Advertisement

ಹಂಬನತೋಟ ಪಿಚ್‌ಗೆ ಆನೆಕಾಟ..!

03:50 AM Jul 04, 2017 | Team Udayavani |

ಕೊಲಂಬೊ: ಜಿಂಬಾಬ್ವೆ ವಿರುದ್ಧ ಮೂರನೇ ಏಕದಿನಕ್ಕೆ ಸಿದ್ಧವಾಗಿರುವ ಶ್ರೀಲಂಕಾದ ಹಂಬನತೋಟ ಪಿಚ್‌ಗೆ ಈಗ ಆನೆಕಾಟ ಶುರುವಾಗಿದೆ. ಸಮೀಪದಲ್ಲೇ ಆನೆಗಳ ಸಂತತಿ ಹೆಚ್ಚಿರುವುದರಿಂದ ಆಗಾಗ ಪಿಚ್‌ ಮೇಲೆ ದಾಳಿ ಕೂಡ ನಡೆದಿದೆ ಎನ್ನಲಾಗಿದೆ.

Advertisement

ಪಂದ್ಯದ ವೇಳೆ ಆನೆಗಳಿಂದ ತೊಂದರೆಯಾಗಬಾರದೆಂದು ಬೇಲಿ ಕೂಡ ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ 11 ಭದ್ರತಾ ಸಿಬ್ಬಂದಿಗಳ ನೇಮಕ ಮಾಡಲಾಗಿದೆ ಎಂದು ಕ್ರೀಡಾಂಗಣ ಸಿಬ್ಬಂದಿಯೊಬ್ಬರು ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದ ವೇಳೆ ತಿಳಿಸಿದ್ದಾರೆ. ಆನೆ ರಕ್ಷಿತಾರಣ್ಯ ಗಡಿಭಾಗದ 100 ಮೀ. ವ್ಯಾಪ್ತಿಯೊಳಗೆ ಹಂಬನತೋಟ ಕ್ರೀಡಾಂಗಣವಿದೆ. ಇಲ್ಲಿ 25ಕ್ಕೂ ಹೆಚ್ಚು ಆನೆಗಳು ತಿರುಗಾಡುತ್ತಿರುತ್ತವೆ. ಕ್ರಿಕೆಟ್‌ ಹೊರತಾಗಿ ಇಲ್ಲಿ ಜನರು ಸುಮ್ಮನೆ ತಿರುಗಾಡುವುದು ಆನೆಗಳನ್ನು ಕೆರಳಿಸುವುದು ನಿಷೇಧಿಸಲಾಗಿದೆ.

ಸಮಸ್ಯೆ ಎದುರಾಗಿರುವುದು ಇದೇ ಮೊದಲೇನಲ್ಲ. 2 ವರ್ಷಗಳ ಹಿಂದೆಯೂ ಇದೇ ರೀತಿ ಸಮಸ್ಯೆ ಎದುರಾಗಿತ್ತು. 2009ರಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಲಾಗಿದೆ. ಅಂದಿನ ಅಧ್ಯಕ್ಷ ಮಹೀಂದಾ ರಾಜಪಕ್ಸೆ ಕ್ರೀಡಾಂಗಣ ಸ್ಥಾಪಿಸಲು ಮುಖ್ಯ ಕಾರಣಕರ್ತರು. ಸದ್ಯ ಹಂಬನತೋಟದಲ್ಲಿ 35 ಸಾವಿರಕ್ಕೂ ಅಭಿಮಾನಿಗಳಿಗೆ ಕುಳಿತು ಪಂದ್ಯ ವೀಕ್ಷಿಸಬಹುದು. ಸದ್ಯ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಹಂಬನತೋಟದಲ್ಲಿ ಆಯೋಜಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next