Advertisement

ರಾಜ್ಯದಲ್ಲಿ ವಿದ್ಯುತ್‌ ದರ ಏರಿಕೆ! ಯೂನಿಟ್‌ಗೆಷ್ಟು ಹೆಚ್ಚಾಯ್ತು? 

12:11 PM Apr 11, 2017 | |

ಬೆಂಗಳೂರು: ಹಾಲು, ಅಡುಗೆ ಅನಿಲ ಬೆಲೆ ಏರಿಕೆ ಬಳಿಕ ಈಗ ವಿದ್ಯುತ್‌ ದರ ಏರಿಕೆಯ ಶಾಕ್‌!  ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಮಂಗಳವಾರ 2017-18ನೇ ಸಾಲಿನ ಪರಿಷ್ಕೃತ ವಿದ್ಯುತ್‌ ದರ ಪ್ರಕಟಿಸಿದ್ದು, ಪ್ರತಿ ಯೂನಿಟ್‌ಗೆ 48 ಪೈಸೆ ದರ ಹೆಚ್ಚಳವಾಗಿದೆ.

Advertisement

30 ಕೆಇಆರ್‌ಸಿ ಅಧ್ಯಕ್ಷ ಎಂ.ಕೆ ಶಂಕರಲಿಂಗೇ ಗೌಡ ಅವರು ಮಂಗಳವಾರ ಸುದ್ದಿಗೋಷ್ಠಿ ನಡೆಸಿ ದರ ಏರಿಕೆ ಮಾಡಿ ಆದೇಶ ಹೊರಡಿಸಿದ್ದಾರೆ. 

ದ್ಯುತ್‌ ಸರಬರಾಜು ಕಂಪೆನಿ (ಎಸ್ಕಾಂ)ಗಳು ಪ್ರತಿ ಯೂನಿಟ್‌ಗೆ ಸರಾಸರಿ 1.40 ರೂ. ದರ ಏರಿಕೆಗೆ ಪ್ರಬಲ ವಾದ ಮಂಡಿಸಿದ್ದವು. ದರ ಏರಿಕೆ ಪ್ರಸ್ತಾವನೆ ವಿರೋಧಿಸಿ ಗ್ರಾಹಕರು ಕೆಇಆರ್‌ಸಿಗೆ ಆಕ್ಷೇಪಣೆಗಳನ್ನು ಸಲ್ಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಗ್ರಾಹಕರು ಮತ್ತು ಎಸ್ಕಾಂಗಳ ವಿಚಾರಣೆಯನ್ನು ಪೂರ್ಣಗೊಳಿಸಿದ ಆಯೋಗ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಮಂಗಳವಾರ ವಿದ್ಯುತ್‌ ದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next