ಕೋಲ್ಕತಾ: ಸಾಮಾನ್ಯವಾಗಿ ಕಾಡು ಪ್ರಾಣಿಗಳು ಜನವಸತಿ ಇರುವ ಪ್ರದೇಶಗಳಿಗೆ ಬಂದು ಭೀತಿ ಹುಟ್ಟಿಸಿರುವ ಘಟನೆಗಳ ಹಲವಾರು ವಿಡಿಯೋಗಳನ್ನು ನೋಡಿದ್ದೇವೆ. ಅದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಪಶ್ಚಿಮಬಂಗಾಲದ ಜಲ್ ಪೈಗುರಿ ಜಿಲ್ಲೆಯಲ್ಲಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಐಪಿಎಲ್ ಗೂ ಗುಡ್ ಬೈ ಹೇಳಿದ ಸುರೇಶ್ ರೈನಾ: ಹೊಸ ನಿರ್ಧಾರ ತಿಳಿಸಿದ ಮಿಸ್ಟರ್ ಐಪಿಎಲ್
ಜಲ್ ಪೈ ಗುರಿ ಜಿಲ್ಲೆಯಲ್ಲಿನ ಸೇನಾ ಕಂಟೋನ್ಮೆಂಟ್ ಆಸ್ಪತ್ರೆಯೊಳಗೆ ಆನೆಗಳು ಒಳಬರುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಆನೆಗಳು ಆರ್ಮಿ ಕಂಟೋನ್ಮೆಂಟ್ ಆಸ್ಪತ್ರೆಯ ವಾರ್ಡ್ ನೊಳಗೆ ಹೋಗುತ್ತಿರುವ ದೃಶ್ಯವನ್ನು ಆಸ್ಪತ್ರೆಯೊಳಗಿನ ಸಿಬಂದಿಗಳು ಸೆರೆ ಹಿಡಿದಿದ್ದಾರೆ ಎಂದು ವರದಿ ತಿಳಿಸಿದೆ.
ಆನೆಗಳು ಸೇನಾ ಆಸ್ಪತ್ರೆಯ ವಾರ್ಡ್ ನೊಳಗೆ ತೆರಳುತ್ತಿರುವ ವಿಡಿಯೋಕ್ಕೆ ಸಾಮಾಜಿಕ ಜಾಲತಾಣದಲ್ಲಿ ತಮಾಷೆಯ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. “ಅರಣ್ಯ ನಾಶದಿಂದಾಗಿ ಆನೆಗಳು ಜನವಸತಿ ಪ್ರದೇಶಗಳತ್ತ ಬರುತ್ತಿರುವುದಾಗಿ ಹಲವರು ಟ್ವೀಟ್ ಮಾಡಿದ್ದಾರೆ.
ಈ ಮೊದಲು ಕೂಡಾ ಪಶ್ಚಿಮಬಂಗಾಳದಲ್ಲಿ ಇಂತಹ ಘಟನೆ ನಡೆದಿತ್ತು ಎಂದು ವರದಿ ವಿವರಿಸಿದೆ. 2019ರಲ್ಲಿ ಬಂಗಾಳದ ಹಾಸಿಮರಾ ಆರ್ಮಿ ಕ್ಯಾಂಟೀನ್ ನೊಳಕ್ಕೆ ಆನೆಯೊಂದು ನುಗ್ಗಿ ಟೇಬಲ್ ಮತ್ತು ಕುರ್ಚಿಗಳನ್ನು ಧ್ವಂಸಗೊಳಿಸಿತ್ತು.