಡೆ ಇದ್ದರೆ ಟಿ20 ತಂಡದಲ್ಲಿ ಆಲ್‌ರೌಂಡರ್‌ ದೀಪ್ತಿ ಶರ್ಮ ಅವರಿದ್ದಾರೆ. ಈ ಎರಡೂ ತಂಡಗಳ ನಾಯಕಿಯಾಗಿ ಮೆಗ್‌ ಲ್ಯಾನ್ನಿಂಗ್‌ ಅವರನ್ನು ಆಯ್ಕೆ ಮಾಡಲಾಗಿದೆ.

23ರ ಹರೆಯದ ಮಂದನಾ ಇಷ್ಟರವರೆಗೆ ಭಾರತ ಪರ 51 ಏಕದಿನ ಮತ್ತು 66 ಟಿ20 ಪಂದ್ಯಗಳನ್ನಾಡಿದ್ದಾರೆ. ಏಕದಿನ ಮತ್ತು ಟಿ20ಯಲ್ಲಿ ಒಟ್ಟಾರೆ 3,476 ರನ್‌ ಪೇರಿಸಿದ್ದಾರೆ.

ಈ ವರ್ಷದಲ್ಲಿ ಶ್ರೀಲಂಕಾ ವಿರುದ್ಧ 148 ರನ್‌ ಪೇರಿಸಿ ದಾಖಲೆ ಮುರಿದ ಸಾಧನೆಗೈದ ಆಸ್ಟ್ರೇಲಿಯದ ಅಲಿಸ್ಸಾ ಹೀಲೆ ಅವರು ವರ್ಷದ ಟಿ20 ಆಟಗಾರ್ತಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ವರ್ಷದ ಏಕದಿನ ಆಟಗಾರ್ತಿ ಪ್ರಶಸ್ತಿಯು ಆಸ್ಟ್ರೇಲಿಯದ ಎಲಿಸೆ ಪೆರ್ರಿ ಪಾಲಾಗಿದೆ. ಪೆರ್ರಿ ಈ ವರ್ಷ 73.50 ಸರಾಸರಿಯಲ್ಲಿ 441 ರನ್‌ ಮತ್ತು 13.52 ಸರಾಸರಿಯಲ್ಲಿ 21 ವಿಕೆಟ್‌ ಕಿತ್ತ ಸಾಧನೆ ಮಾಡಿದ್ದಾರೆ.

ಪೆರ್ರಿ ಇದರ ಜತೆ ಎಲ್ಲ ಮಾದರಿಯ ಕ್ರಿಕೆಟಿಗೆ ಇರುವ ವರ್ಷದ ಆಟಗಾರ್ತಿ ಪ್ರಶಸ್ತಿಗೂ ಪಾತ್ರ ರಾಗಿದ್ದಾರೆ. ಇದನ್ನು ರಚೀಲ್‌ ಹೆಹೋಯಿ ಫ್ಲಿಂಟ್‌ ಹೆಸರಲ್ಲಿ ನೀಡಲಾಗುತ್ತದೆ. ಪೆರ್ರಿ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಅಮೋಘ ನಿರ್ವಹಣೆ ನೀಡಿದ್ದಾರೆ. ವನಿತಾ ಆ್ಯಶಸ್‌ ಟೆಸ್ಟ್‌ನಲ್ಲಿ ಒಂದು ಶತಕ ಸಹಿತ ಒಟ್ಟಾರೆ ಮೂರು ಶತಕ ಸಿಡಿಸಿದ ಅವರು ಟಿ20 ಕ್ರಿಕೆಟ್‌ನಲ್ಲಿ ಒಂದು ಸಾವಿರ ರನ್‌ ಮತ್ತು 100 ವಿಕೆಟ್‌ ಪೂರ್ತಿಗೊಳಿಸಿದ ಮೊದಲ ವನಿತೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

Advertisement

ವರ್ಷದ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಥಾçಲಂಡಿನ ಚನಿಡಾ ಸುತ್ತಿರಾಂಗ್‌ ಅವರನ್ನು ಆಯ್ಕೆ ಮಾಡಲಾಗಿದೆ. 26ರ ಹರೆಯದ ಅವರು ಈ ವರ್ಷದ ಐಸಿಸಿ ವನಿತಾ ಟಿ20 ಅರ್ಹತಾ ವಿಶ್ವಕಪ್‌ ಕೂಟದಲ್ಲಿ 12 ವಿಕೆಟ್‌ ಉರುಳಿಸಿದ್ದಾರೆ.

ಅತ್ಯದ್ಭುತ ಗೌರವ
ಇದೊಂದು ಅತ್ಯದ್ಭುತ ಗೌರವ ಸ್ವಲ್ಪಮಟ್ಟಿಗೆ ಆಘಾತವೂ ಆಗಿದೆ. ಈ ವರ್ಷದುದ್ದಕ್ಕೂ ನೀಡಿರುವ ಅದ್ಭುತ ನಿರ್ವಹಣೆ ಆಧಾರದಲ್ಲಿ ಈ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಮೆಚ್ಚುಗೆ ಸೂಚಿಸುತ್ತೇನೆ. ವೈಯಕ್ತಿಕ ಸಾಧನೆಯೊಂದಿಗೆ ವರ್ಷವನ್ನು ಅಂತ್ಯಗೊಳಿಸಿರು ವುದು ಖುಷಿ ನೀಡಿದೆ ಎಂದು ಪೆರ್ರಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next