ಸಕಲೇಶಪುರ: ಕಾಡಾನೆ ಸಮಸ್ಯೆ ಬಗೆಹರಿಸದ ಕೇಂದ್ರ ಹಾಗೂ ರಾಜ್ಯ ಸರ್ಕಾ ರದ ವಿರುದ್ಧ ಬೆಳೆಗಾರರ ಸಂಘ, ಕನ್ನಡ ಪರ ಸಂಘಟ ನೆಗಳು, ಮಹಿಳಾ ಸಂಘಟನೆ ಗಳು,ಕಾರ್ಮಿಕ ಸಂಘಗಳು ಹಾಗೂ ಆನೆ ಹಾವಳಿ ಪೀಡಿತಪ್ರದೇಶದ ಸಾರ್ವಜನಿಕ ರು ಸೇರಿದಂತೆ ಇನ್ನೂ ಅನೇಕಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಪûಾತೀತವಾಗಿ ಬಾಗೆ ಗ್ರಾಮದ ಮಹಾತ್ಮ ಗಾಂಧೀಜಿ ಪ್ರತಿಮೆಬಳಿ ಸೋಮವಾರ ಬೆಳಗ್ಗೆ 10-30ಕ್ಕೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಶಾಸಕ ಎಚ್.ಕೆ. ಕುಮಾರ ಸ್ವಾಮಿ ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು ಈ ಪ್ರತಿಭಟನೆಯಲ್ಲಿ ಬೇಲೂರು ಶಾಸಕ ರಾದ ಲಿಂಗೇಶ್
ಅವರು, ಆಲೂರು ತಾಲೂಕಿನ ಜನರು , ವಿವಿಧಸಂಘಟನೆ ಗಳ ಮುಖಂಡರು, ಜನಪ್ರತಿನಿಧಿಗಳು ಭಾಗವಹಿಸಲಿದ್ದು ತಾವು ಹೋರಾಟದಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಪ್ರತಿಭಟನೆಗೆ ಸಹಕರಿಸಿ: ಕಾಡಾನೆ ಹಾವಳಿ ಹೆಚ್ಚಿರುವ ಹಾಸನ ಜಿಲ್ಲೆಯ ಎಲ್ಲ ಬೆಳೆಗಾರರ ಸಂಘಟನೆಗಳುಹಾಗು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮತ್ತುಆಲ್ದೂರು ಮತ್ತು ಕೊಡಗು ಜಿಲ್ಲೆಯ ಬೆಳೆಗಾರರುಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸರ್ಕಾರದ ಗಮನಸೆಳೆಯಬೇಕಾಗಿದೆ.
ಮನವಿಗೆ ಸರ್ಕಾರ ಸ್ಪಂದಿಸಿಲ್ಲ: ಕಾರಣ ಕರ್ನಾಟಕ ಗ್ರೋವರ್ಸ್ ಫೆಡೆರೇಷನ್ ಕಾಡಾನೆ ಹಾವಳಿಯಿಂದ ಮಲೆನಾಡು ಭಾಗದಲ್ಲಿ ಸಾವು ನೋವುಗಳು ಹೆಚ್ಚಾಗಿದ್ದು, ಸರ್ಕಾರದ ಪ್ರಸ್ತುತ ಅರಣ್ಯಮಂತ್ರಿಯವರಿಗೆ 3 ಬಾರಿ ಮನವಿ ಮಾಡಿದ್ದರು ಈವಿಚಾರವಾಗಿ ಗಮನಹರಿಸುತ್ತಿಲ್ಲ. ಮತ್ತು ಈ ಹಿಂದೆಕರ್ನಾಟಕ ಗ್ರೋವರ್ಸ್ ಫೆಡೆರೇಷನ್ ವತಿಯಿಂದ ಸಕಲೇಶಪುರದ ಅರಣ್ಯ ಇಲಾಖೆ ಮುಂದೆ ಪ್ರತಿಭಟನೆಹಮ್ಮಿಕೊಂಡು ಹಾಗು ಬೆಂಗಳೂರಿನ ಅರಣ್ಯ ಭವನದಮುಂದೆ ಸಭೆ ಮಾಡಿ ದಿಕ್ಕಾರವನ್ನು ಕೂಗಿ ಬಂದಿರುತ್ತಾರೆ. ಮತ್ತು ಇತ್ತೀಚೆಗೆ ಅರೇಹಳ್ಳಿಯಲ್ಲಿ ಪ್ರತಿಭಟನೆ ಮಾಡಲಾಗಿದೆ. ಇಷ್ಟಾದರೂ ಸರ್ಕಾರ ಸ್ಪಂದಿಸುತ್ತಿಲ್ಲ.
ಸರ್ಕಾರದ ಗಮನ ಸೆಳೆಯಬೇಕು: ಮಾನ್ಯ ಅರಣ್ಯ ಮಂತ್ರಿಗಳು ಸಕಲೇಶಪುರ ಭಾಗಕ್ಕೆ ಬಂದು ಕಾಡಾನೆಸಮಸ್ಯೆ ಬಗ್ಗೆ ಅಧ್ಯಯನ ಮಾಡುವುದಾಗಿ ತಿಳಿಸಿದ್ದು ,ಇಲ್ಲಿಯವರೆಗೂ ಬಂದಿರುವುದಿಲ್ಲ. ಆದ್ದ ರಿಂದ ಮಾನ್ಯಅರಣ್ಯ ಮಂತ್ರಿಯವರಿಗೆ ಹಾಗೂ ಸರ್ಕಾರಕ್ಕೆಗಮನಸೆಳೆಯುವ ಕೆಲಸ ಮಾಡಬೇಕಾಗಿದೆ. ಕಾಡಾನೆಹಾವಳಿ ಹೆಚ್ಚಿರುವ ಹಾಸನ ಜಿಲ್ಲೆಯ ಎಲ್ಲ ಬೆಳೆಗಾರರುಹಾಗು ಚಿಕ್ಕಮಗಳೂರಿನ ಅಲ್ದೂರು ಮತ್ತು ಮೂಡಿಗೆರೆಮತ್ತು ಕೊಡಗು ಜಿಲ್ಲೆಯ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕೋರುತ್ತೇನೆ ಎಂದಿದ್ದಾರೆ.