ಬೇಲೂರು: ಒಂಟಿ ಸಲಗವೊಂದು ದಾಳಿ ನಡೆಸಿ 3 ವಿದ್ಯುತ್ ಕಂಬ, ಅಡಕೆ ಮರ ಹಾಗೂ ಕಾಳುಮೆಣಸು ಬಾಳೆ, ಕಾಫಿ ಗಿಡ ನಾಶ ಮಾಡಿರುವ ಘಟನೆ ನಡೆದಿದೆ.
ತಾಲೂಕಿನ ಅರೇಹಳ್ಳಿ ತೊಳಲು ರಸ್ತೆಯಲ್ಲಿರುವ ಮಾಲಹಳ್ಳಿಯ ಚಂದ್ರೇಗೌಡರತೋಟಕ್ಕೆ ಒಂಟಿ ಸಲಗವೊಂದು ದಾಳಿ ಮಾಡಿ 3ವಿದ್ಯುತ್ ಕಂಬಗಳನ್ನು ತಂತಿ ಸಮೇತ ಕೆಡವಿಹಾಕಿದೆ. ವಿದ್ಯುತ್ ತಂತಿ ಜೊತೆಗೆ ಫಸಲಿಗೆ ಬಂದಿದ್ದ ಅಡಿಕೆ ಮರಗಳು ನೆಲಕ್ಕುರುಳಿವೆ.
ಅಡಿಕೆ ಮರಕ್ಕೆ ಹಬ್ಬಿಸಿದ್ದ ಮೆಣಸಿನ ಬಳ್ಳಿಗಳೂ ಭೂಮಿ ಸೇರಿವೆ. ಕೆಲವು ಕಡೆ ಕಾಫಿ ಗಿಡಗಳು ಹಾಳಾಗಿವೆ. ಮೊದಲೇ ಅತಿವೃಷ್ಟಿಯಿಂದಸಂಕಷ್ಟಕ್ಕೀಡಾಗಿರುವ ರೈತರಿಗೆ ಗಾಯದ ಮೇಲೆಬರೆ ಎಳೆದಂತೆ ಒಂಟಿ ಸಲಗದ ಕಾಟ ಚಿಂತೆಗೀಡು ಮಾಡಿದೆ.
ಕಾಫಿ ಬೆಳೆಗಾರ ಚಂದ್ರೇಗೌಡ ಮಾತನಾಡಿ, ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿಅತಿ ಶೀತದಿಂದ ಕಾಫಿ, ಮೆಣಸು ಬೆಳೆನಷ್ಟವಾಗಿದೆ. ಈಗ ಇದು ಸಾಲದು ಎಂಬಂತೆಒಂಟಿ ಸಲಗವೊಂದು ಈ ಭಾಗದಲ್ಲಿ ದಾಳಿ ಮಾಡುತ್ತಿದೆ. ನಮ್ಮ ತೋಟದಲ್ಲಿ ನುಗ್ಗಿರುವ ಆನೆ ಹಾವಳಿಗೆ 3 ವಿದ್ಯುತ್ ಕಂಬಗಳು ಬಿದ್ದಿವೆ.
ವಿದ್ಯುತ್ ಕಂಬ ಬಿದ್ದ ರಭಸಕ್ಕೆ ತಂತಿಗೆ ಸಿಕ್ಕಿದಅಡಕೆ ಮರಗಳು ಬಾಳೆಗಿಡಗಳು ಕೂಡ ನೆಲಕ್ಕೊರಗಿವೆ. ಬಾಳೆ ಗೊನೆಗಳು ಬಲಿತಿದ್ದುಇನ್ನೇನು ಕೀಳಬೇಕು ಎನ್ನುವಷ್ಟರಲ್ಲಿ ಈ ರೀತಿಹಾಳಾಗಿವೆ ಎಂದು ತಮ್ಮ ಅಳಲು ತೋಡಿಕೊಂಡರು.
ಈ ಹಿಂದೆಯೂ ಆನೆಗಳ ಹಿಂಡು ದಾಳಿಮಾಡಿದ ಸಂದರ್ಭದಲ್ಲಿ ಸಾಕಷ್ಟು ಹಾನಿಯಾಗಿದ್ದು, ಪರಿಹಾರಕ್ಕಾಗಿ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿ 6 ತಿಂಗಳಾಗಿದೆಇದುವರೆವಿಗೂ ನಯಾಪೈಸೆ ಬಂದಿಲ್ಲ. ಐದಾರು ಎಕರೆ ಕಾಫಿ ಬೆಳೆಯುವ ಸಣ್ಣ ರೈತರಾಗಿದ್ದು ಮನೆಯ ಚಿನ್ನ ಅಡವಿಟ್ಟು ಸಾಲಮಾಡಿ ಹಣ ತಂದಿರುತ್ತೇವೆ. ಆದರೆ, ಈಗ ಅತಿವೃಷ್ಟಿ ಹಾಗೂ ಆನೆಗಳ ದಾಳಿಯಿಂದಕಂಗೆಟ್ಟಿದ್ದೇವೆ. ಈಗಲಾದರೂ ಶಾಸಕರು ಇತ್ತಗಮನಹರಿಸಿ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಮನವಿ ಮಾಡಿದರು.