Advertisement
ಹುಲಿಅಭಯಾರಣ್ಯಕ್ಕೆ ರಾಜ್ಯ ಸರ್ಕಾರಗಳು ಸಿದ್ಧಪಡಿಸಿದ ನಿಯಮಾವಳಿಗಳಂತೆಯೇ ಆನೆಗಳ ಅಭಯಾರಣ್ಯ ಸ್ಥಾಪನೆಗೆ ನಿಯಮ ರಚಿಸಬೇಕು. ಅದರ ಅನ್ವಯ ಹದಿನೈದು ರಾಜ್ಯಗಳಲ್ಲಿ ಆನೆ ಅಭಯಾರಣ್ಯ ಸ್ಥಾಪನೆ ಮಾಡಬೇಕು ಎನ್ನುವುದು ಆಶಯ. ದೇಶದಲ್ಲಿ ಸುಮಾರು30 ಸಾವಿರಆನೆಗಳು ಇವೆ.ಅಂದರೆ ಜಗತ್ತಿನ ಶೇ.60ರಷ್ಟು ಆನೆಗಳು, ಅದರಲ್ಲೂ ಏಷ್ಯಾ ವಲಯದಲ್ಲಿ ಕಂಡುಬರುವವುಗಳು ನಮ್ಮ ದೇಶದಲ್ಲಿಯೇ ಇವೆ. 2019ರಲ್ಲಿ ರಾಷ್ಟ್ರೀಯ ಆನೆ ಕಾರ್ಯ ಯೋಜನೆ ಸಿದ್ಧಪಡಿಸಲು ಸಮಿತಿ ರಚಿಸಲಾಗಿತ್ತು. ಅದೇ ವರ್ಷದ ನವೆಂಬರ್ ನಲ್ಲಿ ಸಭೆ ನಡೆಸಿತ್ತು. “ಜಗತ್ತಿನ ಯಾವುದೇ ದೇಶದಲ್ಲಿ ಆನೆಗಳಿಗಾಗಿ ಅಭಯಾರಣ್ಯ ರಚಿಸಿಲ್ಲ. ಆದರೆ ನಮ್ಮ ದೇಶಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಆನೆಗಳಿರುವ ಬಾಂಗ್ಲಾದೇಶ, ನೇಪಾಳದಂಥ ರಾಷ್ಟ್ರಗಳು ಅವುಗಳದ್ದೇ ಆಗಿರುವ ಕಾರ್ಯಯೋಜನೆ ಸಿದ್ಧಪಡಿಸಿವೆ’ ಎಂದು ಕೇಂದ್ರ ಅರಣ್ಯ ಮತ್ತು ಪರಿಸರಸಚಿವಾಲಯದಲ್ಲಿ ಆನೆಗಳ ವಿಭಾಗದಲ್ಲಿ ರಾಷ್ಟ್ರೀಯ ಸಂಚಾಲಕರಾಗಿರುವ ಪ್ರಜ್ಞಾ ಪಾಂಡಾ ಹೇಳಿದ್ದಾರೆ.
ಒಡಿಶಾ, ಪಶ್ಚಿಮ ಬಂಗಾಳದ ದಕ್ಷಿಣ ಭಾಗ, ಛತ್ತೀಸ್‌ಘಡ, ಜಾರ್ಖಂಡ್, ಬಿಹಾರ, ಆಂಧ್ರಪ್ರದೇಶದ ಉತ್ತರ ಭಾಗ ಮತ್ತು ದಕ್ಷಿಣ ಭಾಗ, ತಮಿಳುನಾಡು, ಕರ್ನಾಟಕ,ಕೇರಳ, ಉತ್ತರ ಪ್ರದೇಶ, ಉತ್ತರಾಖಂಡ ರಾಜ್ಯಗಳಲ್ಲಿ ವಲಯಗಳನ್ನು ಆನೆಗಳ ಅಭಯಾರಣ್ಯ ರಚಿಸಲು ಗುರುತಿಸಲಾಗಿದೆ.