Advertisement
ಭಾನುವಾರ ಮಧ್ಯಾಹ್ನದ ವೇಳೆಯಲ್ಲಿ ಒಂಟಿ ಸಲಗ ಮಧ್ಯೆ ರಸ್ತೆಯಲ್ಲಿ ಸಂಚರಿಸಿ ಮಂಗಳೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಟ್ಯಾಂಕರ್ ವೊಂದರ ಹತ್ತಿರ ಹೋಗಿ ಅಲ್ಪ ಪ್ರಮಾಣದಲ್ಲಿ ಜಖಂಗೊಳಿಸಿ ಕಾಡಿಗೆ ಸಾಗಿದೆ. ಇದನ್ನು ಬೆಂಗಳೂರಿನಿಂದ ಮಂಗಳೂರು ಕಡೆಗೆ ಹೋಗುವ ಬಸ್ ಪ್ರಯಾಣಿಕರು ವಿಡಿಯೋ ಮಾಡಿರುವುದು ವೈರಲ್ ಆಗಿದೆ.
Related Articles
Advertisement
ಮದವೇರಿದ ಕಾಡಾನೆ ಗುಂಪಿನಿಂದ ಬೇರ್ಪಟ್ಟು ಮತ್ತೆ ಕಾಡಿಗೆ ತೆರಳಲು ಸಾಧ್ಯವಾಗದೆ ಹೆದ್ದಾರಿ ಪಕ್ಕದಲ್ಲೇ ಬೀಡುಬಿಟ್ಟಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನನಿತ್ಯ ಸಾವಿರಾರು ವಾಹನ ಸಂಚರಿಸುತ್ತಿದ್ದು ಯಾವ ಸಮಯದಲ್ಲಾದರೂ ದಾಳಿ ಮಾಡುವ ಸಾಧ್ಯತೆ ಇದೆ. ಇನ್ನಾದರೂ ಅರಣ್ಯಇಲಾಖೆ ಎಚ್ಚೆತ್ತು ಕಾಡಾನೆ ಇರುವ ಬಗ್ಗೆ ವಾಹನ ಸವಾರರಿಗೆ ಮಾಹಿತಿ ನೀಡುವುದರ ಜತೆಗೆ ಒಂಟಿಸಲಗಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕಿದೆ. ಇಲ್ಲವಾದಲ್ಲಿ ಅನಾಹುತ ಗ್ಯಾರಂಟಿ
ಎರಡು ತಿಂಗಳಿಂದಲೂ ಸಲಗ ಸಮಸ್ಯೆ :
ಕಳೆದ 2 ತಿಂಗಳಿನಿಂದ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ಶಿರಾಡಿಘಾಟ್ ರಸ್ತೆಯಲ್ಲಿ ಒಂಟಿಸಲಗವೊಂದು ಬೀಡುಬಿಟ್ಟಿದೆ. ಪ್ರತಿನಿತ್ಯ ಸಾವಿರಾರು ವಾಹನಗಳು ಇದೇ ರಸ್ತೆ ಮೂಲಕ ಧರ್ಮಸ್ಥಳ, ಮಂಗಳೂರು, ಬೆಂಗಳೂರಿಗೆ ಸಂಚರಿಸುತ್ತವೆ. ಕಾಡಾನೆ ಹೆದ್ದಾರಿಯಲ್ಲಿ ಓಡಾಡುತ್ತಿರುವುದರಿಂದ ವಾಹನ ಸವಾರರ ಮೇಲೆ
ದಾಳಿ ಮಾಡುವ ಆತಂಕ ಎದುರಾಗಿದೆ. ಕೆಲ ದಿನಗಳ ಹಿಂದೆ ಕಾರು, ಲಾರಿ ಮೇಲೆ ಇದೇಒಂಟಿಸಲಗ ದಾಳಿ ಮಾಡಿದ್ದು, ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಪಾರಾಗಿದ್ದರು. ಹೊರ ಜೆಲ್ಲೆಗಳಿಂದ ಈ ಮಾರ್ಗದ ಮೂಲಕ ಪ್ರವಾಸಿ ತಾಣಗಳಿಗೆ ತೆರಳುವವರು ಮಾರ್ಗ ಮಧ್ಯೆ ಪ್ರಕೃತಿಸೌಂದರ್ಯ ಸವಿಯಲು ವಾಹನಗಳನ್ನು ನಿಲ್ಲಿಸುತ್ತಾರೆ. ಈ ವೇಳೆ ಕಾಡಾನೆ ದಾಳಿ ಮಾಡುವ ಸಾಧ್ಯತೆಯಿದ್ದು ಈಗಲಾದರೂ ಅರಣ್ಯ ಇಲಾಖೆ ಎಚ್ಚೆತ್ತು ಕಾಡಾನೆ ಸ್ಥಳಾಂತರಿಸುವಂತೆ ಪ್ರಯಾಣಿಕರು ಒತ್ತಾಯಿಸಿದ್ದಾರೆ.