Advertisement

ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ : ಎಪ್ರಿಲ್‌ನಲ್ಲಿ ಕೇಂದ್ರಕ್ಕೆ ನಿಯೋಗ: ಗೋಪಾಲಯ್ಯ

12:28 AM Mar 21, 2021 | Team Udayavani |

ಸಕಲೇಶಪುರ: ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕೋರಿ ಎಪ್ರಿಲ್‌ನಲ್ಲಿ ಕೇಂದ್ರಕ್ಕೆ ಬೆಳೆಗಾರರ ನಿಯೋಗವನ್ನು ಕರೆದೊಯ್ಯು ವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹೇಳಿದರು.

Advertisement

ಕಸಬಾ ಹೋಬಳಿ ಬೆಳೆಗಾರರ ಸಂಘವು ಶನಿವಾರ ಹಮ್ಮಿಕೊಂಡಿದ್ದ ಕಾಫಿ ಕೃಷಿ ಸಮ್ಮೇಳನ ಹಾಗೂ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಜನರನ್ನು ಕಾಡುತ್ತಿರುವ ಕಾಡಾನೆ ಸಮಸ್ಯೆ ಬಗ್ಗೆ ಅರಿವಿದ್ದು, ಇದನ್ನು ಶಾಶ್ವತವಾಗಿ ನಿವಾರಿಸಲು ಕೇಂದ್ರ ಕ್ರಮ ಕೈಗೊಳ್ಳ ಬೇಕಾಗಿದೆ. ಈ ನಿಟ್ಟಿನಲ್ಲಿ ಕಾಡಾನೆ ಸಮಸ್ಯೆ ಪೀಡಿತ ಪ್ರದೇಶದ ಶಾಸಕರ ಸಭೆ ನಡೆಸಿದ್ದು, ಎ.17ರ ಬಳಿಕ ನನ್ನ ನಾಯಕತ್ವದಲ್ಲೇ ಶಾಸಕರು, ಸಂಸದರು ಹಾಗೂ ಬೆಳೆಗಾರರ ಸಂಘದ ಪ್ರತಿನಿಧಿಗಳನ್ನು ಕೇಂದ್ರಕ್ಕೆ ಕರೆದೊಯ್ಯಲಾಗುವುದು ಎಂದರು.

ಆತಂಕ ಬೇಡ :

ಅರಣ್ಯ ಒತ್ತುವರಿ ಸಮಸ್ಯೆ ಬಗೆಹರಿಸಲು ಕೇರಳ ಮಾದರಿಯಲ್ಲಿ ಜಮೀನು ಗುತ್ತಿಗೆ ನೀಡುವ ಪದ್ಧತಿ ಜಾರಿಗೊಳಿಸಲು ಚಿಂತಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ರೈತರು ಆತಂಕಗೊಳ್ಳಬೇಕಾಗಿಲ್ಲ ಎಂದರು.

ಸಿಎಂ ಜತೆ ಚರ್ಚೆ :

Advertisement

ಸಮಯಕ್ಕೆ ಸರಿಯಾಗಿ ರಸಗೊಬ್ಬರ ದೊರಕದ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಶೀಘ್ರದಲ್ಲೇ ಬೆಳೆಗಾರರ ಸಂಘದ ಪ್ರತಿನಿಧಿಗಳನ್ನು ಕೇಂದ್ರ ರಸಗೊಬ್ಬರ ಸಚಿವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಲಾಗುವುದು. 10 ಎಚ್‌.ಪಿ. ಮೋಟಾರ್‌ವರೆಗೆ ಉಚಿತ ವಿದ್ಯುತ್‌ ನೀಡುವ ಹಾಗೂ ಬಡ್ಡಿ ಮನ್ನಾ ಯೋಜನೆ ಅವಧಿ ಮತ್ತಷ್ಟು ತಿಂಗಳು ವಿಸ್ತರಿಸುವ ಕುರಿತು ಸಿಎಂ ಜತೆ ಚರ್ಚಿಸಿ ಪರಿಹಾರ ಕಂಡು ಕೊಳ್ಳಲಾಗುವುದು ಎಂದರು.

ಶಾಸಕ ಎಚ್‌.ಕೆ. ಕುಮಾರಸ್ವಾಮಿ, ಮಾಜಿ ಶಾಸಕ ಎಚ್‌. ಎಂ. ವಿಶ್ವನಾಥ್‌, ಕಸಬಾ ಬೆಳೆಗಾರರ ಸಂಘದ ಅಧ್ಯಕ್ಷ ಉದಯ್‌ ಕುಮಾರ್‌ ಮಾತನಾಡಿದರು.  ಕಾಫಿ ಬೋರ್ಡ್‌ ಅಧ್ಯಕ್ಷ ಭೋಜೇಗೌಡ, ಕರ್ನಾಟಕ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್‌ ಕುಮಾರ್‌ ಸಹಿತ ಗಣ್ಯರು ಉಪಸ್ಥಿತರಿದ್ದರು.

 ಸುರಂಗ ಮಾರ್ಗಕ್ಕೆ ಪ್ರಬಲ ವಿರೋಧ :

ಶಿರಾಡಿಘಾಟಿಯ ರಾಷ್ಟ್ರೀಯ ಹೆದ್ದಾರಿ-75ಕ್ಕೆ ಪರ್ಯಾಯವಾಗಿ ನಿರ್ಮಿಸಲು ಉದ್ದೇಶಿಸಿರುವ ಸುರಂಗ ಮಾರ್ಗಕ್ಕೆ ನಮ್ಮ ಪ್ರಬಲ ವಿರೋಧವಿದೆ ಎಂದು ಶಾಸಕ ಎಚ್‌.ಕೆ. ಕುಮಾರಸ್ವಾಮಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next