Advertisement

ಉಡುಪಿ: ನಾಳೆಯಿಂದ ಇಲೆಕ್ಟ್ರಾನಿಕ್ಸ್‌, ಬಟ್ಟೆ ,ಚಿನ್ನಾಭರಣ ಮಳಿಗೆಗಳು ತೆರೆಯಲು ಅವಕಾಶ

08:20 AM May 04, 2020 | sudhir |

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಭೀತಿಯಿಂದ ಬಂದ್‌ ಮಾಡಲಾದ ಇಲೆಕ್ಟ್ರಾನಿಕ್ಸ್‌ , ಬಟ್ಟೆ ಮಳಿಗೆಗಳು,ಚಿನ್ನಾಭರಣ ಅಂಗಡಿ ಸೇರಿದಂತೆ ಎಲ್ಲಾ ಅಂಗಡಿಗಳು ಮೇ 4ರಿಂದ ಕಾರ್ಯಾಚರಿಸಲಿದೆ.

Advertisement

ಜಿಲ್ಲೆಯಲ್ಲಿರುವ ಮೊಬೈಲ್‌ ಶೋರೂಮ್‌ ಸೇರಿದಂತೆ ಇತರೆ ಇಲೆಕ್ಟ್ರಾನಿಕ್‌ ಮಳಿಗೆಗಳನ್ನು ನಾಳೆಯಿಂದ ಬೆಳಗ್ಗೆ 7ರಿಂದ ಮಧ್ಯಾಹ್ನ 1ರ ವರೆಗೆ ತೆರೆದಿಡಲು ಅವಕಾಶ ನೀಡಲಾಗಿದೆ. ಆದರೆ ಮಳಿಗೆಯಲ್ಲಿ ಹವಾನಿಯಂತ್ರಿತ ವ್ಯವಸ್ಥೆಯನ್ನು ಚಾಲುಗೊಳಿಸಿರಬಾರದು ಎಂಬ ಷರತ್ತು ವಿಧಿಸಲಾಗಿದೆ.

ಇಲೆಕ್ಟ್ರಾನಿಕ್‌ ಮಳಿಗೆಯಲ್ಲಿ 10 ನೌಕರರು ಕೆಲಸ ನಿರ್ವಹಿಸಬೇಕು. ಮಳಿಗೆಗೆ ಒಂದು ಬಾರಿ ಒಮ್ಮೆಗೆ ಕೇವಲ 10 ಮಂದಿಗೆ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಬೇಕು. ಬಟ್ಟೆ ಅಂಗಡಿಗಳಲ್ಲೂ 25 ನೌಕರರು ಕೆಲಸ ನಿರ್ವಹಿಸಿ 25 ಗ್ರಾಹಕರನ್ನು ಒಳಗೆ ಬಿಡಬೇಕು. ಒಳಗಿದ್ದ ಗ್ರಾಹಕರು ಹೊರಗೆ ಹೋದ ಬಳಿಕವೇ ಹೊರಗಿದ್ದ ಗ್ರಾಹಕರನ್ನು ಒಳಗೆ ಕರೆಯಬೇಕು. ಹೊರಗೆ ವೇಟಿಂಗ್‌ ರೂಮ್‌ ವ್ಯವಸ್ಥೆ ಮಾಡಬೇಕು. ಒಂದು ವೇಳೆ ಸಾಮಾಜಿಕ ಅಂತರ ಹಾಗೂ ನಿಯಮ ಮೀರಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ಉದಯವಾಣಿಗೆ ತಿಳಿಸಿದ್ದಾರೆ.

ಲಾಕ್‌ಡೌನ್‌ ಬಳಿಕ ಜಿಲ್ಲೆಯ ಎಲ್ಲ ಇಲೆಕ್ಟ್ರಾನಿಕ್‌ ಮಳಿಗೆ, ಬಟ್ಟೆ ಅಂಗಡಿಗಳನ್ನು ಬಂದ್‌ ಮಾಡಲಾಗಿದ್ದು, ಸಾರ್ವಜನಿಕರು ಅಗತ್ಯ ಬಟ್ಟೆ, ಇಲೆಕ್ಟ್ರಾನಿಕ್‌ ವಸ್ತುಗಳ ಖರೀದಿಗೆ ಪರದಾಡುವಂತಾಗಿತ್ತು. ಇದೀಗ ಜಿಲ್ಲೆಯು ಹಸಿರು ವಲಯವಾಗಿ ಗುರುತಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟಿಗೆ ರಿಯಾಯಿತಿ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next