Advertisement

ವಿದ್ಯುಚ್ಛಕ್ತಿ ಬಳಕೆ ಪ್ರಮಾಣ 35 ವರ್ಷಗಳಲ್ಲೇ ಕನಿಷ್ಠ!

01:34 AM Apr 02, 2021 | Team Udayavani |

ಹೊಸದಿಲ್ಲಿ: ಮಾರ್ಚ್‌ಗೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ಭಾರತದ ವಾರ್ಷಿಕ ವಿದ್ಯುಚ್ಛಕ್ತಿ ಬಳಕೆ ಪ್ರಮಾಣವು ಕಳೆದ 35 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕಿಳಿದಿತ್ತು!

Advertisement

ಇದಕ್ಕೆ ಕಳೆದ ವರ್ಷ ಹೇರಲಾಗಿದ್ದ ಕೋವಿಡ್ ಲಾಕ್‌ ಡೌನ್‌ ಕಾರಣ ಎಂದು ಸರಕಾರದ ದತ್ತಾಂಶಗಳನ್ನು ಉಲ್ಲೇಖೀಸಿ ರಾಯಿಟರ್ಸ್‌ ವಿಶ್ಲೇಷಿಸಿದೆ.

ಕೋವಿಡ್ ದೇಶವ್ಯಾಪಿ ನಿರ್ಬಂಧದಿಂದಾಗಿ ಕಳೆದ ಆಗಸ್ಟ್‌ ತಿಂಗಳವರೆಗೆ ಸತತ 6 ತಿಂಗಳ ಕಾಲ ವಿದ್ಯುತ್‌ ಉತ್ಪಾದನೆ ಕುಂಠಿತಗೊಂಡ ಹಿನ್ನೆಲೆಯಲ್ಲಿ, ಹಿಂದಿನ ವರ್ಷಕ್ಕೆ ಹೋಲಿಸಿದರೆ 2020-21ರಲ್ಲಿ ದೇಶದ ವಿದ್ಯುತ್ಛಕ್ತಿ ಉತ್ಪಾದನೆ ಕೂಡ ಶೇ. 0.2ರಷ್ಟು ಇಳಿಕೆಯಾಗಿತ್ತು. ಲಾಕ್‌ ಡೌನ್‌ ತೆರವಾಗುತ್ತಿದ್ದಂತೆ, ಮತ್ತೆ ಬೇಡಿಕೆ ಹೆಚ್ಚಳವಾಗಿದ್ದು, ಮಾರ್ಚ್‌ ವೇಳೆಗೆ ವಿದ್ಯುತ್‌ ಉತ್ಪಾದನೆ ಶೇ. 23.3ರಷ್ಟು ಹೆಚ್ಚಳವಾಯಿತು ಎಂದೂ ದತ್ತಾಂಶ ತಿಳಿಸಿದೆ.

ಹಿಂದಿನ 6 ತಿಂಗಳುಗಳಿಗೆ ಹೋಲಿಸಿದರೆ ಮಾರ್ಚ್‌ ತಿಂಗಳಲ್ಲಿ ವಿದ್ಯುತ್‌ ಉತ್ಪಾದನೆಯ ವೇಗವು ಹೆಚ್ಚಾಗಿತ್ತು. ಕೈಗಾರಿಕಾ ಚಟುವಟಿಕೆಗಳು ಚೇತರಿಕೆ ಕಂಡಿದ್ದು ಹಾಗೂ ಉತ್ತರ ಭಾರತದಲ್ಲಿ ಮಾರ್ಚ್‌ ವೇಳೆಗೆ ತಾಪಮಾನ ಹೆಚ್ಚಳವಾದ ಕಾರಣ ಹವಾನಿಯಂತ್ರಿತ ಯಂತ್ರಗಳ ಬಳಕೆ ಹೆಚ್ಚಾಗಿದ್ದು ಇದಕ್ಕೆ ಕಾರಣ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next