Advertisement
ಕೈಗಾರಿಕೆ ಗ್ರಾಹಕರು ಎಸ್ಕಾಂಗಳಿಂದ 6.60ರಿಂದ 7.60 ರೂ. ಖರೀದಿಸುವ ಬದಲಿಗೆ ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಯೂನಿಟ್‌ಗೆ ಕೇವಲ 3ರಿಂದ 4 ರೂ.ಗೆ ಪಡೆಯುತ್ತಿದ್ದಾರೆ. ಮತ್ತೂಂದೆಡೆ ಕೆಲವರು ತಾವೇ ಉತ್ಪಾದನೆ ಮಾಡಿ ಬಳಕೆ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಕೂಡ ಉತ್ತೇಜನ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಎಚ್‌ಟಿ (ಹೈ-ಟೆನÒನ್) ಗ್ರಾಹಕರು ಎಸ್ಕಾಂಗಳಿಂದ ವಿಮುಖರಾಗುತ್ತಿದ್ದಾರೆ. ಆದರೆ, ಆದಾಯದ ದೊಡ್ಡ ಮೂಲ ಆಗಿರುವ ಈ ವರ್ಗವನ್ನು ಹಿಡಿದಿಡುವ ಉದ್ದೇಶದಿಂದ ನಿಗದಿತ ಶುಲ್ಕ ಮತ್ತು ಬೇಡಿಕೆ ಶುಲ್ಕ ಹೆಚ್ಚಳಕ್ಕೆ ಮುಂದಾಗಿದೆ. ಉದಾಹರಣೆಗೆ ಎಚ್‌ಟಿ 2ಎ ಬಳಕೆದಾರರಿಗೆ ಮೊದಲ 1 ಕಿ.ವಾ. ಪ್ರಸ್ತುತ ಇರುವ ನಿಗದಿತ ಶುಲ್ಕ 100 ರೂ. ಪ್ರಸ್ತಾವಿತ ಶುಲ್ಕ 415 ರೂ. ಆಗಿದೆ. ಅದೇ ರೀತಿ, 50 ಕಿ.ವಾ.ವರೆಗೆ 110 ರೂ. ಇದ್ದದ್ದು, 560 ರೂ.ಗೆ ಹೆಚ್ಚಿಸಲು ಅನುಮತಿ ಕೋರಲಾಗಿದೆ. ಅದೇ ರೀತಿ, ಸ್ವಂತ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಮಾಡುವ “ಕ್ಯಾಪ್ಟಿವ್ ಜನರೇಷನ್’ (ನಿರ್ಬಂಧಿತ ಉತ್ಪಾ ದನೆ) ಗ್ರಾಹಕರಿಗೂ “ಗ್ರಿಡ್ ಸಪೋರ್ಟ್ ಚಾರ್ಜ್’ (ಜಾಲ ಬಳಕೆ ಶುಲ್ಕ)ದ ಹೆಸರಿನಲ್ಲಿ ಪ್ರತಿ ಯೂನಿಟ್‌ಗೆ 2.74 ರೂ. ನಿಗದಿಪಡಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.
Related Articles
Advertisement
ಈ ಮೊದಲು ಸ್ವಂತ ವಿದ್ಯುತ್ ಉತ್ಪಾದಕರೂ ಆಗಿರುವ ಬಳಕೆದಾರರಿಗೆ “ಗ್ರಿಡ್ ಸಪೋರ್ಟ್ ಚಾರ್ಜ್’ ಎಂಬುದು ಇರಲೇ ಇಲ್ಲ. ಯಾಕೆಂದರೆ, ಅವರು ಸ್ವಂತ ಖರ್ಚಿನಲ್ಲಿ ವಿದ್ಯುತ್ ಘಟಕ ಸ್ಥಾಪಿಸಿ ಉತ್ಪಾದಿಸಿ, ಅದನ್ನು ಬಳಕೆ ಮಾಡುತ್ತಿದ್ದಾರೆ. ಆದರೆ, ಈಗ ಅವರಿಗೂ ಪ್ರತಿ ಯೂನಿಟ್‌ಗೆ 2.74 ರೂ. ಶುಲ್ಕ ವಿಧಿಸಲು ಮುಂದಾಗಿರುವುದು ಖಂಡನೀಯ. ಇದರಿಂದ ವಿದ್ಯುತ್ ಕ್ಷೇತ್ರಕ್ಕೆ ಮಾತ್ರವಲ್ಲ; ಉದ್ಯಮಕ್ಕೂ ಭಾರಿ ಹೊಡೆತ ಬೀಳಲಿದೆ. -ಎಂ.ಜಿ. ಪ್ರಭಾಕರ್, ಸಲಹಾ ಸಮಿತಿ ಮಾಜಿ ಸದಸ್ಯರು, ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)
ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಯೂನಿಟ್‌ಗೆ 3-4 ರೂ.ಗೇ ಸಿಗುತ್ತಿದೆ. ಇಲ್ಲಿ ಯಾಕೆ ತೆಗೆದುಕೊಳ್ಳಬೇಕು? ನೆರೆಯ ರಾಜ್ಯಗಳ ನೆಪ ಮುಂದಿಟ್ಟುಕೊಂಡು ಇಲ್ಲಿ ಅನುಷ್ಠಾನಗೊಳಿಸುವುದಾಗಿ ಹೇಳುತ್ತಾರೆ. ಆದರೆ, ನೆರೆಯ ರಾಜ್ಯಗಳಲ್ಲಿ ಭೂಮಿ ಬೆಲೆ ಸೇರಿದಂತೆ ಇತರೆ ಮೂಲಸೌಕರ್ಯ ಹೇಗಿದೆ? ಅಷ್ಟಕ್ಕೂ ಒಂದೆಡೆ ಸೋಲಾರ್, ಪವನ ವಿದ್ಯುತ್ ಖರೀದಿಸಿ ಅಂತ ಉತ್ತೇಜನ ನೀಡುತ್ತಾರೆ. ಮತ್ತೂಂದೆಡೆ ಪರೋಕ್ಷವಾಗಿ ಹೊರೆ ಹಾಕುತ್ತಾರೆ. ಎಷ್ಟರಮಟ್ಟಿಗೆ ಸರಿ? – ಬಿ.ವಿ. ಗೋಪಾಲ್ ರೆಡ್ಡಿ, ಅಧ್ಯಕ್ಷರು, ಎಫ್ಕೆಸಿಸಿಐ
-ವಿಜಯಕುಮಾರ ಚಂದರಗಿ