Advertisement
ಮೆಸ್ಕಾಂ ವತಿಯಿಂದ ಬುಧವಾರ ತಾ.ಪಂ. ಸಭಾಂಗಣದಲ್ಲಿ ಪುತ್ತೂರು ನಗರ, ಗ್ರಾಮಾಂತರ ಮತ್ತು ಕಡಬ ಉಪವಿಭಾಗದ ಜನಸಂಪರ್ಕ ಸಭೆಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
ಮಂಗಳೂರಿನ ಮೆಸ್ಕಾಂ ಅಧೀಕ್ಷಕ ಎಂಜಿನಿಯರ್ ಮಂಜಪ್ಪ ಮಾತನಾಡಿ, ದೀನ್‌ದಯಾಳ್ ಗ್ರಾಮ ವಿದ್ಯುತ್ ಯೋಜನೆಯಲ್ಲಿ ಪ್ರತಿ ಬಿಪಿಎಲ್ ಕುಟುಂಬಕ್ಕೂ ವಿದ್ಯುತ್ ಕಲ್ಪಿಸಲು ಅವಕಾಶ ಇದ್ದು, ಅರ್ಹ ಫಲಾನುಭವಿಗಳಿದ್ದರೆ ಹೆಸರು ಸೇರ್ಪಡೆ ಗೊಳಿಸಬಹುದು ಎಂದರು.
Related Articles
Advertisement
ಒಟ್ಟು 36 ಕೋ.ರೂ. ಕಾಮಗಾರಿಗೆ ಟೆಂಡರ್ ಆಗಿದ್ದು, ಸರ್ವೆ ಕಾರ್ಯ ನಡೆದಿದೆ. ಅದನ್ನು ಆಧರಿಸಿ ಎಸ್ಟಿ ಮೇಟ್ ತಯಾರಿಸಲಾಗುತ್ತದೆ. ಇಲ್ಲಿ ಬಳಸುವ ಸಾಮಗ್ರಿಗಳ ಖರೀದಿಗೆ ಮುನ್ನ ಥರ್ಡ್ ಪಾರ್ಟಿ ಪರಿಶೀಲಿಸಿ, ಗುಣಮಟ್ಟ ಖಾತರಿ ಪಡಿಸಲಾಗುತ್ತದೆ. ಎಸ್ಟಿಮೇಟ್‌ಗೆ ಒಪ್ಪಿಗೆ ದೊರೆತ ಅನಂತರ ಕೆಲಸ ಆರಂಭಗೊಳ್ಳುತ್ತದೆ ಎಂದರು.
ಕೆಲವು ತುರ್ತು ಕಾಮಗಾರಿಗಳನ್ನು ಈ ಯೋಜನೆಯಲ್ಲಿ ಸೇರಿಸಲು ಅವಕಾಶ ಕೋರಲಾಗಿದೆ. ಒಪ್ಪಿಗೆ ಸಿಕ್ಕಿದರೆ, ಆ ಕೆಲಸ ಪೂರ್ಣಗೊಳಿಸಬಹುದು. ಹಾಗಾಗಿ ತುರ್ತು ಕಾಮಗಾರಿ ಪಟ್ಟಿಗಳನ್ನು ತಯಾರಿಸುವಂತೆ ಸೆಕ್ಷನ್ ಅಧಿಕಾರಿ ಗಳಿಗೆ ಅಧೀಕ್ಷಕರು ಸೂಚನೆ ನೀಡಿದರು.
ಎಲ್‌ಇಡಿ ಬಲ್ಬ್ ಸಮಸ್ಯೆತಾ.ಪಂ. ಸದಸ್ಯೆ ಉಷಾ ಅಂಚನ್ ಮಾತನಾಡಿ, ಎಲ್‌ಇಡಿ ಬಲ್ಬ್ ರಿಪೇರಿ ಆಗು ತ್ತಿಲ್ಲ. ಗುಣಮಟ್ಟ ಇಲ್ಲದ ಬಲ್ಬ್ ನೀಡಿದ್ದು, ಯಾಕೆ ಎಂದು ಪ್ರಶ್ನಿಸಿದರು. ಇದೇ ವಿಚಾರಕ್ಕೆ ಸಂಬಂಧಿಸಿ ಜ್ಯೋ ಡಿ’ಸೋಜಾ ಮೊದಲಾದವರು ಧ್ವನಿಗೂಡಿಸಿದರು. ಇದಕ್ಕೆ ಉತ್ತರಿಸಿದ ಅಧೀಕ್ಷಕ ಮಂಜಪ್ಪ, ಸರಕಾರದ ಮಟ್ಟದಲ್ಲಿ ಹಳೆ ಗುತ್ತಿಗೆದಾರ ರನ್ನು ಬದಲಾಯಿಸಿ ಹೊಸಬರನ್ನು ಆಯ್ಕೆ ಮಾಡಲಾಗಿದೆ. ಬಲ್ಬ್ನ ಗುಣಮಟ್ಟದ ಬಗ್ಗೆ ಖಾತರಿಪಡಿಸಲಾಗಿದೆ. ಬಂಟ್ವಾಳ ದಲ್ಲಿ ಬಲ್ಬ್ ವಿತರಿಸಲಾಗುತ್ತಿದ್ದು, ಸುಳ್ಯ, ಪುತ್ತೂರಿನಲ್ಲಿ ತತ್‌ಕ್ಷಣವೇ ಆರಂಭಿಸಲಾಗುವುದು ಎಂದು ಹೇಳಿದರು. ಕೆಲಸ ಪೂರ್ಣಗೊಳಿಸಿ ಟಿ.ಸಿ. ಮಂಜೂರಾತಿ ಆದ ಸ್ಥಳದಲ್ಲಿ ಒಂದು ಕಂಬ ಹಾಕಿ, ಅಲ್ಲಿಂದ ಮತ್ತೂಂದೆಡೆ ತೆರಳುತ್ತಾರೆ. ಏಕಕಾಲದಲ್ಲಿ ಹತ್ತಾರು ಕಡೆ ಕೆಲಸ ಆರಂಭಿಸುವ ಕಾರಣ, ಯಾವುದೂ ಪೂರ್ಣಗೊಳ್ಳುವುದಿಲ್ಲ. ಹಾಗಾಗಿ ಒಂದು ಕೆಲಸ ಮುಗಿದ ಅನಂತರ ಇನ್ನೊಂದು ಶುರು ಮಾಡಬೇಕು ಎಂದು ತಾ.ಪಂ. ಸದಸ್ಯೆ ಉಷಾ ಅಂಚನ್ ಆಗ್ರಹಿಸಿದರು.
ಉತ್ತರಿಸಿದ ಅಧೀಕ್ಷಕ ಮಂಜಪ್ಪ, ಒಂದು ಕೆಲಸ ಪೂರ್ಣಗೊಂಡ ಅನಂತರ ಇನ್ನೊಂದು ಕೆಲಸ ಆರಂಭಿಸಬೇಕು. ಪ್ರತಿ ಕಾಮಗಾರಿ 3 ತಿಂಗಳೊಳಗೆ ಪೂರ್ಣಗೊಳ್ಳಬೇಕು ಎಂದು ಅವರು ಸಭೆಯಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಟಿ.ಸಿ., ಹಳೆ ವಯರ್ ಸಮಸ್ಯೆ
ತಾಲೂಕು ಪಂಚಾಯತ್ ಸದಸ್ಯರಾದ ತೇಜಸ್ವಿನಿ ಕಟ್ಟೆಪುಣಿ, ಸಾಜ ರಾಧಾಕೃಷ್ಣ ಆಳ್ವ, ಆಶಾ ಲಕ್ಷ್ಮೀ, ಪರಮೇಶ್ವರ, ಹರೀಶ್ ಬಿಜತ್ರೆ, ನಗರಸಭೆ ಉಪಾಧ್ಯಕ್ಷ ವಿಶ್ವನಾಥ ಗೌಡ ಮೊದಲಾದವರು, ತಾಲೂಕಿನ ವಿವಿಧೆಡೆ ಟಿ.ಸಿ. ಸಮಸ್ಯೆ, ಹಳೆ ವಯರ್‌ನಿಂದ ಉದ್ಭವಿಸುತ್ತಿರುವ ಸಮಸ್ಯೆಗಳ ಕುರಿತು ಸಭೆಯ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಅಧಿಕಾರಿ, ಟಿ.ಸಿ. ಒದಗಣೆಗೆ ನಮ್ಮಲ್ಲಿ ಫಂಡ್ ಇದೆ. ಬೇಡಿಕೆಗೆ ತಕ್ಕಂತೆ ವ್ಯವಸ್ಥೆ ಕಲ್ಪಿಸಲಾಗುವುದು. 150 ಮನೆಗಳು ಇರುವ ಪರಿಸರದಲ್ಲಿ ಹೆಚ್ಚುವರಿ ಟಿ.ಸಿ. ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ತಾ.ಪಂ.ಅಧ್ಯಕ್ಷೆ ಭವಾನಿ ಚಿದಾನಂದ, ಸ್ಥಾಯೀ ಸಮಿತಿ ಅಧ್ಯಕ್ಷ ಮುಕುಂದ ಗೌಡ, ಮೆಸ್ಕಾಂ ನಿರ್ದೇಶಕಿ ಮಲ್ಲಿಕಾ ಪಕ್ಕಳ, ಪುತ್ತೂರು ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಪ್ರಶಾಂತ್ ಪೈ, ನಗರ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ರಾಮಚಂದ್ರ ಎಂ., ಲೆಕ್ಕಾಧಿಕಾರಿ ಮಹಾದೇವ್, ಪುತ್ತೂರು ವಿಭಾಗ ಕಚೇರಿ ಎಂಜಿನಿಯರ್ ವಿನುತಾ ಮೊದಲಾದವರು ಉಪಸ್ಥಿತರಿದ್ದರು. ಚರ್ಚೆಯ ಪ್ರಮುಖಾಂಶ
– ಮೊಟ್ಟೆತ್ತಡ್ಕ 25 ಮತ್ತು 26ನೇ ವಾರ್ಡ್‌ನಲ್ಲಿ ಪ್ರತ್ಯೇಕ ಟಿ.ಸಿ ಅಳವಡಿಸಿದ್ದರೂ ವಿದ್ಯುತ್ ಪೂರೈಕೆ ಸಮರ್ಪಕವಾಗಿಲ್ಲ: ನಗರಸಭಾ ನಾಮನಿರ್ದೇಶಿತ ಸದಸ್ಯ ದಿಲೀಪ್ ಮೊಟ್ಟೆತ್ತಡ್ಕ – ಎಂ.ಟಿ. ರೋಡ್‌ನಲ್ಲಿ ಶಾಲೆ, ವಾಣಿಜ್ಯ ಕಟ್ಟಡ ಇರುವ ಪರಿಸರದಲ್ಲಿ ವಿದ್ಯುತ್ ಕಂಬ ವಾಲಿದೆ. ಈ ಬಗ್ಗೆ ಮನವಿ ಕೊಟ್ಟರೂ ಸ್ಪಂದನೆ ಸಿಕ್ಕಿಲ್ಲ : ಜ್ಯೋ ಡಿ’ಸೋಜಾ – ಕಡಬ ಪರಿಸರದಲ್ಲಿ ವಿದ್ಯುತ್ ಸಮಸ್ಯೆ ಸಾಕಷ್ಟಿದೆ. ಈಗ ಎ.ಇ. ಅವರನ್ನು ವರ್ಗಾ ಯಿಸಲಾಗಿದೆ. ಅಲ್ಲಿಗೆ ಪೂರ್ಣಕಾಲಿಕ ಎ.ಇ. ಬೇಕು: ಫಝÉಲ್ ಕೋಡಿಂಬಾಡಿ ಗೆಲ್ಲು ತೆರವುಗೊಳಿಸಿ
ವಿದ್ಯುತ್ ಲೈನ್ ಮೇಲೆ ಹಾದು ಹೋಗಿರುವ ಮರದ ಗೆಲ್ಲು ತೆರವುಗೊಳಿಸಿ, ಅದನ್ನು ವಿಲೇ ಮಾಡುತ್ತಿಲ್ಲ ಎಂದು ಜ್ಯೋ ಡಿ’ಸೋಜಾ, ವಿದ್ಯುತ್ ತಂತಿ ಮೇಲಿನ ಗೆಲ್ಲು ತೆರವುಗೊಳಿಸದೆ ಅಪಾಯ ಉಂಟಾಗಿದೆ ಎಂದು ಜೋಕಿಂ ಡಿ’ಸೋಜಾ ಮೊದಲಾದವರು ವಿಷಯ ಪ್ರಸ್ತಾವಿಸಿದರು. ಉತ್ತರಿಸಿದ ಅಧೀಕ್ಷಕ ಮಂಜಪ್ಪ, ಎಲ್ಲ ಉಪ ಕೇಂದ್ರಗಳ ವ್ಯಾಪ್ತಿಯಲ್ಲೂ ಮರದ ಗೆಲ್ಲು ತೆರವುಗೊಳಿಸಿ, ಅದನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.