Advertisement

ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಹರ ಆಯ್ಕೆ ಮಾಡಿ

01:00 PM Jan 27, 2022 | Shwetha M |

ಮುದ್ದೇಬಿಹಾಳ: ತಾಲೂಕಿನ ಶಿಶು ಅಭಿವೃದ್ಧಿ ಯೋಜನೆಯಡಿ ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅನರ್ಹರನ್ನು ಆಯ್ಕೆ ಮಾಡಿದ್ದು ಕೂಡಲೇ ಆ ಹುದ್ದೆಯ ಆಯ್ಕೆ ರದ್ದುಪಡಿಸಿ ಹೊಸದಾಗಿ ಅರ್ಹರನ್ನು ಆಯ್ಕೆ ಮಾಡಬೇಕು ಎಂದು ಆಗ್ರಹಿಸಿ ಢವಳಗಿ ಗ್ರಾಮದ ಕೆಲ ಯುವಕರು ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಅವರಿಗೆ ಮನವಿ ಸಲ್ಲಿಸಿದರು.

Advertisement

ಹುನಕುಂಟಿ ಗ್ರಾಮದ ಕವಿತಾ ಪತ್ತಾರ ಅವರು ಸಹಾಯಕಿ ಹುದ್ದೆಗೆ 1-9-2021ರಂದು ಅರ್ಜಿ ಸಲ್ಲಿಸಿದ್ದರು. ಸಹಾಯಕಿಯರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದಾಗ ಅದರಲ್ಲಿ ಶರಣಮ್ಮ ಮಾಳಗೊಂಡ ಎಂಬ ಅಂಗವಿಕಲ ಅಭ್ಯರ್ಥಿಯನ್ನು ಅಂಗವಿಕಲ ಕೋಟಾದಡಿ ಆಯ್ಕೆ ಮಾಡಿದ್ದಾಗಿ ತಿಳಿಸಲಾಗಿತ್ತು. ಶರಣಮ್ಮ ಅವರು ಅರ್ಜಿ ಸಲ್ಲಿಸುವಾಗ ಸಲ್ಲಿಸಿದ್ದ ದಾಖಲೆಗಳು ಖೊಟ್ಟಿಯಾಗಿದ್ದವು ಮಾತ್ರವಲ್ಲದೆ ಅವರ ವಯಸ್ಸು ಸಹ ಸರ್ಕಾರ ನಿಗದಿಪಡಿಸಿದ ವಯೋಮಿತಿಯನ್ನು ಮೀರಿತ್ತು.

ಸೂಕ್ತ ದಾಖಲಾತಿ ಸಮೇತ ಆಯ್ಕೆ ರದ್ದುಪಡಿಸಿ ಹೊಸದಾಗಿ ಆಯ್ಕೆ ಮಾಡುವಂತೆ ಮನವಿ ಸಲ್ಲಿಸಿ ಈ ಬಗ್ಗೆ ಸಂಬಂಧಿಸಿದ ಸಿಡಿಪಿಒ ಗಮನಕ್ಕೆ ತಂದರೂ ಅವರು ಬೇಡಿಕೆ ಪರಿಗಣಿಸಲಿಲ್ಲ. ಅವರನ್ನೇ ಆಯ್ಕೆ ಮಾಡುವುದಾಗಿ ತಿಳಿಸಿ ಬೇಕಿದ್ದರೆ ಕೋರ್ಟ್‌ಗೆ ಹೋಗುವಂತೆ ಹೇಳಿದ್ದರು.

ಖೊಟ್ಟಿ ದಾಖಲೆ ಲಗತ್ತಿಸಿ ಆಯ್ಕೆಯಾಗಿದ್ದರಿಂದ ಅರ್ಹಳಿಗೆ ಅನ್ಯಾಯ ಆದಂತಾಗಿದೆ. ಇದರಿಂದ ಅರ್ಹ ಮಹಿಳೆ ಬಡ ಕುಟುಂಬಕ್ಕೆ ಸಾಕಷ್ಟು ಅನ್ಯಾಯ ಮಾಡಿದಂತಾಗಿದೆ. ಕೂಡಲೇ ಖೊಟ್ಟಿ ದಾಖಲೆ ಲಗತ್ತಿಸಿ ಆಯ್ಕೆಯಾದ ಶರಣಮ್ಮ ಮಾಳಗೊಂಡ ಅವರ ಆಯ್ಕೆ ರದ್ದುಪಡಿಸಿ ನ್ಯಾಯೋಚಿತವಾಗಿ ಅರ್ಹತೆ ಹೊಂದಿರುವ ಕವಿತಾ ಅವರನ್ನೇ ಆಯ್ಕೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಗ್ರಾಪಂ ಸದಸ್ಯ ವಿನೋದ ಕೊಣ್ಣೂರ ಮತ್ತಿತರರು ಮನವಿ ಸಲ್ಲಿಸುವಾಗ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next