Advertisement
ಗೃಹ ಜ್ಯೋತಿ ಜಾರಿ ಬಳಿಕ ಸಮರ್ಪಕವಾಗಿ ವಿದ್ಯುತ್ ಕೊಡುತ್ತಿಲ್ಲ ಎಂಬ ಆರೋಪದ ಮಧ್ಯೆ, ಬೇಸಿಗೆ ಪ್ರಾರಂಭವಾಗಿರುವುದರಿಂದ ಕೃಷಿ ಪಂಪ್ ಸೆಟ್‌ಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ರೈತರು ಕಂಗಾಲು ಆಗಿದ್ದಾರೆ. ಅಲ್ಲದೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ರೈತರು, ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ.
Related Articles
Advertisement
ಹೊಸದಾಗಿ ಕೃಷಿ ಚಟುವಟಿಕೆ ನಡೆಸಲು ಪ್ರಸ್ತುತ ವಿದ್ಯುತ್ ಪರಿವರ್ತಕ ಅಳವಡಿಸಿಕೊಳ್ಳಬೇಕಿದೆ. 10-12 ಸಾವಿರ ರೂ.ಗಳನ್ನು ವಿದ್ಯುತ್ ಕಂಪನಿಗೆ ಕಟ್ಟಬೇಕು. ವಿದ್ಯುತ್ ಪರಿವರ್ತಕ, ಕಂಬ, ತಂತಿಗಳು ಸೇರಿದಂತೆ ಇತರೆ ಪರಿಕರಗಳನ್ನು ರೈತರೇ ಖುದ್ದು ಖರೀದಿ ಮಾಡುವುದರಿಂದ ಹೊಸಬರಿಗೆ ಕೃಷಿ ಮಾಡಲು ವಿದ್ಯುತ್ ಪರಿವರ್ತಕದ ತಲೆನೋವು ಶುರುವಾಗಿದೆ.
ಬೆಳಗಿನ ಅವಧಿಯಲ್ಲಿ 4 ಗಂಟೆ ಹಾಗೂ ರಾತ್ರಿ ವೇಳೆ 3 ಗಂಟೆ ವಿದ್ಯುತ್ ನೀಡುವುದಾಗಿ ಹೇಳಲಾಗಿದ್ದು, ಸುಸೂತ್ರವಾಗಿ ಸಿಗದೆ, ಕಣ್ಣಾಮುಚ್ಚಾಲೆ ಯಾಟವಾ ಡುತ್ತಿದೆ. ಬಹುತೇಕ ಕಡೆಗಳಲ್ಲಿ ಗಂಟೆಗಟ್ಟಲೇ ಕಡಿತಗೊಂಡಿದೆ. ಲೋಡ್ ಶೆಡ್ಡಿಂಗ್, ವೋಲ್ಟೆàಜ್ ಕಿರಿಕಿರಿಯಿಂದ ರೈತರು ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ.
ಅಸಮರ್ಪಕ ವಿದ್ಯುತ್‌ನಿಂದ ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿದ್ಯುತ್ ಸಮಸ್ಯೆಯಿಂದ ರೈತರು ತಾವು ಬೆಳೆಯುವ ಬೆಳೆಗಳಿಗೆ ಸರಿಯಾಗಿ ನೀರು ಹಾಯಿಸಲು ಆಗುತ್ತಿಲ್ಲ. ಬೆಸ್ಕಾಂ ಸಮರ್ಪಕವಾಗಿ ವಿದ್ಯುತ್ ನೀಡಬೇಕಿದೆ.-ವೆಂಕಟನಾರಾಯಣಪ್ಪ, ರಾಜ್ಯ ಉಪಾಧ್ಯಕ್ಷ, ರೈತ ಸಂಘ
ಹೊಸ ವಿದ್ಯುತ್ ಪರಿವರ್ತಕ ಅಳವಡಿಕೆಗೆ ರೈತರ ಸ್ವಂತ ಖರ್ಚು ಸುಮಾರು 1 ಲಕ್ಷ ರೂ.ಗೂ ಮೇಲ್ಪಟ್ಟು ಆಗುತ್ತದೆ. ಸರ್ಕಾರ ಸೋಲಾರ್ ಅಳವಡಿಸ ಲು ರೈತರಿಗೆ ಶೇ.50ರಷ್ಟು ಸಬ್ಸಿಡಿ ನೀಡಲು ಮುಂದಾಗಬೇಕು. ಬರದ ನಡುವೆ ನೀರು, ವಿದ್ಯುತ್ ಸಮಸ್ಯೆ ಸಾಮಾನ್ಯ. ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ರೈತರು ಪರದಾಡುವಂತಾಗಿದೆ.-ಚಿಕ್ಕೇಗೌಡ, ರೇಷ್ಮೆ ಬೆಳೆಗಾರ, ಕೊಯಿರ
ಬೆಳಗ್ಗೆ 4, ರಾತ್ರಿ 3 ಗಂಟೆಗಳ ಕಾಲ ತ್ರೀಫೇಸ್ ವಿದ್ಯುತ್ ಕೊಡ ಲಾಗುತ್ತಿದೆ. ಲೋಡ್‌ಶೆಡ್ಡಿಂಗ್, ಮರ ಬೀಳುವುದು ಇನ್ನಿತರೆ ಅಡೆತಡೆಯಿಂದ ಸಮಯದಲ್ಲಿ ವ್ಯತ್ಯಾಸ ವಾಗಲಿದೆ. ದಿನದಲ್ಲಿ 7 ಗಂಟೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. -ಲಕ್ಷ್ಮೀಕಾಂತ, ಎಇಇ, ಬೆಸ್ಕಾಂ
– ಎಸ್.ಮಹೇಶ್