Advertisement

ಏಲ್ಗರ್‌ ಕೇಸ್‌:ಸುಧಾ ಭಾರದ್ವಾಜ್‌ ಬಾಂಬೆ ಹೈಕೋರ್ಟಿಗೆ ಜಾಮೀನು ಅರ್ಜಿ

11:20 AM Feb 06, 2019 | Team Udayavani |

ಮುಂಬಯಿ : ಏಲ್ಗರ್‌ ಪರಿಷತ್‌ ಕೇಸಿಗೆ ಸಂಬಂಧಿಸಿ ಬಂಧಿಸಲ್ಪಟ್ಟಿರುವ ಮಾನವ ಹಕ್ಕು ಕಾರ್ಯಕರ್ತೆ ಮತ್ತು ವಕೀಲೆ ಸುಧಾ ಭಾರದ್ವಾಜ್‌ ಅವರು ಜಾಮೀನು ಕೋರಿ ಬಾಂಬೆ ಹೈಕೋರ್ಟ್‌ ಗೆ ಅರ್ಜಿ ಹಾಕಿದ್ದಾರೆ.

Advertisement

ಭಾರದ್ವಾಜ್‌ ಅವರ ಜಾಮೀನು ಕೋರಿಕೆ ಅರ್ಜಿಯನ್ನು ಇಂದು ಬುಧವಾರ ಜಸ್ಟಿಸ್‌ ಎನ್‌ ಡಬ್ಲ್ಯು ಸಾಂಬ್ರೆ ವಿಚಾರಣೆಗೆ ಎತ್ತಿಕೊಂಡರು. 

ಕಳೆದ ವರ್ಷ ಅಕ್ಟೋಬರ್‌ ನಲ್ಲಿ ತನ್ನ ಜಾಮೀನು ಕೋರಿಕೆ ಅರ್ಜಿಯನ್ನು ತಿರಸ್ಕರಿಸಿದ್ದ ಪುಣೆ ನ್ಯಾಯಾಲಯದ ನಿರ್ಧಾರವನ್ನು ಪ್ರಶ್ನಿಸಿ ಸುಧಾ ಭಾರದ್ವಾಜ್‌ ಅವರು ತಮ್ಮ ವಕೀಲೆ ಯುಗ್‌ ಚೌಧರಿ ಮೂಲಕ ಬಾಂಬೆ ಹೈಕೋರ್ಟಿಗೆ ಜಾಮೀನು ಅರ್ಜಿ ಹಾಕಿದ್ದಾರೆ. ಫೆ.18ರಂದು ಹೈಕೋರ್ಟ್‌ ಪೀಠ ಸುಧಾ ಅವರ ಅರ್ಜಿಯ ವಿಸ್ತೃತ ವಿಚಾರಣೆ ನಡೆಸಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next