Advertisement
ಬೆಂಗಳೂರು, ಚೆನ್ನೈ, ಹೈದರಾಬಾದ್, ದೆಹಲಿ, ಮುಂಬಯಿ, ಕೋಲ್ಕತಾ ಇನ್ನಿತರ ಮಹಾನಗರಗಳಲ್ಲಿ ಸಮಸ್ಯೆ ಉಂಟಾಗುತ್ತಿರುವ ಸಂಚಾರ ದಟ್ಟಣೆಯಿಂದ ಇದರಿಂದ ಅಲ್ಲಿನ ಜನರು ಬೇಸತ್ತಿದ್ದಾರೆ. ಮಹಾನಗರಗಳಲ್ಲಿ ವಾಸ ಮಾಡುತ್ತಿರುವ ವ್ಯಕ್ತಿ ದಿನದ 24ಗಂಟೆಗಳಲ್ಲಿ ಏನಿಲ್ಲವೆಂದರೂ ಕನಿಷ್ಠ 2ರಿಂದ 3 ಗಂಟೆಗಳನ್ನು ಸಂಚಾರದಲ್ಲೇ ಕಳೆಯುತ್ತಿದ್ದಾನೆ. ಅಂತಹ ನಗರಗಳ ಸಾಲಿನಲ್ಲಿ ನಮ್ಮ ಮಂಗಳೂರು ಕೂಡ ಸೇರಿದೆ ಎನ್ನುವುದನ್ನು ಮರೆಯುವಂತಿಲ್ಲ. ನಗರಗಳಲ್ಲಿ ಸಂಚಾರ ದಟ್ಟನೆ ಕಡಿಮೆ ಮಾಡುವಲ್ಲಿ ಫ್ಲೈ ಓವರ್‌ಗಳು, ಎಲೆವೇಟೆಡ್ ಹೈವೆಗಳು ಬಹು ಮುಖ್ಯವಾದ ಪಾತ್ರ ವಹಿಸುತ್ತಿವೆ. ಮಂಗಳೂರಲ್ಲಿ ಸಂಜೆ ಮತ್ತು ಬೆಳಗ್ಗೆ 8ಗಂಟೆಯಿಂದ 10ಗಂಟೆಯವರೆಗೂ ನಂತೂರು ಸರ್ಕಲ್, ಕಂಕನಾಡಿಯ ಕರಾವಳಿ ಸರ್ಕಲ್, ಪಂಪ್‌ವೆಲ್ ಮುಂತಾದ ಪ್ರಮುಖ ವೃತ್ತಗಳಲ್ಲಿ ವಿಪರೀತ ಸಂಚಾರ ದಟ್ಟಣೆೆಯಿಂದ ಈಗಲೇ ನಗರದ ಜನ ಬೇಸತ್ತಿದ್ದಾರೆ. ಅದರಲ್ಲೆ ಪಂಪ್‌ವೆಲ್ ಫ್ಲೈಓವರ್ ವಿಳಂಬದಿಂದಾಗಿ ಕಂಕನಾಡಿ ಪರಿಸರದಲ್ಲಿ ಸಂಚಾರ ದಟ್ಟನೆ ಇನ್ನಷ್ಟು ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಇದಕ್ಕೆ ಸುಲಭ ಪರಿಹಾರವೆಂಬಂತೆ ಬೆಂಗಳೂರು, ವಿದೇಶದ ಮಹಾನಗರಗಳಲ್ಲಿರುವಂತಹ ಎಲೆವೇಟೆಡ್ ಹೈವೆ ನಿರ್ಮಿಸಬಹುದು.
ಎಲೆವೇಟೆಡ್ ಹೈವೆ ನಿರ್ಮಾಣದಿಂದ ನಗರಗಳಲ್ಲಿ ಸಂಚಾರ ದಟ್ಟಣೆಯನ್ನು ಸುಲಭವಾಗಿ ನಿಯಂತ್ರಣ ಮಾಡಬಹುದು. ನಗರದ ಜನತೆಯ ಪ್ರಯಾಣದ ಸಮಯವನ್ನೂ ಕಡಿಮೆ ಮಾಡಬಹುದು. ಸಂಚಾರ ದಟ್ಟಣೆಯಿಂದ ಉಂಟಾಗುವ ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಇತಆರೋಗ್ಯ ಸಮಸ್ಯೆಗಳನ್ನು ತಡೆಯಬಹುದಾಗಿದೆ. ಸಂಚಾರಿ ದೀಪಗಳ ಸರಿಯಾದ ನಿರ್ವಹಣೆಯ ಕೊರತೆಯಿಂದಾಗಿ ಆಗುತ್ತಿರುವಂತ ನೂರಾರು ಅಪಘಾತ, ಸಾವಿರಾರು ಸಾವುನೋವುಗಳನ್ನು ತಡೆಯಬಹುದು. ಇದರಿಂದ ಶೇ. 35 ರಷ್ಟು ಸಂಚಾರ ದಟ್ಟನೆ, ಶೇ 32ರಷ್ಟು ಮಾಲಿನ್ಯವನ್ನು ತಡೆಯುಬಹುದು.
Related Articles
Advertisement