Advertisement

ರಸ್ತೆ ಮಧ್ಯೆ ನಿಂತ ಸಲಗ: ಟ್ರಾಫಿಕ್‌ ಜಾಮ್‌

07:08 PM Dec 13, 2020 | Suhan S |

ಯಳಂದೂರು: ತಾಲೂಕಿನ ಪ್ರಸಿದ್ಧ ಯಾತ್ರಸ್ಥಳವಾಗಿರುವ ಬಿಳಿಗಿರಿರಂಗನಬೆಟ್ಟ ಹುಲಿ ರಕ್ಷಿತ ಅರಣ್ಯ ಪ್ರದೇಶದಲ್ಲಿ ಶನಿವಾರ ಒಂಟಿ ಸಲಗ ರಸ್ತೆ ಮಧ್ಯೆ ಪದೇ ಪದೇ ನಿಂತು ವಾಹನ ದಟ್ಟಣೆಗೆ ಕಾರಣವಾಯಿತು.

Advertisement

ಬೆಟ್ಟದ ನವಿಲುಕೆರೆ ಬಳಿ ದೊಡ್ಡ ದಂತವನ್ನು ಹೊಂದಿರುವ ಸಲಗವೊಂದು ಕಾಣಿಸಿಕೊಂಡಿತು. ಬೆಟ್ಟದಿಂದ ಬಾಗಲಕೋಟೆಗೆ ಹಾದು ಹೋಗುವರಾಜ್ಯ ಹೆದ್ದಾರಿ 57ರ ಮಧ್ಯೆ ಕಾಣಿಸಿಕೊಂಡಕಾಡಾನೆಯು ಇಲ್ಲಿ ನೀರನ್ನು ಕುಡಿದು ನಂತರ ರಸ್ತೆ ಮಧ್ಯೆ ನಿಂತಿತು. 20 ನಿಮಿಷಗಳ ನಂತರ ಮತ್ತೆ ಕಾಡೊಳಕ್ಕೆ ತೆರಳಿತು. ನಂತರ ಮತ್ತೆ ಇದರ ಅನತಿ ದೂರದಲ್ಲಿ ರಸ್ತೆಗೆ ಬಂದು ಬರೋಬ್ಬರಿ 30 ನಿಮಿಷಕ್ಕೂ ಹೆಚ್ಚು ಕಾಲ ರಸ್ತೆಯ ಬದಿಯಲ್ಲೇ ನಿಂತು ಮೇವನ್ನು ಮೆಲ್ಲುತ್ತಿತ್ತು. ವಾಹನಗಳು ಮುಂದೆ ಬಂದರೆ ಒಂದು ಹೆಜ್ಜೆ ರಸ್ತೆಗಿಡುತ್ತಿದ್ದರಿಂದ ಸವಾರರು ತಮ್ಮ ವಾಹನವನ್ನು ದೂರದಲ್ಲೇ ನಿಲ್ಲಿಸಿದ್ದರು. ಇದರಿಂದ ಹತ್ತಾರು ಮೀಟರ್‌ ಉದ್ದ ವಾಹನ ದಟ್ಟಣೆ ಇತ್ತು. ನಂತರ ಕಾಡೊಳಕ್ಕೆ ಆನೆ ತೆರಳಿದ್ದರಿಂದ ವಾಹನ ಸವಾರರು ನಿರಾಳವಾಗಿ ವಾಪಸ್ಸಾದರು.

ಬೈಕ್‌ನಲ್ಲಿ ಬಿದ್ದ ಸವಾರರು: ಆನೆ ರಸ್ತೆಯನ್ನು ಅಡ್ಡಗಟ್ಟಿದೆ ಎಂದು ತಿಳಿದು ಗಾಬರಿಗೊಂಡ ಇಬ್ಬರು ಬೈಕ್‌ ಸವಾರರು ಆಯತಪ್ಪಿ ರಸ್ತೆಗೆ ಬಿದ್ದರು. ಆದರೆ, ವಾಹನದ ವೇಗ ಕಡಿಮೆ ಇದ್ದರಿಂದ ಸಣ್ಣಪುಟ್ಟ ಗಾಯಗಳಾಯಿತು. ಬಿ. ಆರ್‌.ಹಿಲ್ಸ್‌ನರಸ್ತೆಕಿರಿದಾಗಿದ್ದುಇಲ್ಲಿಮಳೆಯಿಂದ ರಸ್ತೆಯ ಇಕ್ಕೆಲಗಳಲ್ಲಿರುವ ಮಣ್ಣು ಕುಸಿದಿದ್ದು ದೊಡ್ಡದೊಡ್ಡ ಹಳ್ಳಗಳಾಗಿವೆ. ಇದರಿಂದ ವಾಹನ ಚಾಲಕರು ಅದರಲ್ಲೂ ಬೈಕ್‌ ಸವಾ ರರು ಎದುರಿಂದ ವಾಹನ ಬಂದರೆ ರಸ್ತೆ ಪಕ್ಕಕ್ಕೆ ಸರಿದರೆ ಜಾರಿ ಬೀಳುವ ಅಪಾಯ ಹೆಚ್ಚಾಗಿದೆ. ಈ ಬಗ್ಗೆಕೂಡಲೇ ಸಂಬಂಧಪಟ್ಟ ಲೊಕೋಪಯೋಗಿ ಹಾಗೂ ಅರಣ್ಯ ಇಲಾಖೆಯವರು ಈ ಹಳ್ಳಗಳನ್ನು ಮುಚ್ಚಲು ಕ್ರಮ ವಹಿಸಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next