Advertisement

ಆಶ್ರಯ ನಿವಾಸಿಗಳಿಗೆ ವಿದ್ಯುತ್‌ ಹೊರೆ

05:07 AM Jun 18, 2020 | Team Udayavani |

ಯಳಂದೂರು: ಪಟ್ಟಣದ ಒಂದನೇ ವಾರ್ಡಿನ ಆಶ್ರಯ ಬಡಾವಣೆ ನಿವಾಸಿಗಳೂ ತಾತ್ಕಾಲಿಕ ವಿದ್ಯುತ್‌ ಸಂಪರ್ಕ ನೀಡಿದ್ದು ಸಾವಿರಾರು ರೂ. ಬಿಲ್‌ ಪಾವತಿಸಲಾಗದೆ ನಿವಾಸಿಗಳು ಬಿಲ್‌ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

Advertisement

ಬಡಾವಣೆಯಲ್ಲಿ ಮನೆಗಳಿಗೆ ಬರುವ  ಬಿಲ್‌ ಮಾತ್ರ ಇನ್ನೂ ತಾತ್ಕಾಲಿಕ ಸಂಪರ್ಕಲ್ಲಿದ್ದು, 1ರಿಂದ 3 ಸಾವಿರ ರೂ. ಗಳ ವರೆಗೂ ಬಿಲ್‌ ಬರುತ್ತಿದೆ. ಇಲ್ಲಿ ಪಟ್ಟಣ ಪಂಚಾಯಿತಿ ಖಾಲಿ ನಿವೇಶನಗಳು ಬಡವರಿಗೆ ನೀಡಿ ದಶಕವೇ ಕಳೆದಿದೆ. ಆದರೆ,  ಮೂಲ ಸೌಲಭ್ಯ ಮಾತ್ರ ಕಲ್ಪಿಸಿಲ್ಲ. ನಾವು ಮನೆ ನಿರ್ಮಿಸಿ ಐದು ವರ್ಷಗಳಾಗಿದೆ. ಅಲ್ಲಿಂದ ಇಲ್ಲಿವರೆಗೆ 70 ಸಾವಿರ ರೂ.ಗಿಂತಲೂ ಹೆಚ್ಚು ವಿದ್ಯುತ್‌ ಬಿಲ್‌ ಪಾವತಿಸಿದ್ದೇನೆ. ಈ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ.

ಈ ಬಗ್ಗೆ ಹಲವು  ಬಾರಿ  ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನ ವಾಗಿಲ್ಲ. ಕೂಡಲೇ ಸಂಬಂಧಪಟ್ಟವರು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ನಿವಾಸಿಗಳಾದ ಸ್ವಾಮಿ, ರತ್ನಮ್ಮ ದೂರಿದರು. ಇಲ್ಲಿನ ವಾಸಿಗಳಾದ  ಇರ್ಷಾದ್‌, ಪಾರ್ವತಿ, ಲಕ್ಷ್ಮಮ್ಮ, ಯಶೋಧಾ, ಭಾಗ್ಯ, ಜಯಲಕ್ಷ್ಮೀ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next