Advertisement

ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಬಿಲ್‌ ಪಾವತಿ ಗೊಂದಲ

01:36 PM Apr 15, 2020 | sudhir |

ಮುಂಡಾಜೆ: ಲಾಕ್‌ಡೌನ್‌ ಆದೇಶದ ಕಾರಣ ಬ್ಯಾಂಕ್‌, ಸಹಕಾರ ಸಂಘ, ಅಂಚೆ ಕಚೇರಿ, ಎಲ್‌ಐಸಿ ಮೊದಲಾದ ಸೇವೆಗಳು ಗ್ರಾಹಕರ ಬಾಕಿ ಪಾವತಿಯ ಅವಧಿಯನ್ನು ವಿಸ್ತರಿಸಿವೆ. ಆದರೆ ಅವಧಿ ವಿಸ್ತರಿಸದಿರುವ ವಿದ್ಯುತ್‌ ಬಿಲ್‌ ಪಾವತಿಗೆ ಈಗ ತೀವ್ರ ಸಮಸ್ಯೆಯಾಗಿದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಈ ಸಮಸ್ಯೆಯು ಗಂಭೀರವಾಗಿದೆ.

Advertisement

ಪಾವತಿ ವಿಧಾನಗಳು
ಮೆಸ್ಕಾಂ ಕಚೇರಿಗಳ ಎ.ಟಿ.ಪಿ. ಮೆಷಿನ್‌ ಮೂಲಕ, ಪಂಚಾಯತ್‌ ಮಟ್ಟದಲ್ಲಿ ಪ್ರತಿ ತಿಂಗಳಿಗೆ ಒಂದು ಅಥವಾ ಎರಡು ಬಾರಿ, ಪೇಟಿಯಂ ಮೂಲಕ, ಮೆಸ್ಕಾಂ ಟಿ.ಆರ್‌.ಎಂ. ಮೂಲಕ, ಅಂಚೆ ಕಚೇರಿ ಮೂಲಕ ಈ ಹಿಂದೆ ವಿದ್ಯುತ್‌ ಬಿಲ್‌ ಪಾವತಿ ವ್ಯವಸ್ಥೆ ಇತ್ತು. ಇದರಲ್ಲಿ ಹಳ್ಳಿಯ ಜನ ಹೆಚ್ಚು ಅವಲಂಬಿಸುತಿದ್ದುದು ಪಂಚಾಯತ್‌ ಮಟ್ಟದ ಬಿಲ್‌ ಪಾವತಿ ವ್ಯವಸ್ಥೆಯನ್ನು. ಈಗ ಲಾಕ್‌ಡೌನ್‌ ಕಾರಣ ಈ ವ್ಯವಸ್ಥೆಯನ್ನು ನಿಲ್ಲಿಸಲಾಗಿದೆ. ಯಾವಾಗ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವರೋ ಎಂದು ಹೆದರಿರುವ ಬಳಕೆದಾರರು ಬಿಲ್‌ ಕಟ್ಟಲು ಪರದಾಡುತ್ತಿದ್ದಾರೆ.

ಮೆಸ್ಕಾಂ ಕಚೇರಿಯ ಎ.ಟಿ.ಪಿ. ಮೆಷಿನ್‌ಗಳಲ್ಲಿ ಬೆಳಗ್ಗೆ 9ರ ಬಳಿಕ ಮಧ್ಯಾಹ್ನ 12ರ ತನಕ ಬಿಲ್‌ ಪಾವತಿಸಬಹುದು. ಆದರೆ ಇಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದು, ನೆಟ್‌ವರ್ಕ್‌ ಕೈಕೊಡು ವುದು ಇತ್ಯಾದಿ ಸಮಸ್ಯೆಗಳು ಎದುರಾ ಗುತ್ತಿವೆ. ಹಳ್ಳಿಯ ಹೆಚ್ಚಿನ ಬಳಕೆದಾರರಿಗೆ ಇದನ್ನು ಬಳಸುವ ವಿಧಾನ ತಿಳಿದಿಲ್ಲ. ಪೇಟಿಯಂ, ಮೆಸ್ಕಾಂ ಟಿ.ಆರ್‌.ಎಂ. ಮೂಲಕ ಪಾವತಿ ಹಳ್ಳಿಯ ಜನತೆಗೆ ಅರ್ಥವಾಗದ ವಿಚಾರವಾಗಿದೆ. ಏಕೆಂದರೆ ಹೆಚ್ಚಿನ ಜನರಲ್ಲಿ ಸ್ಮಾರ್ಟ್‌ಫೋನ್‌ಗಳಿಲ್ಲ. ಇದ್ದರೂ ಪಾವತಿ ವಿಧಾನ ಗೊತ್ತಿಲ್ಲ. ಅಂಚೆ ಕಚೇರಿ ಮೂಲಕ ಪಾವತಿಸಬೇಕಾದರೆ ಕೆಲವು ಕಡೆ ಅಂಚೆ ಕಚೇರಿಗೆ ಹೋಗಿ ಬರಲು ಹತ್ತಿಪ್ಪತ್ತು ಕಿ.ಮೀ.ದೂರವನ್ನು ಕ್ರಮಿಸಬೇಕು. ಅಲ್ಲಿ ಹೋದರೆ ಅಲ್ಲೂ ನೆಟ್‌ವರ್ಕ್‌ನ ಸಮಸ್ಯೆ ಎದುರಾಗುತ್ತಿದ. ಹಾಗಾಗಿ ಎರಡೆರಡು ಬಾರಿ ತೆರಳಬೇಕಾಗಿ ಬರುತ್ತದೆ.

ಮೆಸ್ಕಾಂನವರು ಈ ಸಮಸ್ಯೆಗಳನ್ನು ಅರಿತು ವಿದ್ಯುತ್‌ ಬಳಕೆದಾರರಿಗೆ ಸೂಕ್ತ ವ್ಯವಸ್ಥೆಯನ್ನು ಮಾಡಿ ಗೊಂದಲವನ್ನು ನಿವಾರಿಸುವುದು ಅಗತ್ಯವಾಗಿದೆ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಹೋಗಿ ಬರಲು ವಾಹನ ವ್ಯವಸ್ಥೆ ಇಲ್ಲ
ಬೆಳಗ್ಗೆ 7ರಿಂದ 12ರ ತನಕ ಸಿಗುವ ಸಮಯದಲ್ಲಿ ಮನೆಯಿಂದ ದೂರದಲ್ಲಿರುವ ವಿದ್ಯುತ್‌ ಬಿಲ್‌ ಪಾವತಿ ಕೇಂದ್ರಗಳಿಗೆ ಹೋಗಿ ಬರಲು ವಾಹನ ವ್ಯವಸ್ಥೆ ಇಲ್ಲ, ಇದರಿಂದ ಬಿಲ್‌ ಪಾವತಿ ಮಾಡಲಾಗುತ್ತಿಲ್ಲ.
– ಡೀಕಯ್ಯ, ವಿದ್ಯುತ್‌ ಬಳಕೆದಾರ, ನೆರಿಯ

Advertisement
Advertisement

Udayavani is now on Telegram. Click here to join our channel and stay updated with the latest news.

Next