Advertisement
ಕೊಲ್ಲೂರಿನ ಉದ್ಯಮಿ ರಮೇಶ್ ಗಾಣಿಗ ಹಾಗೂ ನಯನಾ ರಮೇಶ್ ಗಾಣಿಗ ಮಕ್ಕಳ ನೇತೃತ್ವದಲ್ಲಿ ಮಾ. 10ರಂದು ಕೊಲ್ಲೂರಿನಲ್ಲಿ ನಡೆದ ಅಷ್ಟಪವಿತ್ರ ನಾಗಮಂಡಲೋತ್ಸವದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.ಶುಭಾಶಂಸನೆಗೈದ ಕೊಲ್ಲೂರು ದೇಗುಲದ ಅರ್ಚಕ ಡಾ| ಕೆ.ಎನ್. ನರಸಿಂಹ ಅಡಿಗ ಅವರು, ರಮೇಶ್ ಗಾಣಿಗ ಅವರ ಸೇವಾ ಕೈಂಕರ್ಯ ಹಾಗೂ ಆದರ್ಶಪ್ರಾಯ ಜೀವನಕ್ರಮ ವನ್ನು ಗುಣಗಾನ ಮಾಡಿದರು.
ನಿರ್ವಹಣಾಧಿಕಾರಿ ಎಚ್. ಕೃಷ್ಣಮೂರ್ತಿ, ತಾ.ಪಂ. ಸದಸ್ಯೆ ಗ್ರಿಷ್ಮಾ ಬಿಡೆ, ಧರ್ಮಸ್ಥಳ ಗ್ರಾ.ಯೋ. ಅಧಿಕಾರಿ ಅಮರಪ್ರಸಾದ್ ಶೆಟ್ಟಿ, ಗೋಪಾಲಕೃಷ್ಣ ವಿ.ಸೇ.ಸ. ಸಂಘದ ಉಪಾಧ್ಯಕ್ಷ ಸುಧೀರ್ ಪಂಡಿತ್, ಡಾ| ಶ್ರೀಪಾದ ಶೆಟ್ಟಿ, ಸುಬ್ಬಯ್ಯ, ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಗಾಣಿಗ, ಬೆಂಗಳೂರು ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ಎಚ್.ಟಿ. ನರಸಿಂಹ, ಬಾಕೂìರು ಸೋಮ ಕ್ಷತ್ರಿಯ ಗಾಣಿಗ ಸಂಘದ ಅಧ್ಯಕ್ಷ ಕೆ. ಗೋಪಾಲ, ಗಾಣಿಗ ಮಹಿಳಾ ಸಂಘದ ಅಧ್ಯಕ್ಷೆ ಶಶಿಕಲಾ ನಾರಾಯಣ ಗಾಣಿಗ, ಮಮತಾ ಗೋಪಾಲ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭ ಲಕ್ಷ್ಮೀಂತೀರ್ಥ ಶ್ರೀಪಾದಂಗಳವರು ರಮೇಶ್ ಗಾಣಿಗ ಮತ್ತು ನಯನಾ ರಮೇಶ್ ಗಾಣಿಗ, ಪವನ ಗಾಣಿಗ, ಪ್ರಸನ್ನ ಗಾಣಿಗ, ಪ್ರತ್ವಿನ್ ಗಾಣಿಗ ಅವರನ್ನು ಆಶೀರ್ವದಿಸಿದರು. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ವಿಧಾನಪರಿಷತ್ ಸದಸ್ಯ ಕೆ. ಪ್ರತಾಪ್‌ಚಂದ್ರ ಶೆಟ್ಟಿ ಶುಭಹಾರೈಸಿದರು. ಸುಬ್ರಹ್ಮಣ್ಯ ಪಡುಕೋಣೆ ಸ್ವಾಗತಿಸಿದರು, ರಾಜೇಶ್ ಕೆ.ಸಿ. ಕಾರ್ಯಕ್ರಮ ನಿರೂಪಿಸಿದರು, ರಂಗನಾಯಕ್ ವಂದಿಸಿದರು.