Advertisement

ಗಜಪಡೆಗೆ ಗಂಡಾಂತರ

08:00 AM Apr 17, 2018 | Team Udayavani |

ಮಾನವನ ಹಸ್ತಕ್ಷೇಪದಿಂದಾಗಿ ವನ್ಯ ಜೀವಿಗಳಿಗೆ ಒದಗಿರುವ ಅಪಾಯ ದಿನೇ ದಿನೆ ಹೆಚ್ಚುತ್ತಿದೆ. ಒಡಿಶಾದ ಝಾರ್‌ಸುಗುದಾ ಜಿಲ್ಲೆಯ ಆನೆಗಳ ಕಾರಿಡಾರ್‌ ನಲ್ಲಿ ಸೋಮವಾರ, ಕಾರಿಡಾರ್‌ನ ಮೂಲಕ ಹಾದು ಹೋಗುವ ಹೌರಾ – ಮುಂಬಯಿ ರೈಲು ಹಳಿಯನ್ನು ದಾಟುವ ವೇಳೆ ರೈಲಿಗೆ ಸಿಲುಕಿರುವ ಎರಡು ಗಂಡಾನೆ, ಎರಡು ಹೆಣ್ಣಾನೆ ದಾರುಣ ಸಾವನ್ನಪ್ಪಿವೆ. ನಮ್ಮಲ್ಲಿ ಆನೆಗಳ ಸಂತತಿ ಎಷ್ಟಿದೆ, ಹೆಚ್ಚಾಗುತ್ತಿರುವ ಅವುಗಳ ಸಾವಿನ ಸಂಖ್ಯೆ ಎಷ್ಟು ಕಳವಳಕಾರಿ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

Advertisement

ಸಂತತಿ ಕ್ಷೀಣ
ಕಳೆದೈದು ವರ್ಷಗಳಲ್ಲಿ ಆನೆಗಳ ಸಾವುಗಳು ಹೆಚ್ಚಾಗಿದ್ದು ಅವುಗಳ ಸಂತತಿ ಕ್ಷೀಣಿಸಿದೆ ಎನ್ನುತ್ತದೆ 2017ರ ಆನೆಗಳ ಗಣತಿ ವರದಿ. 2012ರಲ್ಲಿ ಆನೆಗಳ ಸಂಖ್ಯೆ 29,391ರಿಂದ  30,711ರಷ್ಟಿತ್ತು. ಆದರೆ, 2017ರಲ್ಲಿ ಇವುಗಳ ಸಂಖ್ಯೆ 23 ರಾಜ್ಯಗಳಲ್ಲಿ 27,312ರಷ್ಟಿದೆ. ಅಲ್ಲಿಗೆ, ಸುಮಾರು 3000 ಆನೆಗಳು ಮೃತವಾಗಿ ಶೇ. 10ರಷ್ಟು ಆನೆ ಸಂತತಿ ಕಡಿಮೆಯಾಗಿದೆ ಎಂದು ಹೇಳಲಾಗಿದೆ. 

ಶೇ. 60 ಆನೆಗಳ ತವರು!
ಅಂತಾರಾಷ್ಟ್ರೀಯ ಪರಿಸರ ಸಂರಕ್ಷಕರ ಒಕ್ಕೂಟ (ಐ.ಯು.ಸಿ.ಎನ್‌) ಘೋಷಿಸಿರುವಂತೆ, ಏಷ್ಯಾದಲ್ಲಿ ಆನೆಗಳ ಸಂಖ್ಯೆ 41,410ರಿಂದ 52,345ರಷ್ಟಿದ್ದು, ಇವುಗಳಲ್ಲಿ ಶೇ.60ರಷ್ಟು ಭಾರತದಲ್ಲೇ ಇವೆ. ಹಾಗಾಗಿ, ಭಾರತ ‘ಪ್ರಾಜೆಕ್ಟ್ ಎಲಿಫೆಂಟ್‌’ ಯೋಜನೆಯನ್ನು 1992ರಲ್ಲೇ ಆರಂಭಿಸಿದೆ. ಅದರಂತೆ, ದೇಶದ 29 ಪ್ರಾಂತ್ಯಗಳ, ಒಟ್ಟು 65,000 ಕಿ.ಮೀ. ವ್ಯಾಪ್ತಿಯನ್ನು ಆನೆಗಳ ಸಂರಕ್ಷಣಾ ವಲಯಗಳೆಂದು ಘೋಷಿಸಲಾಗಿದೆ.

ಕಳೆದ  8 ವರ್ಷಗಳಲ್ಲಿ ಆಗಿರುವ ಆನೆಗಳ ಸಾವು (ಗಣತಿ ಪ್ರಗತಿಯಲ್ಲಿದೆ) : 665
ವಿಷಪ್ರಾಶನದಿಂದ : 44
ರೈಲು ಅಪಘಾತ‌ : 120
ರೈಲು ಅಪಘಾತ‌ : 120
ಕಳ್ಳಸಾಗಣೆ ದಾರರಿಂದ ಹತ್ಯೆ : 101

ಆನೆಗಳ ಸಾವಿನ ವಾರ್ಷಿಕ ಲೆಕ್ಕ
2009-10        80
2010-11        106
2011-12        82
2012-13        105
2013-14        80
2014-15        80
2015-16        69
2016-17        44 

Advertisement
Advertisement

Udayavani is now on Telegram. Click here to join our channel and stay updated with the latest news.

Next